ಮನೋರಂಜನೆ

60 ಕೋಟಿ ಬಾಚಿದ ಮಹೇಶ್ ಬಾಬುರ ಶ್ರೀಮಂತುಡು!

Pinterest LinkedIn Tumblr

maheshಸ್ಟಾರ್ ಸಿನಿಮಾಗಳೇ ಹಾಗೆ. ಅಲ್ಲಿ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಂತೂ ಇರೋದಿಲ್ಲ. ಕಥೆ, ನಿರೂಪಣೆ ದೃಷ್ಟಿಯಿಂದ ಸಿನಿಮಾವೊಂದು ನಿರಾಸೆ ಮೂಡಿಸಿದರೂ ಅಭಿಮಾನಿಗಳ ಮಟ್ಟಿಗೆ ನೆಚ್ಚಿನ ನಟ-ನಟಿಯರನ್ನು ಕಣ್ತುಂಬಿಕೊಳ್ಳುವುದು ಹಬ್ಬಕ್ಕೆ ಸಮಾನ. ‘ಪ್ರಿನ್ಸ್’ ಮಹೇಶ್ ಬಾಬು ವಿಚಾರದಲ್ಲಂತೂ ಇದು ಅಕ್ಷರಶಃ ಪುನರಾವರ್ತನೆಗೊಂಡಿದೆ!

ಸಾಲು ಸಾಲು ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ಮಹೇಶ್, ‘ಶ್ರೀಮಂತುಡು’ ವಿಷಯದಲ್ಲೂ ಆ ಮಾಂತ್ರಿಕತೆ ಮರುಕಳಿಸುವಂತೆ ಮಾಡಿದ್ದಾರೆ. ಕೊರಟಾಲ ಶಿವ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾ ಮೊದಲ ವಾರಾಂತ್ಯದಲ್ಲಿ 60 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ.

ಆ. 7ರಂದು ತೆರೆಗೆ ಬಂದಿದ್ದ ಈ ಸಿನಿಮಾದ ಎಲ್ಲ ಭಾಷೆಯ ಅವತರಣಿಕೆಗಳಿಂದ ಮೊದಲ ದಿನವೇ 30 ಕೋಟಿ ರೂ. ಗಳಿಕೆಯಾಗಿತ್ತು. ಒಂದೇ ವಾರಕ್ಕೆ ಅನಾಯಾಸವಾಗಿ ಚಿತ್ರ ‘ಶತಕೋಟಿ ಬಳಗ’ ಸೇರಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.

Write A Comment