ಕರಾವಳಿ

ದಡ್ಡಲ್‍ಕಾಡ್ ಬಬ್ಬು ಸ್ವಾಮಿ ದೈವಸ್ಥಾನದ ಹುಂಡಿ ಹಣ ಕದ್ದು ಅಪವಿತ್ರಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ತೀವ್ರ ಪ್ರತಿಭಟನೆ: ಎಂ.ಶಶಿಧರ್ ಹೆಗ್ಡೆ

Pinterest LinkedIn Tumblr

ಮಂಗಳೂರು: ನಗರದ ಉರ್ವಾಸ್ಟೋರ್ ಸಮೀಪದ ದಡ್ಡಲ್ ಕಾಡ್ ನ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನದ ಮುಂದಿರುವ ಕಾಣಿಕೆ ಡಬ್ಬಿ ಹಣವನ್ನು ಕದ್ದು ಅಪವಿತ್ರಗೊಳಿಸಿ ಸಮಾಜದ ಶಾಂತಿಯನ್ನು ಭಂಗಗೊಳಿಸುವ ಉದ್ದೇಶದಿಂದ ಕರಪತ್ರವನ್ನು ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂದಿಸ ಬೇಕು.

ಇಂತಹ 4 ಪ್ರಕರಣಗಳು ನಗರದಲ್ಲಿ ನಡೆದಿದ್ದರೂ ಈ ತನಕ ದುಷ್ಕರ್ಮಿಗಳನ್ನು ಬಂದಿಸಿಲ್ಲ. ಸರಕಾರ ಈ ಕೂಡಲೇ ಎಚ್ಚೆತ್ತು ಕ್ಷೇತ್ರದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆಗಳನ್ನು ಕುಂದು ಬಾರದ ಹಾಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಎಂ ಶಶಿಧರ ಹೆಗ್ಡೆ

ಸರಕಾರ ಈ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ವಿವಿಧ ದೈವಸ್ಥಾನಗಳ ಭಕ್ತರನ್ನು ಒಟ್ಟು ಸೇರಿಸಿ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮೇಯರ್ ಸ್ಥಳೀಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆ ಎಚ್ಚರಿಸಿದ್ದಾರೆ.

Comments are closed.