ಮನೋರಂಜನೆ

ಎಆರ್ ರಹಮಾನ್ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ ಕೊಹ್ಲಿ !

Pinterest LinkedIn Tumblr

ನವದೆಹಲಿ: ಕ್ರಿಕೆಟ್‍ನಷ್ಟೇ ಹಾಡು, ಡಾನ್ಸ್‍ನಲ್ಲಿ ಕ್ರೇಜ್ ಹೊಂದಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫುಟ್ಸಾಲ್ ಲೀಗ್‍ನಲ್ಲಿ ಹಾಡಿನ ವಿಡಿಯೋದಲ್ಲಿ ಸಖತ್ ಆಗಿ ಸ್ಟೆಪ್ ಹಾಕಿ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಗೀತ ಮಾಂತ್ರಿಕ ಎಆರ್ ರಹಮಾನ್ ಜೊತೆಯಲ್ಲಿ ಹಾಡು ಹಾಡಿರುವ ವಿರಾಟ್ ಕೊಹ್ಲಿ ಕೂಲಾಗಿ ಡಾನ್ಸ್ ಕೂಡ ಹಾಕಿದ್ದಾರೆ. ಪ್ರಿಮಿಯರ್ ಫುಟ್ಬಾಲ್ ಲೀಗ್‍ಗೆ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ, ಫುಟ್ಬಾಲ್ ಥೀಮ್ ಸಾಂಗ್ ಮೇಕಿಂಗ್‍ನಲ್ಲಿ ಸಿಕ್ಕಾಪಟ್ಟೆ ಏಂಜಾಯ್ ಮಾಡುತ್ತಿದ್ದಾರೆ.

ಎಆರ್ ರಹಮಾನ್ ಅವರ ಜೊತೆಗೆ ಢಿಪರೆಂಟ್ ಲುಕ್‍ನಲ್ಲಿ ಮಿಂಚಿರುವ ಕೊಹ್ಲಿ ತಾವೇ ಹಾಡಿರುವ ಕೊಹ್ಲಿ ಹಿಪ್ ಸ್ಟೈಲ್‍ನ ಸ್ಟೆಪ್ ಹಾಕಿದ್ದು, ಕಪ್ಪು ಬಣ್ಣದ ಉಡುಪಿನಲ್ಲಿ, ಕಣ್ಣಿಗೆ ಗಾಗಲ್ಸ್ ಹಾಕೊಂಡು ಸ್ಟೈಲಿಶ್ ಸ್ಟಾರ್ ಆಗಿಬಿಟ್ಟಿದ್ದಾರೆ.

Comments are closed.