ಅಂತರಾಷ್ಟ್ರೀಯ

ವಿಮಾನದ ರೆಕ್ಕೆಯಲ್ಲಿ ಭಾರಿ ಬೆಂಕಿ; ಕೂದಲೆಳೆ ಅಂತದರಲ್ಲಿ ಸಾವಿನಿಂದ ಬಚಾವಾದೆ ಜನ ! ಪ್ರಯಾಣಿಕನಿಂದಲೇ ವೀಡಿಯೊ ಚಿತ್ರೀಕರಣ

Pinterest LinkedIn Tumblr

https://youtu.be/9FE55xvlack

ಸಿಂಗಪುರ್: ತಾಂತ್ರಿಕ ದೋಷದಿಂದಾಗಿ ಸಿಂಗಪುರ್ ಏರ್‍ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಚಾಂಗಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಎಸ್‍ಕ್ಯೂ368 ವಿಮಾನ ಚಾಂಗಿ ವಿಮಾನ ನಿಲ್ದಾಣದಿಂದ ಮಿಲಾನ್‍ಗೆ ಹೊರಟಿತ್ತು. ಟೇಕ್ ಆಫ್ ಆದ 2ಗಂಟೆಗಳ ನಂತರ ವಿಮಾನದ ಬಲ ಭಾಗದ ಎಂಜಿನ್‍ನಲ್ಲಿ ಸಮಸ್ಯೆಯುಂಟಾಗಿದೆ ಎಂದು ಪೈಲೆಟ್ ತಿಳಿಸಿದ್ರು. ಹೀಗಾಗಿ ವಿಮಾನ ವಾಪಸ್ ಸಿಂಗಪುರ್‍ಗೆ ಹಿಂದಿರುಗಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಬೇಕಾಯ್ತು. ಲ್ಯಾಂಡಿಂಗ್ ಮಾಡುವ ವೇಳೆ ವಿಮಾನದ ರೆಕ್ಕಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಅದೃಷ್ಟವಶಾತ್ ವಿಮಾನದಲ್ಲಿದ್ದ 19 ಮಂದಿ ಸಿಬ್ಬಂದಿ ಹಾಗೂ 222 ಮಂದಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಈ ಘಟನೆಯನ್ನು ಸಾಕ್ಷೀಕರಿಸಿದ ಪ್ರಯಾಣಿಕರಾದ ಲೀ ಬೀ ಯೀ ವಿಮಾನದ ರೆಕ್ಕೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ವಿಡಿಯೋ ಮಾಡಿದ್ದು, ಕೂದಲೆಳೆ ಅಂತದರಲ್ಲಿ ಸಾವಿನಿಂದ ಬಚಾವಾದೆ ಅಂತ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಲೀ ಬೀ ವಿಂಡೋ ಸೀಟ್‍ನಿಂದ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ವಿಮಾನದ ರೆಕ್ಕೆ ಬೆಂಕಿಯಲ್ಲಿ ಹೊತ್ತುರಿಯುತ್ತಿರುವುದನ್ನು ನೋಡಬಹುದು. ಆ 5 ನಿಮಿಷ ನಿಜಕ್ಕೂ ಭಯಂಕರವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ನೀರು ಮತ್ತು ಫೋಮ್ ಬಳಸಿ ಬೆಂಕಿಯನ್ನು ನಂದಿಸಿದ್ರು. ನಾವು ಸಾವಿಗೆ ತುಂಬಾ ಹತ್ತಿರವಿದ್ದೆವು ಅಂತ ಲೀ ಬೀ ತನ್ನ ಭೀಕರ ಅನುಭವವನ್ನ ಫೇಸ್‍ಬುಕ್‍ನಲ್ಲಿ ವಿವರಿಸಿದ್ದಾರೆ.

Comments are closed.