ಮುಂಬೈ

ಚಲಿಸುತ್ತಿರುವ ರೈಲಿನ ಟಾಪ್ ಮೇಲೆ ಭಯಾನಕ ಸಾಹಸ ಮಾಡಿದ ಯುವಕ ! ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/qQyz52VQojc

ಮುಂಬೈ: ಚಲಿಸುತ್ತಿರುವ ರೈಲಿನಲ್ಲಿ ಸಾಹಸ ಮಾಡುವುದು ಅತ್ಯಂತ ಅಪಾಯಕಾರಿ. ಅಂತಹದ್ರಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನ ಟಾಪ್ ಮೇಲೆ ಹತ್ತಿ ಭಯಾನಕ ಸಾಹಸ ಮಾಡಿದ್ದಾನೆ.

ಹೌದು. ಮುಂಬ್ರ ಸ್ಟೇಷನ್‍ನಿಂದ ಸೆಂಟ್ರಲ್ ರೈಲ್ವೆ ಲೇನ್‍ನ ಮಾರ್ಗವಾಗಿ ಸಾಗುತ್ತಿದ್ದ ರೈಲಿನ ಮೇಲೆ ಹತ್ತಿದ್ದ ಯುವಕನೊಬ್ಬ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದು, ಈತನ ಸಾಹಸ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರೈಲಿನ ಟಾಪ್ ಮೇಲೆ ನಿಂತಿದ್ದ ಯುವಕ ಹೈವೋಲ್ಟೇಜ್ ವೈಯರ್‍ನಿಂದ ತಪ್ಪಿಸಿಕೊಂಡು ಸಾಗುತ್ತಿದ್ದ ಕ್ಷಣಗಳು ಎಂತವರನ್ನ ಭಯಹುಟ್ಟಿಸುವಂತೆ ಮಾಡಿದೆ. ಒಂದು ವೇಳೆ ಆತ ಸ್ವಲ್ಪ ಹೈವೋಲ್ಟೇಜ್ ವಯರ್‍ಗೆ ತಾಗಿದ್ದರೂ ಆತನ ಸಾವು ನಿಶ್ಚಿತವಾಗಿತ್ತು.

ರೈಲ್ವೇ ಕಾಯ್ದೆ 1989ರ ಪ್ರಕಾರ ರೈಲು ಸಂಚರಿಸಬೇಕಾದರೆ ಯಾರಾದರೂ ಪ್ರಾಣಕ್ಕೆ ಅಪಾಯವಾಗಬಲ್ಲ ಸಾಹಸವನ್ನು ಪ್ರದರ್ಶಿಸಿದರೆ ಅವರಿಗೆ 500 ರೂ. ದಂಡ ಮತ್ತು 3 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

Comments are closed.