ಅಂತರಾಷ್ಟ್ರೀಯ

ಯುವ ಜೋಡಿಗಳು ಬಿಲ್ಡಿಂಗ್ ಮೇಲೆ ಪ್ರಾಣವನ್ನ ಲೆಕ್ಕಿಸದೇ ಮಾಡಿದ ಭಯಾನಕ ಸಾಹಸ ನೋಡಿ…!

Pinterest LinkedIn Tumblr

https://youtu.be/gVYWKvx67fo

ಬೀಜಿಂಗ್: ಬಹುದೊಡ್ಡ ಬಿಲ್ಡಿಂಗ್‍ಗಳ ಮೇಲೆ ಸಾಹಸ ಮಾಡೋದು ಅತ್ಯಂತ ಡೇಂಜರಸ್. ಎಷ್ಟೋ ಮಂದಿ ಸಾಹಸಿಗರು ಸಾಹಸ ಮಾಡಲು ಹೋಗಿ ಕೈ ಕಾಲು ಮುರಿದುಕೊಂಡಿದ್ದಾರೆ. ಆದ್ರೆ ಚೀನಾದಲ್ಲಿ ಯುವ ಜೋಡಿಗಳು ಬಿಲ್ಡಿಂಗ್ ಮೇಲೆ ಬ್ಯಾಲೆನ್ಸ್ ಮಾಡಿರುವುದಲ್ಲದೇ ಪ್ರಾಣವನ್ನ ಲೆಕ್ಕಿಸದೇ ಭಯಾನಕ ಸಾಹಸ ಮಾಡಿದ್ದಾರೆ.

ಹೌದು. ಚೀನಿ ನಗರದಲ್ಲಿ ಯುವ ಜೋಡಿಗಳು ಎತ್ತರದ ಬಿಲ್ಡಿಂಗ್ ಮೇಲೆ ಸಾಹಸ ಮಾಡಿದ್ದು, ಎಂತವರನ್ನ ಭಯ ಹುಟ್ಟಿಸುತ್ತದೆ. ಯುವಕ ಕೈ ಹಿಡಿದು ಎತ್ತರದ ಬಿಲ್ಡಿಂಗ್ ಮೇಲೆ ಒಂದೇ ಕಾಲಿನಲ್ಲಿ ಯುವತಿ ಬಾಲೆನ್ಸ್ ಮಾಡೋದನ್ನ ನೋಡಿದ್ರೆ ಎಂತವರಲ್ಲೂ ಭಯ ಹುಟ್ಟಿಸುತ್ತದೆ.

ಎತ್ತರದ ಬಿಲ್ಡಿಂಗ್ ಏರಿರುವ ಈ ಯುವ ಜೋಡಿ ಅದರ ಮೇಲೆ ನಿಂತು ವಿವಿಧ ರೀತಿಯ ಸಾಹಸ ಮಾಡಿದ್ದಾರೆ. ಒಂದೆಡೆ ಯುವತಿ ಗಾಜಿನ ಬಿಲ್ಡಿಂಗ್ ಮೇಲೆ ವೇಗವಾಗಿ ಓಡುತ್ತ ಸಾಹಸ ಮಾಡಿದ್ರೆ, ಇನ್ನೊಂದೆಡೆ ಯುವಕ ಆಕೆಯನ್ನ ಎತ್ತಿಕೊಂಡು ಸುತ್ತಿದ್ದಾನೆ. ಇವರಿಬ್ಬರ ಈ ಸಾಹಸದಲ್ಲಿ ಸ್ವಲ್ಪವೂ ಆಯತಪ್ಪಿದ್ರು ಜೀವಂತವಾಗಿ ಸಿಗುತ್ತಿರಲಿಲ್ಲ.

Comments are closed.