ಮುಂಬೈ

ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯಲ್ಲಿಯೇ ವಿದ್ಯಾರ್ಥಿನಿಯಿಂದ ರಂಪಾಟ ! ಏನೆಲ್ಲಾ ಮಾಡಿದಳು ಎಂಬುದನ್ನು ಈ ವೀಡಿಯೋದಲ್ಲಿ ನೋಡಿ

Pinterest LinkedIn Tumblr

https://youtu.be/87U2XxDo4bg

ಮುಂಬೈ: ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯೊಬ್ಬಳು ವಾರ್ಲಿ ಪೊಲೀಸ್ ಠಾಣೆಯಲ್ಲಿ ರಂಪಾಟ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವಾರ ಫುಟ್‍ಪಾತ್ ಮೇಲೆ ಕಾರನ್ನು ಓಡಿಸಿದ್ದಕ್ಕಾಗಿ ಆರ್ಕಿಟೆಕ್ಟ್ ವಿದ್ಯಾರ್ಥಿನಿ ಗೌರಿ ಬಿಡೆ ಮತ್ತು ಆಕೆಯ ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆ ತಂದಿದ್ದರು.

ಠಾಣೆಗೆ ಬಂದಿದ್ದೆ ತಡ ಹುಚ್ಚ ಹುಚ್ಚರಾಗಿ ಆಡತೊಡಗಿದ ಗೌರಿ ಬಿಡೆ, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಕಂಪ್ಯೂಟರ್‍ನ್ನು ದೂಡಿ ಕೆಳಗಡೆ ಬೀಳಿಸಿದ ಈಕೆ ಅಲ್ಲಿದ್ದ ಫೋನ್‍ಗಳನ್ನು ಎತ್ತಿ ಬೀಸಾಕಿದ್ದಾಳೆ. ಈಕೆಯ ಜೊತೆಗೆ ಬಂದಿದ ಸ್ನೇಹಿತರು ಹಿಡಿದು ನಿಯಂತ್ರಿಸುತ್ತಿದ್ದರೂ ಗೌರಿ ಮಾತ್ರ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ.

ಪೊಲೀಸರು ಸೆಕ್ಷನ್ 279, 332, 353,27, 34 ಅಡಿ ಪ್ರಕರಣ ದಾಖಲಿಸಿದ್ದಾರೆ. ಈಕೆ ಹುಚ್ಚಾಟದ ವಿಡಿಯೋ ಈಗ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

Comments are closed.