ವ್ಯಾಪಾರದಲ್ಲಿ ಮೋಸ ಹೋಗುವುದು ಸಾಮಾನ್ಯ. ಆದರೆ ಗುರುಗ್ರಾಮದ ವ್ಯಕ್ತಿಯಷ್ಟು ಸುಲಭವಾಗಿ ಮೋಸ ಹೋಗಬಾರದು. ಅಜಯ್ ಸಿಂಗ್ ಎಂಬ ವ್ಯಕ್ತಿ ತಮ್ಮ 10 ಲಕ್ಷ ರೂ. ಮೌಲ್ಯದ ಹರ್ಲೆ ಡೆವಿಡ್ಸನ್ ಬೈಕ್ ಮಾರಲು ನಿರ್ಧರಿಸಿದರು.
ಅದನ್ನು ಆನ್ಲೈನ್ ಮಾರಾಟ ವೇದಿಕೆಯಲ್ಲಿ ಮಾರಾಟಕ್ಕಿಟ್ಟರು. ತನ್ನನ್ನು ತಾನು ರಾಹುಲ್ ನಗರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಈ ಬೈಕ್ಕೊಳ್ಳಲು ಮುಂದಾದ. ಮುಂಗಡ ಹಣವಾಗಿ 7,000 ರೂ. ಕೊಟ್ಟ. ಮಾಲೀಕ ಅಜಯ್ ಸಿಂಗ್ ಆ ವ್ಯಕ್ತಿಯ ಮಾತಿಗೆ ಮರುಳಾದರು. ಆತ ಬೈಕನ್ನು ಒಮ್ಮೆ ಓಡಿಸಿ ಪರೀಕ್ಷಿಸಬೇಕು ಎಂದು ಕೇಳಿಕೊಂಡ. ಆತನನ್ನು ನಂಬಿ ಅಜಯ್ ಬೈಕ್ ಕೊಟ್ಟಿದ್ದೇ ಎಡವಟ್ಟಾಗಿದ್ದು. ಟೆಸ್ಟ್ ಡ್ರೈವ್ಗೆಂದು ಬೈಕ್ ಏರಿಹೋದವನು ಮರಳಿ ಬರಲೇ ಇಲ್ಲ. ಆತ ತಾನು ಮಾರ್ಬಲ್ ಉದ್ಯಮಿ ಎಂದು ಹೇಳಿಕೊಂಡಿದ್ದ.
ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ. ಮೋಟಾರ್ ಸೈಕಲ್ಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಆತನ ಬಗ್ಗೆ ಅನುಮಾನವೇ ಮೂಡಲಿಲ್ಲ. ಹೀಗಾಗಿ ಅವನು ಕೇಳುತ್ತಲೇ ಬೈಕ್ ಕೊಟ್ಟು ಮೋಸ ಹೋದೆ ಎಂದಿದ್ದಾರೆ ಅಜಯ್.
Comments are closed.