ದುಬಾಯಿ: ಪ್ರಕೃತಿಯ ಮಡಿಲು ವನಸಿರಿಯ ನಡುವಿನ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೊಡಗಿನ ಬೆಡಗಿ ದೇಚಮ್ಮ ದುಬಾಯಿಯಲ್ಲಿ ನೆಲೆಸಿದ್ದು 2022ನೇ ಸಾಲಿನ “ಮಿಸ್ ಫಿಟ್ಟ್ನೆಸ್ ಕ್ವೀನ್” ಯು.ಎ.ಇ. ಇಂಟರ್ನ್ಯಾಶನಲ್ ಪುರಸ್ಕೃತೆಯಾಗಿದ್ದಾರೆ.
ಹಸಿರು ಕಾನನ ಕಾಫಿ ತೋಟ, ಭತ್ತದ ಗದ್ದೆಗಳನ್ನು ಹೊಂದಿರುವ ಸುಂದರ ನಾಡು ಪೊನ್ನಂಪೇಟೆಯಲ್ಲಿ ಅಲೆಮಾಡ ಕೊಡವ ಮನೆತನದ ಪೂಣಚ್ಚ ಮತ್ತು ಪಾರ್ವತಿ ದಂಪತಿಗಳ ಪುತ್ರಿಯಾಗಿದ್ದಾರೆ.
ದೇಚಮ್ಮ ಜನಿಸಿದ್ದು ಕೊಡಗಿನಲ್ಲಿಯಾದರೂ ತಮ್ಮ ವಿದ್ಯಾಭ್ಯಾಸವನ್ನು ಕರ್ನಾಟಕದ ಕಡಲ ತೀರದ ತುಳುನಾಡಿನ ಜೈನಕಾಶಿ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಮೂಡಬಿದರೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದವರು. ರೋಟರಿ ಇಂಗೀಷ್, ಮೀಡಿಯಂ ಸ್ಕೂಲ್, ಜೈನ್ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ತಮ್ಮ ವಿದ್ಯಾಭಾಸದ ಹಂತದಲ್ಲೇ ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್ ಆಟಗಾರ್ಥಿಯಾಗಿದ್ದರು. ಭರತನಾಟ್ಯ ಸಹ ಅಭ್ಯಾಸ ಮಾಡಿರುವ ದೇಚಮ್ಮ 1997 ರಲ್ಲಿ “ಮಿಸ್ ಭುವನೆಂದ್ರ ಪ್ರಶಸ್ತಿ ಮತ್ತು “ಮಿಸ್ ಜೇಸಿ ಕುಲ್ಯಾಡಿ ಕ್ವೀನ್ ಪ್ರಶಸ್ತಿ” 1998 ರಲ್ಲಿ ಕೇರಳದಲ್ಲಿ ಪಡೆದಿದ್ದಾರೆ.
ಗೋಪಾಲಕೃಷ್ಣ ಬಿಳಿಮನೆಯವರನ್ನು ವಿವಾಹವಾಗಿ, ಪುತ್ರ ಅದೀತ್ ಮತ್ತು ಪುತ್ರಿ ಅಮೇಯಾ ಎಂಬಿಬ್ಬರು ಮಕ್ಕಳ ತಾಯಿಯಾಗಿ ಗೃಹಿಣಿಯಾಗಿ ಪ್ರಸ್ತುತ ದುಬಾಯಿಲ್ಲಿ ನೆಲೆಸಿದ್ದಾರೆ. ತಮ್ಮ ಪಿಟ್ನೆಸ್ ಕಾಪಾಡಿಕೊಂಡು ಬಂದಿರುವ ದೇಚಮ್ಮ ಇದೀಗ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಗುರುತ್ತಿಸಿಕೊಂಡಿದ್ದಾರೆ.
ಯು.ಎ.ಇ. ಬಿಯಿಂಗ್ ಮಸ್ಕಾನ್ ಬ್ರಾಂಡ್ನ ಮುಖ್ಯಸ್ಥೆ ಮೀನಾ ಅಸ್ರಾಣಿ, ಮಹಿಳಾ ಸಬಲಿಕರಣದ ಬಗ್ಗೆ ಹೆಚ್ಚು ಗಮನ ಹರಿಸುತ್ತ ಮಹಿಳೆಯರನ್ನು ಒಗ್ಗೂಡಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.
ಯು. ಎ. ಇ. ಯಲ್ಲಿ ನೆಲೆಸಿರುವ ಎಲ್ಲಾ ರಾಷ್ಟ್ರೀಯ ಯತ್ಗಳಿಗೆ ಮುಕ್ತವಾಗಿರುವ, ಮದ್ಯಪ್ರಾಚ್ಯದಲ್ಲಿ ಅತ್ಯಂತ ಪಾರದರ್ಶಕ ಸ್ಪರ್ಧೆಗಳಲ್ಲಿ ಒಂದಾಗಿದೆ. ಅತ್ಯಂತ ಪ್ರತಿಷ್ಠಿತ ಗಣ್ಯ ಶೀರ್ಷಿಕೆಗಳಲ್ಲಿ ಒಂದಾಗಿರುವ ” ಮಿಸ್ ಯು. ಎ. ಇ. ಅಂತರಾಷ್ಟ್ರೀಯ ಸ್ಪರ್ಧೆ” ದುಬಾಯಿಯ ಸಿಲಿಕಾನ್ ಒಯಸಿಸ್ನಲ್ಲಿರುವ ರಾಡಿಸ್ಸನ್ ರೆಡ್ ಹೋಟೆಲಿನಲ್ಲಿ 2022 ಜೂನ್ 26ನೇ ತಾರೀಕಿನಂದು ಆಯೋಜಿಸಲಾಗಿತ್ತು.
ಹಲವಾರು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಕೊಡಗಿನ ಬೆಡಗಿ ದೇಚಮ್ಮ ಪೂಣಚ್ಚ “ಮಿಸ್ ಫಿಟ್ ನೆಸ್ಸ್ ಕ್ವೀನ್” ಯು. ಎ. ಇ. ಇಂಟರ್ನ್ಯಾಶನಲ್, ಟೈಟಲ್ ತನ್ನದಾಗಿಸಿ ಕೊಂಡು ಭಾರತದ ಮತ್ತು ಕೊಡಗಿನ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷಿಕರಿಸಿದ್ದಾರೆ. ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಕೊಡಗಿನ ಬೆಡಗಿ ದೇಚಮ್ಮನವರಿಗೆ ಹಾರ್ದಿಕ ಅಭಿನಂದನೆಗಳು.
ವರದಿ- ಬಿ. ಕೆ. ಗಣೇಶ್ ರೈ, ದುಬಾಯಿ
Comments are closed.