ಕರ್ನಾಟಕ

ನಿಸರ್ಗವನ್ನು ಲೂಟಿ ಮಾಡುತ್ತಾ ಬಂದಿರುವುದು ಶತಮಾನಗಳ ಇತಿಹಾಸ

Pinterest LinkedIn Tumblr

sple_photo_1

ನಿಸರ್ಗದೊಂದಿಗೆ ಆಟವಾಡಬೇಡಿ ಎಂದು ತಜ್ಞರು ಎಚ್ಚರಿಸುತ್ತಾ ಬಂದಿದ್ದರೂ ಮಾನವ ತನ್ನ ಸೌಕರ್ಯಗಳಿಗಾಗಿ ನಿಸರ್ಗವನ್ನು ಲೂಟಿ ಮಾಡುತ್ತಾ ಬಂದಿರುವುದು ಶತಮಾನಗಳಿಂದ ನೋಡುತ್ತಾ ಬಂದಿದ್ದೇವೆ. ಇದರ ಪರಿಣಾಮವಾಗಿ ಹಲವಾರು ನಿಸರ್ಗ ಪ್ರಕೋಪಗಳನ್ನು ಕಾಣಬೇಕಾಗಿದೆ. ಮಳೆಯ ಕಾಲದಲ್ಲಿ ಮಳೆಯಾಗದೇ ಆಗಬೇಕಾದ ಕಾಲದಲ್ಲಿ ಭೋರೆಂದು ಸುರಿಯುವುದು, ತ್ಸುನಾಮಿ, ಎಲ್ ನಿನೋ, ಚಂಡಮಾರುತ, ಭೂಕಂಪ ಮೊದಲಾದ ಉಗ್ರ ಪ್ರಕೋಪಗಳ ಪರಿಣಾಮವನ್ನು ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡು, ಆಸ್ತಿ ಪಾಸ್ತಿಗೆ ಹಾನಿ ಮಾಡಿಕೊಂಡು ಅನುಭವಿಸಬೇಕಾಗಿದೆ.

ಅಮೂಲ್ಯ ಜೀವಹಾನಿಯ ಜೊತೆಗೇ ಪರಂಪರೆಯ ಕುರುಹಾಗಿ ಉಳಿದು ಬಂದಿದ್ದ ಸ್ಮಾರಕಗಳೂ ಧರಾಶಾಯಿಯಾಗಿವೆ. ಕೆಲವು ಕಳೆದೇ ಹೋಗಿವೆ. ಇಂತಹ ಕಳೆದ ಸ್ಮಾರಕಗಳನ್ನು ನೋಡಬೇಕೆಂದರೆ ವರ್ಷಗಟ್ಟಲೆ, ಕೆಲವೊಮ್ಮೆ ಶತಮಾನಗಟ್ಟಲೆ ಸಮಯ ಬೇಕಾಗಬಹುದು.

ಇಂದಿನ ಲೇಖನದಲ್ಲಿ ನಿಸರ್ಗ ಪ್ರಕೋಪ ಅಥವಾ ಮಾನವನ ಕೈವಾಡದಿಂದ ನೀರಿನೊಳಗಿದ್ದರೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕೆಲವು ಕಟ್ಟಡಗಳನ್ನು ಉಲ್ಲೇಖಿಸಲಾಗಿದೆ.
ನೀರಿನ ಮಟ್ಟ ಏರುತ್ತಾ ಹೋದಂತೆ ನೀರಿನೊಳಗೆ ಅಂತರ್ಧಾನವಾಗುತ್ತಾ ಹೋದ ಈ ಕಟ್ಟಡಗಳು ಕ್ರಮೇಣ ನೀರು ಕಡಿಮೆಯಾದಂತೆ ತಮ್ಮ ಅಸ್ತಿತ್ವವನ್ನು ತೋರುತ್ತವೆ. ಇದಕ್ಕೆ ನಮ್ಮ ಕರ್ನಾಟಕದ ಉದಾಹರಣೆ ನೀಡುವುದಾದರೆ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿರುವ ದೇವಾಲಯ. ನೀರಿನ ಮಟ್ಟ ಅತ್ಯಂತ ಕಡಿಮೆಯಾದಾಗ ಇದು ಗೋಚರವಾಗುತ್ತದೆ. ಬನ್ನಿ, ವಿಶ್ವದಲ್ಲಿರುವ ಇಂತಹ ಕೆಲವು ಕಟ್ಟಡಗಳನ್ನು ನೋಡೋಣ…

ಯೂರೋಪಿನ ಮೆಸಡೋನಿಯಾ ರಾಷ್ಟ್ರದಲ್ಲಿರುವ ಮಾವ್ರೋವೋ ಎಂಬ ಬೃಹತ್ ಕೆರೆಯ ದಡದಿಂದ ಕೊಂಚವೇ ದೂರದಲ್ಲಿ ಸುಂದರ ಚರ್ಚ್ ಒಂದು ಅರ್ಧಭಾಗ ನೀರಿನಲ್ಲಿ ಮುಳುಗಿದೆ. ಇದನ್ನು ನೀರಿನಲ್ಲಿ ಮುಳುಗಿರುವಂತೇನೂ ಕಟ್ಟಿರಲಿಲ್ಲ.

sple_photo_2

ಆದರೆ ಸ್ಥಳೀಯ ವಿದ್ಯುತ್ ಸ್ಥಾವರಕ್ಕೆ ನೀರು ನೀಡಲೆಂದು ಕೃತಕವಾಗಿ ನಿರ್ಮಿಸಿದ ಈ ಕೆರೆಯ ನೀರು ತುಂಬಿಕೊಂಡು ಮೇಲೇರಿದಂತೆ ಚರ್ಚ್ ಅರ್ಧಭಾಗ ಮುಳುಗಿದೆ.

ಸುಮಾರು ಹದಿನಾರನೇ ಶತಮಾನದಲ್ಲಿ ಕೆಲವು ಪಾದ್ರಿಗಳ ತಂಡವೊಂದು ಕೈಯಾರೆ ಕಟ್ಟಿದ ಇತಿಹಾಸವಿರುವ ಈ ಚರ್ಚ್ 1966ರವರೆಗೂ ಪ್ರಮುಖ ಪ್ರಾರ್ಥನಾ ಸ್ಥಳವಾಗಿತ್ತು. ಆದರೆ 1966ರಲ್ಲಿ ಸಮೀಪದ ನೆಜಹುವಾಲ್ಕೋಯೋಟಲ್ (Nezahualcoyotl) ಎಂಬ ಸ್ಥಳದಲ್ಲಿ ಕಟ್ಟಲಾದ ಜಲಾಶಯದ ನೀರು ತುಂಬಿಕೊಳ್ಳುತ್ತಾ ಹೋದಂತೆ ಏರಿದ ನೀರಿನಲ್ಲಿ ಈ ಚರ್ಚ್ ಸಂಪೂರ್ಣವಾಗಿ ಮುಳುಗಿ ಹೋಗಿತ್ತು.

ಕಳೆದ ವರ್ಷ ಅಂದರೆ 2015ರಲ್ಲಿ ನೀರಿನ ಮಟ್ಟ ಅಪಾರವಾಗಿ ಇಳಿದು ಹಿಂದೆಂದೂ ಇಲ್ಲದ 82 ಅಡಿಗಳ ಮಟ್ಟಕ್ಕೆ ಇಳಿದಂತೆ ನಿಧಾನವಾಗಿ ಈ ಚರ್ಚ್ ಮತ್ತೆ ಪ್ರತ್ಯಕ್ಷವಾಗಿತ್ತು.

ಅರ್ಜೆಂಟೀನಾ ದೇಶದ ಲಾಗೋ ಎಪೆಕ್ಯೂಯೆನ್ ಎಂಬ ಸ್ಥಳದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರವಾಸಿಗರಿಗಾಗಿ ಒಂದು ಪಟ್ಟಣವನ್ನು ಸ್ಥಾಪಿಸಲಾಗಿತ್ತು. ಆದರೆ ನಿಧಾನವಾಗಿ ಈ ಪ್ರದೇಶವನ್ನು ಆವರಿಸಿದ ಪ್ರವಾಹದ ನೀರು ಈ ಪ್ರದೇಶದ ಬಹಳಷ್ಟು ಸ್ಥಳವನ್ನು ಸುಮಾರು ಹತ್ತು ಮೀಟರ್ ಆಳದ ನೀರಿನಲ್ಲಿ ಮುಳುಗಿಸಿತು. ಇದರಲ್ಲಿ ಈ ಪಟ್ಟಣವೂ ನೀರಿನಲ್ಲಿ ಮುಳುಗಿತು. ಇತ್ತೀಚೆಗೆ ನೀರು ಕಡಿಮೆಯಾದಂತೆ ಈ ಪಟ್ಟಣ ಮತ್ತೊಮ್ಮೆ ಗೋಚರಿಸಿದೆ.

ಚೀನಾದಲ್ಲಿರುವ ಮುವೋಡಾವೋಕ್ಸಿ ನದಿಯ ಖನಿಜಭಾಗದಲ್ಲಿರುವ ಜಾರ್ಜಸ್ ಜಲಾಶಯಕ್ಕೆ ಪ್ರತಿವರ್ಷ ಲಕ್ಷಾಂತರ ಚೀನೀಯರು ಭೇಟಿ ನೀಡುತ್ತಾರೆ. ಏಕೆಂದರೆ ಈ ಪ್ರದೇಶದಲ್ಲಿ ಆಮೆಯಾಕಾರದ ದ್ವೀಪವೊಂದಿದ್ದು ಇದು ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ನೀರಿನಿಂದ ಮೇಲಕ್ಕೆ ಗೋಚರಿಸುತ್ತದೆ. ವಾಸ್ತವವಾಗಿ ಈ ದ್ವೀಪ ನೈಸರ್ಗಿಕವಲ್ಲ, ಬದಲಿಗೆ ಜಲಾಶಯದ ನೀರಿನ ಮಟ್ಟವನ್ನು ನಿಯಂತ್ರಿಸಲು ಮಾನವರೇ ನಿರ್ಮಿಸಿದ ಕೃತಕ ದ್ವೀಪ.

ಆಸ್ಟ್ರಿಯಾ ದೇಶದ ಸ್ಟೈರಿಯಾ ಎಂಬ ಪ್ರದೇಶದಲ್ಲಿರುವ ವಿಶಾಲ ಕೆರೆ ತನ್ನ ನಿಸರ್ಗ ಸೌಂದರ್ಯ ಮತ್ತು ಉತ್ತಮ ಹವಾಗುಣಕ್ಕಾಗಿ ಪ್ರಖ್ಯಾತಿ ಪಡೆದಿದೆ. ಇದರ ಪಚ್ಚೆಹಸಿರು ಬಣ್ಣದ ನೀರಿನ ನೋಟ ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಸುಮಾರು ಒಂದೆರಡು ಮೀಟರ್ ಆಳದ ಈ ಕೆರೆಯ ದಡ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಪ್ರತಿ ವರ್ಷದ ವಸಂತ ಋತುವಿನಲ್ಲಿ ಅಕ್ಕಪಕ್ಕದ ಬೆಟ್ಟದ ಮೇಲೆ ಸಂಗ್ರಹವಾಗಿದ್ದ ಮಂಜು ಕರಗಿ ಕೆಳಕ್ಕಿಳಿಯುತ್ತಿದ್ದಂತೆಯೇ ಕೆರೆದ ದಡವನ್ನು ತುಂಬಿಕೊಳ್ಳುತ್ತಾ ನೀರಿನ ಮಟ್ಟ ಹನ್ನೆರಡು ಮೀಟರ್ ಆಳಕ್ಕೆ ನಿಲ್ಲುತ್ತದೆ. ಅಂದರೆ ನಡೆದಾಡಿದ ಈ ಸ್ಥಳವವೀಗ ನೀರಿನಾಳದ ಸುಂದರ ಉದ್ಯಾನವಾಗಿ ಪರಿವರ್ತಿತವಾಗುತ್ತದೆ.

ಚೀನಾದಲ್ಲಿ 2008ರಲ್ಲಿ ಭೂಕಂಪದ ಪರಿಣಾಮವಾಗಿ ನೀರಿನ ಮಟ್ಟದಲ್ಲಿ ಆದ ಏರುಪೇರು ಒಂದು ಪುಟ್ಟ ಪಟ್ಟಣವನ್ನು ನೀರಿನಲ್ಲಿ ಮುಳುಗಿಸಿತ್ತು. ನಂತರ ಸುಮಾರು ಐದು ವರ್ಷಗಳ ಬಳಿಕ ನೀರಿನ ಮಟ್ಟ ನಿಧಾನವಾಗಿ ಇಳಿದಂತೆ ಪಟ್ಟಣದ ಹತ್ತು ಎತ್ತರದ ಕಟ್ಟಡಗಳೂ, ಕೆಲವು ಮನೆ, ಕಛೇರಿ ಹಾಗೂ ಪ್ರಾಥಮಿಕ ಶಾಲೆಯೊಂದು ಮತ್ತೆ ನೀರಿನಿಂದ ಮೇಲಕ್ಕೆ ಗೋಚರಿಸಿವೆ.

Comments are closed.