ಕುಂದಾಪುರ: ತೀರ್ಥಹಳ್ಳಿ ವಿದ್ಯಾರ್ಥಿನಿ ನಂದಿತಾ ಪೂಜಾರಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ನೈಜ್ಯ ಆರೋಪಿಗಳನ್ನು ಇನ್ನು ಒಂದು ವಾರದೊಳಗಾಗಿ ಬಂಧಿಸದಿದ್ದಲ್ಲಿ ಸಾವಿರಾರು ಕಾರ್ಯಕರ್ತರ ಒಗ್ಗೂಡುವಿಕೆಯಲ್ಲಿ ಉಡುಪಿಯಿಂದ ತೀರ್ಥಹಳ್ಳಿ ಚಳೋ ನಡೆಸಿ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಮನೆ ಎದುರು ಬ್ರಹತ್ ಧರಣಿ ನಡೆಸುವುದಾಗಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಅವರು ಶುಕ್ರವಾರ ಕುಂದಾಪುರದಲ್ಲಿ ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶಕ್ಕಾಗಿ ಹಾಗೂ ದೇಶದಲ್ಲಿನ ಮಹಿಳೆಯರ ರಕ್ಷಣೆಗೆ ಹೋರಾಡುತ್ತಿರುವ ಹಿಂದೂಪರ ಸಂಘಟನೆಗಳ ಮೇಲೆ ವಿವಿಧ ಕೇಸುಗಳನ್ನು ಹಾಕುತ್ತಿದ್ದು, ಸ್ತ್ರೀಯರ ರಕ್ಷಣೆಯ ನಿಟ್ಟಿನಲ್ಲಿ ಯಾವ ಕೇಸನ್ನು ಹಾಕಿದರೂ ಹಿಂದೂ ಸಂಘಟನೆ ಹೆದರುವುದಿಲ್ಲ. ಸಚಿವ ಕಿಮ್ಮನೆ ರತ್ನಾಕರ ಅವರು ಬಾಲಕಿ ಸಾವಿಗೆ ನ್ಯಾಯ ಕೊಡಿಸುವ ಪ್ರಯತ್ನ ಬಿಟ್ಟು ಒಂದು ಕೋಮನ್ನು ಓಲೈಸಿ ಅವರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಬಾಲಕಿ ನಂದಿತಾಳ ಮನೆಗೆ ಶಿವಮೊಗ್ಗ ಜಿಲ್ಲೆಯ ಯಾವುದೇ ಉನ್ನತ ಅಧಿಕಾರಿ ಭೇಟಿ ನೀಡಿಲ್ಲ, ಕರ್ನಾಟಕ ಸರಕಾರದ ಯಾವುದೇ ಪ್ರತಿನಿಧಿ ಭೇಟಿ ಕೊಟ್ಟಿಲ್ಲ, ಗ್ರಹಸಚಿವರು ಆಕೆ ಕುಟುಂಬಕ್ಕೆ ಸಾಂತ್ವಾನ ಹೇಲುವ ಕಾರ್ಯ ಮಾಡದಿರುವುದು, ನಂದಿತಾ ಪೂಜಾರಿ ಹಿಂದೂ ಸಮಾಜದ ಬಾಲಕಿಯಾದ ಕಾರಣವೋ ಏನೋ ಗೊತ್ತಿಲ್ಲ, ಅವಳ ಸಾವಿಗೆ ಯಾವ ಅನುಕಂಪದ ಮಾತುಗಳು ಸರಕಾರ ಮಟ್ಟದಿಂದ ಬಂದಿಲ್ಲ, ಇದು ಅವರ ಓಟ್ ಬ್ಯಾಂಕ್ ರಾಜಕಾರಣ ತೋರಿಸುತ್ತದೆ ಎಂದು ಕಿಡಿಕಾಡಿದರು.
ಗೋ ಕಳ್ಲ ಕಬೀರನಿಗೆ ಮನೆಗೆ ಹೋಗಿ 10 ಲಕ್ಷ ಪರಿಹಾರ ನೀಡಿ ಬಂದ ಸರಕಾರ ನಂದಿತಾ ಸಾವಿಗೆ ಪರಿಹಾರ ನೀಡಿಲ್ಲ, ತುರ್ತು 10 ಲಕ್ಷ ಪರಿಹಾರ ಈ ಕುಟುಂಬಕ್ಕೆ ಹಾಗೂ ಇನ್ನು ವಾರಗಳೊಳಗಾಗಿ ಕನಿಷ್ಟ 25 ಲಕ್ಷ ಪರಿಹಾರವನ್ನು ಈ ಕುಟುಂಬಕ್ಕೆ ನೀಡಲೆಬೇಕು ಎಂದು ಈ ಸಂದರ್ಭ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ ಕಾವೇರಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಎಬಿವಿಪಿ ತಾಲೂಕು ಸಂಚಾಲಕ ಚೇತನ್, ರಾಷ್ಟ್ರ್‍ಈಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್‍ಯಕಾರಣಿ ಸದಸ್ಯ ಸುಬ್ರಮಣ್ಯ ಹೊಳ್ಳ, ಬಜರಂಗದಳದ ಸುನೀಲ್ ಕೆ.ಆರ್., ಸಹಸಂಚಾಲಕ ಗಿರೀಶ್ ಕುಂದಾಪುರ, ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಮೊದಲಾದವರಿದ್ದರು.
ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ಶಾಸ್ತ್ರೀ ವ್ರತ್ತದಿಂದ ನಗರದಲ್ಲಿ ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ಹಾಘು ಹಿಂದೂಪರ ಸಂಘಟನೆ ಕಾರ್ಯಕರ್ತರು, ಬಿಜೆಪಿಯವರು ಪಾಲ್ಘೊಂಡಿದ್ದರು.