ಅಂತರಾಷ್ಟ್ರೀಯ

ಮದುವೆಯಾದದ್ದೇ ತಡ ಕಂಪ್ಯೂಟರ್ ಗೇಮ್ ಆಡೋಕೆ ಶುರು ಮಾಡಿ ಅಚ್ಚರಿ ಮೂಡಿಸಿದ ಜೋಡಿ…ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/HcudMj_WHwg

ಬೀಜಿಂಗ್: ಮದುವೆಯಾದ ನಂತರ ನವ ವಧುವರರು ತಮ್ಮ ಹೊಸ ಜೀವನದ ಕನಸು ಕಾಣ್ತಾ ತೇಲಾಡ್ತಿರ್ತಾರೆ. ಆದರೆ ಇಲ್ಲೊಂದು ಜೋಡಿ ಮದುವೆಯಾದದ್ದೇ ತಡ ಕಂಪ್ಯೂಟರ್ ಗೇಮ್ ಆಡೋಕೆ ಸೈಬರ್ ಕೆಫೆಗೆ ಹೋಗಿ ಅಚ್ಚರಿ ಮೂಡಿಸಿದ್ದಾರೆ.

ಚೀನಾದ ಝೀಬೋದಲ್ಲಿ ಈ ಘಟನೆ ನಡೆದಿದ್ದು, ನವವಧುವರರು ತಮ್ಮ ಮದುವೆಯ ಉಡುಗೆಯಲ್ಲೇ ಬೀರ್ ಹೀರುತ್ತಾ ಗೇಮ್ ಆಡುತ್ತಿರುವುದನ್ನ ವಿಡಿಯೋದಲ್ಲಿ ನೋಡಬಹುದು. ಈ ಇಬ್ಬರೂ ಮದುವೆಯಾದ ತಕ್ಷಣ ಕಂಪ್ಯೂಟರ್ ಗೇಮ್ ಆಡಬೇಕೆಂದು ಮೊದಲೇ ನಿಶ್ಚಯಿಸಿದ್ರೋ ಅಥವಾ ಅಚಾನಕ್ಕಾಗಿ ಪ್ಲಾನ್ ಮಾಡಿದ್ರೋ ಅನ್ನೋ ಬಗ್ಗೆ ಮಾಹಿತಿಯಿಲ್ಲ.

ವಧುವರರು ಗೇಮ್ ಆಡೋದ್ರಲ್ಲಿ ಎಷ್ಟು ತ್ಲಲೀನರಾಗಿದ್ರೂ ಅಂದ್ರೆ ಒಬ್ಬರನೊಬ್ಬರು ಮಾತನಾಡಿಸ್ದೆ ಕಂಪ್ಯೂಟರ್ ಪರದೆಯನ್ನೇ ದಿಟ್ಟಿಸುತ್ತಾ ಗೇಮ್ ಆಡ್ತಿದ್ರು.

Comments are closed.