ರಾಷ್ಟ್ರೀಯ

ಏಳು ಪೈಸೆ ಡಿಡಿ ಕಳುಹಿಸಿದ ಬ್ಯಾಂಕ್ !

Pinterest LinkedIn Tumblr


ಕಾಸರಗೋಡು: ಇಲ್ಲಿಯ ಬ್ಯಾಂಕ್‌ವೊಂದು ಏಳು ಪೈಸೆಯನ್ನು ಡಿ ಡಿ ಮೂಲಕ ಕಳುಹಿಸಿಕೊಟ್ಟು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ನೂರಾರು ರು. ಗಳ ಡಿ ಡಿ ಕಳುಹಿಸುವುದು ವಾಡಿಕೆಯಲ್ಲಿದೆ. ಆದರೆ ಕೇವಲ ಏಳು ಪೈಸೆಗೆ 22 ರು. ಖರ್ಚು ಮಾಡಿದ್ದು ನಾಗರಿಕವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಏಳು ಪೈಸೆಯನ್ನು ಡಿ ಡಿ ಮೂಲಕ ಗ್ರಾಹಕನಿಗೆ ಕಳುಹಿಸಲು ಬ್ಯಾಂಕ್ ಅಧಿಕಾರಿಗಳು ಅಂಚೆ ವೆಚ್ಚವಾಗಿ ರು. ವ್ಯಯಿಸಿದ್ದಾರೆ. ನಗರದ ತಾಯಲ್ ನಾಯ್ಮಾರ್‌ಮೂಲೆಯಲಿರುವ ಕಿರು ಉದ್ದಿಮೆಯ ಘಟಕದ ಮಾಲೀಕನಿಗೆ ಕಾಸರಗೋಡು ನಗರದ ಖಾಸಗಿ ಬ್ಯಾಂಕ್ ಪ್ರಬಂಧಕ ಡಿ ಡಿ ಕಳುಹಿಸಿಕೊಟ್ಟಿದ್ದಾರೆ. ಆ ಬ್ಯಾಂಕ್‌ನಲ್ಲಿ ಕಿರು ಉದ್ದಿಮೆದಾರರು ಈ ಹಿಂದೆ ಖಾತೆ ಹೊಂದಿದ್ದು, ಬಳಿಕ ಆ ಖಾತೆಯನ್ನು ರದ್ದುಪಡಿಸಿದ್ದರು. ಆ ಬಳಿಕವಷ್ಟೇ ಅದೇ ಖಾತೆದಾರನಿಗೆ ಬ್ಯಾಂಕ್ ಪ್ರಬಂಧಕರು ಏಳು ಪೈಸೆಯನ್ನು ಡಿ ಡಿ ಮೂಲಕ ರವಾನಿಸಿ ಅದರ ವಿಳಾಸದಾರ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

Comments are closed.