ಅಂತರಾಷ್ಟ್ರೀಯ

ಒಮ್ಮೆಲೇ ಬೀಸಿದ ಬಿರುಗಾಳಿಗೆ ಏನಾಗುತ್ತೆ ನೋಡಿ….

Pinterest LinkedIn Tumblr

https://youtu.be/kmjXUKz-vdg

ಮಾಸ್ಕೋ: ಗಾಳಿ ಬಂದ್ರೆ ಯಾರು ಅದರ ಎದುರು ನಿಲ್ಲೋಕಾಗಲ್ಲ. ಇದೇ ರೀತಿಯ ಘಟನೆ ರಷ್ಯಾದಲ್ಲಿ ನಡೆದಿದ್ದು, ಸುಳಿವಿಲ್ಲದೇ ಬಂದ ಸುಂಟರಗಾಳಿಗೆ ಅಪಾರ್ಟ್‍ವೊಂದರ ಜನ ತತ್ತರಿಸಿದ್ದಾರೆ.

ರಷ್ಯಾದ ನಗರದಲ್ಲಿ ಅಪಾರ್ಟ್‍ಮೆಂಟ್‍ಗಳಿರುವ ಪ್ರದೇಶದಲ್ಲಿ ಹಠಾತ್ತನೇ ಬಿರುಗಾಳಿ ಬಂದಿದ್ದು, ಮಕ್ಕಳು, ದೊಡ್ಡವರು ನೆಲದ ಮೇಲೆ ನಿಲ್ಲಲು ಹೆಣಗಾಡಿದ್ದಾರೆ. ವಾಹನ ಸವಾರರು ಕೂಡ ಒಂದು ಕ್ಷಣ ಕಂಗಾಲಾಗಿದ್ದಾರೆ.

ಈ ಘಟನೆ ಕಾರೊಂದರ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದ್ದು, ಅಪಾರ್ಟ್‍ಮೆಂಟ್‍ನ ಆವರಣದಲ್ಲಿ ಸೈಕಲ್ ಆಡುತ್ತಿದ್ದ ಬಾಲಕರು ಗಾಳಿಗೆ ತತ್ತರಿಸಿದ್ದು, ಬಾಲಕನೊಬ್ಬನ ಸೈಕಲ್ ಬಿದ್ದರೆ, ಆತ ಗಾಳಿಯಲ್ಲಿ ನಿಲ್ಲಲಾಗದೇ ಇನ್ನೊಂದು ಪ್ರದೇಶಕ್ಕೆ ತೇಲಿಕೊಂಡು ಹೋಗಿದ್ದಾನೆ. ಇನ್ನೊಬ್ಬ ತಾಯಿ ತನ್ನ ಮಗನನ್ನ ಗಾಳಿಯಿಂದ ರಕ್ಷಣೆಮಾಡಿರುವ ಭಯಾನಕ ದೃಶ್ಯಗಳು ಕಂಡುಬಂದಿದೆ.

Comments are closed.