ಕನ್ನಡ ವಾರ್ತೆಗಳು

ಕದ್ರಿ ಉದ್ಯಾನವನದಲ್ಲಿ ಎರಡು ದಿನ ‘ಜೇನು ಝೇಂಕಾರ’

Pinterest LinkedIn Tumblr

honey_bee_photo

ಮಂಗಳೂರು,ಮಾ.12: ಜೇನು ಸಾಕಾಣಿಕೆ ಮತ್ತು ಜೇನು ಆಧಾರಿತ ಚಟುವಟಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಇಂದಿನಿಂದ ಎರಡು ದಿನಗಳ ‘ಜೇನು ಝೇಂಕಾರ’ ಮೇಳ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ತೋಟಗಾರಿಕಾ ಇಲಾಖೆ ಹಾಗೂ ಖಾದಿ ಗ್ರಾಮೋದ್ಯೋಗ ಇಲಾಖೆ ವತಿಯಿಂದ ಈ ಮೇಳ ಹಮ್ಮಿಕೊಳ್ಳಲಾಗಿದ್ದು, ಜೇನಿನ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ಜೇನಿನ ಔಷಧೀಯ ಗುಣಗಳ ಬಗ್ಗೆ ಜೇನು ಕೃಷಿಕರು ಮಾಹಿತಿ ನೀಡಲಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ಎಚ್.ಆರ್ ತಿಳಿಸಿದರು.

ಜೇನಿನ ಪ್ರಗತಿಪರ ಸಾಕಣೆದಾರರಿಂದ ಮಾ.13 ರಂದು ಬೆಳಗ್ಗೆ 10 ರಿಂದ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ನಡೆಸುವ ಬಗ್ಗೆ ತರಬೇತಿ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಾವಯವ ಕೃಷಿ ಕುರಿತ ತರಬೇತಿ ಕಾರ್ಯಕ್ರಮವು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸಮಾರಂಭ ಉದ್ಘಾಟಿಸಲಿದ್ದಾರೆ.

ಜೇನು ಮೇಳದಲ್ಲಿ ನಿಮಗೆ ಯಾವ ಮಾಹಿತಿ ದೊರೆಯಲಿದೆ? ಜೇನು ಸಾಕಣೆಗೆ ಸಂಬಂಧಿಸಿದ ಪರಿಕರಗಳ ಪ್ರದರ್ಶನ, ಜೇನಿನ ವಿವಿಧ ಪ್ರಭೇದ ಪ್ರದರ್ಶನ, ಜೀವಂತ ಜೇನು ಕುಟುಂಬ ಪ್ರದರ್ಶನ, ಪುತ್ತೂರಿನ ಜೇನು ಬೆಳೆಗಾರರ ಸಂಘದವರಿಂದ ಜೇನು ಪ್ರದರ್ಶನ ಮತ್ತು ಮಾರಾಟ, ಆಯುಷ್ ಇಲಾಖೆಯಿಂದ ಜೇನಿನ ಉಪಯೋಗ ಮತ್ತು ಔಷಧೀಯ ಗುಣಗಳ ಬಗ್ಗೆ ಮಾಹಿತಿ, ಜೇನಿನ ವಿವಿಧ ಪೇಯಗಳ ತಯಾರಿಕೆ ಬಗ್ಗೆ ಎಸ್ ಡಿಎಂ ನ್ಯಾಚುರೋಪತಿ ವಿದ್ಯಾರ್ಥಿಗಳಿಂದ ಮಾಹಿತಿ, ವಿವಿಧ ಆಯುರ್ವೇದ ಸಂಘಗಳಿಂದ ಜೇನು ಬಳಕೆ ಮಾಡಿ ತಯಾರಿದ ಔಷಧ ಪ್ರದರ್ಶನ ಮತ್ತು ಮಾರಾಟ ಇರುತ್ತದೆ

ಸಾವಯವ ಮೇಳ: ಸಾವಯವ ಕೃಷಿಕ ಗ್ರಾಹಕರ ಮೇಳದ ವತಿಯಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಂದ ಸಾವಯವ ಉತ್ಪನ್ನ ಮತ್ತು ಮೌಲ್ಯವರ್ಧಿತ ಉತ್ಪನ್ನ ಪ್ರದರ್ಶನ ಹಾಗೂ ಮಾರಾಟ, ಸಾವಯವ ಕೃಷಿಗೆ ಬಳಸುವ ಕೃಷಿ ಪರಿಕರಗಳ ಪ್ರದರ್ಶನ, ವಿವಿಧ ತರಕಾರಿ ಬೀಜಗಳ ಮಾರಾಟ ಇರುತ್ತದೆ ಎಂದು ಜಿಪಂ ಸಿಇಓಪಿ. ಐ ಶ್ರೀವಿದ್ಯಾ ತಿಳಿಸಿದರು.

Write A Comment