ಮಂಗಳೂರು : ಬಸ್‌ನಿಂದ ಜಾರಿ ಬಿದ್ದ ಮದ್ಯವಯಸ್ಕ ಮಹಿಳೆಯೊಬ್ಬರು ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ತಲಪಾಡಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಮಹಿಳೆಯನ್ನು ತಲಪಾಡಿ ನಿವಾಸಿ ಮುಸ್ತಾಫ ಎಂಬವರ ಪತ್ನಿ ಅಮಿನಾ ( 55) ಎಂದು ಗುರುತಿಸಲಾಗಿದೆ.
ತಲಪಾಡಿಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುತ್ತಿದ್ದ ಪದ್ಮಾ ಹೆಸರಿನ 43 ನಂಬ್ರದ ಖಾಸಗಿ ಸಿಟಿ ಬಸ್ ತಲಪಾಡಿ ಬಳಿ ಬರುತ್ತಿದ್ದಂತೆ ಹಿಂದಿನ ಬಾಗಿಲಿನ ಸಮೀಪ ನಿಂತಿದ್ದ ಅಮಿನಾ ಅವರು ಅಚಾನಕ್ಕಾಗಿ ಆಯತಪ್ಪಿ ಬಸ್ ನಿಂದ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಮಹಿಳೆ ಹಿಂಬದಿಯ ಚಕ್ರದಡಿಗೆ ಸಿಲುಕಿ ಮೃತ ಪಟ್ಟಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ…