ಅಂತರಾಷ್ಟ್ರೀಯ

ಸ್ವಿಮ್ಮಿಂಗ್ ಪೂಲ್ ಗೆ ಬರೋಬ್ಬರಿ 5 ಸಾವಿರ ಲೀಟರ್ ಕೋಕ ಕೋಲಾ ಹಾಕಿ ಈಜಾಡಿದ ವ್ಯಕ್ತಿಯ ಸಂಭ್ರಮ ನೋಡಿ…

Pinterest LinkedIn Tumblr

ಕ್ಯಾಲಿಫೋರ್ನಿಯಾ: ಸ್ವಿಮ್ಮಿಂಗ್ ಪೂಲ್‍ನಲ್ಲಿ ಈಜಾಡುತ್ತ, ಜೊತೆಗೆ ತಂಪು ಪಾನೀಯವನ್ನ ಸವಿಯುತ್ತ ಕಾಲಕಳೆಯೋಕೆ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪೂಲ್ ಟಬ್‍ನ ತುಂಬೆಲ್ಲಾ ತಂಪು ಪಾನೀಯ ಹಾಕಿ ಈಜಾಡಿದ್ದಾನೆ.

ಹೌದು. ಕ್ಯಾಲಿಫೋರ್ನಿಯಾ ನಿವಾಸಿಯೊಬ್ಬ ಸ್ವಿಮ್ಮಿಂಗ್ ಪೂಲ್(ಪೂಲ್‍ ಟಬ್)ನಲ್ಲಿ ಕೊಕ ಕೋಲಾ ಹಾಕಿ ಅದರಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಇದಕ್ಕಾಗಿ ಬರೋಬ್ಬರಿ 1500 ಗ್ಯಾಲನ್( ಅಂದಾಜು 5678 ಲೀಟರ್) ಕೋಕ ಕೋಲಾ ಬಳಕೆ ಮಾಡಿದ್ದು, ಅಷ್ಟು ಕೋಕ ಕೋಲಾವನ್ನ ಪೂಲ್‍ಗೆ ಹಾಕಿದ್ದಾನೆ.

ಇದರ ಜೊತೆಗೆ ಆ ಪೂಲ್‍ಗೆ ಒಂದು ಬಕೆಟ್‍ನಷ್ಟು ಮೆಂಟೋಸ್ ರೀಫ್ರೆಷ್‍ಮೆಂಟ್ ಚಾಕ್ಲೆಟ್ ಹಾಕಿದ್ದಾನೆ. ಇದರಿಂದ ಕೋಕ ಕೋಲಾದಲ್ಲಿ ನೊರೆಗಳು ಮೂಡಿದೆ. ಇದಾದ ಬಳಿಕ ಪೂಲ್‍ಗೆ ಯುವಕ ಬ್ಯಾಗ್‍ಗಟ್ಟಲೆ ಐಸ್‍ಕ್ಯೂಬ್‍ಗಳನ್ನ ಹಾಕಿದ್ದಾನೆ. ಕೆಲಹೊತ್ತಿನ ಬಳಿಕ ಆತ ಪೂಲ್‍ಗೆ ಹಾರಿ ಏಂಜಾಯ್ ಮಾಡಿದ್ದಾನೆ.

Comments are closed.