ಅಂತರಾಷ್ಟ್ರೀಯ

ಇಲ್ಲೊಬ್ಬ ಭೂಪ ಸ್ಮಾರ್ಟ್‍ಫೋನ್ ಜೊತೆಗೆ ಅದ್ಧೂರಿಯಾಗಿ ಮದುವೆಯಾದ ! ಈ ವೀಡಿಯೊ ನೋಡಿ…

Pinterest LinkedIn Tumblr

ಲಾಸ್ ಏಂಜಲೀಸ್: ಪ್ರೀತಿಯಿಂದ ಸಾಕಿದ ನಾಯಿಯನ್ನ, ಬೆಕ್ಕನ್ನ ಮದುವೆಯಾಗಿರೋದನ್ನ ಕೇಳಿದ್ದೀರ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ಮಾರ್ಟ್‍ಫೋನ್‍ನನ್ನೇ ಮದುವೆಯಾಗಿದ್ದಾನೆ.

ಹೌದು. ಆಶ್ಚರ್ಯವಾದ್ರೂ ಇದು ನಿಜ. ಅಮೆರಿಕದ ಲಾಸ್ ಏಂಜಲೀಸ್‍ನ ನಿವಾಸಿ ಆರನ್ ಚೆರ್ವೆನಕ್ ಎಂಬಾತ ತನ್ನ ಸ್ಮಾರ್ಟ್ ಜೊತೆಗೆ ವಿವಾಹವಾಗಿದ್ದಾನೆ. ವಿಚಿತ್ರವೆಂದ್ರೆ ಸಂಗಾತಿಯೊಂದಿಗೆ ತೆಗೆದುಕೊಳ್ಳುವ ಮದುವೆಯ ಎಲ್ಲಾ ಪ್ರತಿಜ್ಞೆ, ಪ್ರಮಾಣವನ್ನ ಮಾಡಿದ್ದಾನೆ.

ಹುಡುಗಿಯನ್ನೇ ಮದುವೆಯಾಗುವಂತೆ ಈತ ಸ್ಮಾರ್ಟ್‍ಫೋನ್ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದು, ಲಾಸ್ ಏಂಜಲೀಸ್‍ನಿಂದ ಲಾಸ್ ವೇಗಸ್‍ಗೆ ಮದುವೆ ಸಮಾರಂಭಕ್ಕಾಗಿ 365 ಕಿಮೀ ಪ್ರಯಾಣ ಬೆಳೆಸಿರುವುದು ವಿಶೇಷವಾಗಿದೆ.

ಸ್ಮಾರ್ಟ್‍ಫೋನ್‍ನೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾನೆ. ಹೀಗಾಗಿ ಅದರ ಜೊತೆಗೆ ನನಗೆ ಮುರಿಯದ ಸಂಬಂಧ ವೃದ್ಧಿಯಾಗಿದೆ. ನನ್ನ ಮತ್ತು ಸ್ಮಾರ್ಟ್‍ಫೋನ್‍ನ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ನಾನು ಅದನ್ನು ಮದುವೆಯಾಗಿರುವುದಾಗಿ ಆರ್‍ನ್ ಹೇಳಿದ್ದಾನೆ.

Comments are closed.