ಅಂತರಾಷ್ಟ್ರೀಯ

ಯುವತಿಯನ್ನು ರೇಪ್ ಮಾಡಿ ಜೀವಂತವಾಗೇ ಸೂಟ್‍ಕೇಸ್‍ನಲ್ಲಿ ತುಂಬಿ ಪಾರ್ಕ್‍ನಲ್ಲಿ ಎಸೆದುಹೋದ ಕಾಮುಕ…ಇಲ್ಲಿದೆ ವೀಡಿಯೊ…

Pinterest LinkedIn Tumblr

ಬೀಜಿಂಗ್: ವ್ಯಕ್ತಿಯೊಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿ, ನಂತರ ಜೀವಂತವಾಗಿಯೇ ಆಕೆಯನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಹತ್ತಿರದ ಪಾರ್ಕ್‍ನಲ್ಲಿ ಎಸೆದುಹೋದ ಘಟನೆ ಚೀನಾದಲ್ಲಿ ನಡೆದಿದೆ.

ಸೋಮವಾರದಂದು ಚೀನಾದ ಕ್ಸಿಯಾಂಗ್‍ಟ್ಯಾನ್ ನಗರದ ಮುಯು ಲೇಕ್ ಪಾರ್ಕ್‍ನಲ್ಲಿ ಪೊಲೀಸರು ಯುವತಿಯನ್ನು ರಕ್ಷಿಸಿದ್ದು, ಈ ವೇಳೆ ಸೂಟ್‍ಕೇಸ್‍ನಲ್ಲಿ ಆಕೆ ನಗ್ನ ಸ್ಥಿತಿಯಲ್ಲಿದ್ದಳು ಎನ್ನಲಾಗಿದೆ. ಘಟನೆಯಾದ 1 ಗಂಟೆಯ ಒಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

23 ವರ್ಷದ ಆರೋಪಿ ಪ್ಯಾನ್, ಆತನ ರೂಮ್‍ಮೇಟ್ ಆಗಿದ್ದ ಯುವತಿ ಮನೆಯಲ್ಲಿ ಒಂಟಿಯಾಗಿದ್ದಾಗ ಈ ಕೃತ್ಯವೆಸಗಿದ್ದಾನೆ. ಯುವತಿಯನ್ನು ರೇಪ್ ಮಾಡುವ ಮುನ್ನ ಪ್ರಜ್ಞೆ ತಪ್ಪುವಂತೆ ಆಕೆಯನ್ನು ಹೊಡೆದಿದ್ದಾಗಿ ಆರೋಪಿ ಪ್ಯಾನ್ ಪೊಲೀಸ್ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಅತ್ಯಾಚಾರವೆಸಗಿದ ನಂತರ ಪ್ಯಾನ್, ಯುವತಿಯನ್ನು ನಗ್ನವಾಗಿಯೇ ಸೂಟ್‍ಕೇಸ್‍ನಲ್ಲಿ ತುಂಬಿ ಮುಯು ಪಾರ್ಕ್‍ನಲ್ಲಿ ಎಸೆದುಹೋಗಿದ್ದ. ಯುವತಿಗೆ ಪ್ರಜ್ಞೆ ಬಂದ ನಂತರ ಆಕೆ ಸಹಾಯಕ್ಕಾಗಿ ಕಿರುಚಿದಾಗ ಹತ್ತಿರದಲ್ಲಿದ್ದವರು ಪೊಲೀಸರಿಗೆ ವಿಷಯ ಮುಟ್ಟಿಸಿ ನಂತರ ಆಕೆಯನ್ನು ರಕ್ಷಿಸಲಾಗಿದೆ.

ಪ್ರತ್ಯಕ್ಷದರ್ಶಿಗಳು ಚೀನಾದ ಸಮಾಜಿಕ ಜಾಲತಾಣವಾದ ವೀಬೋದಲ್ಲಿ ಈ ಘಟನೆಯ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದು, ಸಂತ್ರಸ್ತೆಗೆ ಸ್ಥಳದಲ್ಲಿದ್ದ ಯುವತಿಯರು ಸಹಾಯ ಮಾಡಿದ್ರು ಹಾಗು ವ್ಯಕ್ತಿಯೊಬ್ಬ ನಗ್ನವಾಗಿದ್ದ ಆಕೆಗೆ ತನ್ನ ಟೀ ಶರ್ಟ್ ತೆಗೆದುಕೊಟ್ಟು ಸಹಾಯ ಮಾಡಿದ್ದಾನೆ.

Comments are closed.