Mumbai

ಮೂಡಬಿದ್ರಿಯ ಎಸ್ಟೇಟ್ ರೆಸಾರ್ಟ್’ನಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Pinterest LinkedIn Tumblr

ಮೂಡಬಿದ್ರೆ/ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಪ್ರಸ್ತಾವಿತ ಕೈಗಾರಿಕಾ ಯೋಜನೆಗಳಿಗೆ ಯಾರು ಸ್ಥಳವನ್ನು ಬಿಟ್ಟು ಕೊಡುತ್ತಾರೋ ಆ ಜನತೆಯ ಬೇಡಿಕೆಗಳಿಗೆ ಧ್ವನಿಯಾಗಿ ಅವರ ನೋವಿಗೆಗೆ ಸಮಿತಿ ಸದಾ ಬೆಂಬಲ ವ್ಯಕ್ತಪಡಿಸುತ್ತದೆ. ಕೈಗಾರಿಕಾ ಉದ್ಯಮಕ್ಕಾಗಿ ಜನತೆಯ ಜಾಗ ಪಡೆದುಕೊಂಡಲ್ಲಿ ಪರಿಸರದ ಮತ್ತು ಆ ಪರಿಸರದ ಜನತೆಯ ಹಿತ ಕಾಯ್ದು ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದೇ ಸಮಿತಿಯ ಗುರಿ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು.

ಅವರು ಆಗಸ್ಟ್ 30 ರಂದು ಮೂಡಬಿದ್ರಿಯ ಎಸ್ಟೇಟ್ ರೆಸಾರ್ಟ್- ನಡೆದ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಮಾತನಾಡಿದರು.

ಸಮಿತಿಯ ಪರವಾಗಿ ಈಗಾಗಲೇ ಎಂ.ಅರ್.ಪಿ.ಎಲ್. ನ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಮಾಡಿ ಸ್ಥಳೀಯರಿಗೆ ನ್ಯಾಯ ಒದಗಿಸಿದೆ. ಕೈಗಾರಿಕೆಗಳು ಬರಬೇಕು, ಕರಾವಳಿ ಅಭಿವೃದ್ಧಿ ಹೊಂದಬೇಕೆಂಬ ನಿಲುವು ಹೊಂದುತ್ತಲೇ ನಮ್ಮ ಜನ, ಮತ್ತು ಪರಿಸರದ ಕಾಳಜಿಯೂ ನಮಗೆ ಯಾವತ್ತೂ ಮುಖ್ಯವಾಗುತ್ತದೆ ಎಂದು ಜಯಕೃಷ್ಣ ಶೆಟ್ಟಿ ಯವರು ಸ್ಪಷ್ಟ ಪಡಿಸಿದರು.

ಸಮಿತಿಯ ಅಧ್ಯಕ್ಷರಾದ ಎಲ್.ವಿ. ಅಮೀನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗೌರವ ಪ್ರಧಾನ ಕಾರ್ಯದರ್ಶಿ ಮುಂಡೂರು ಸುರೇಂದ್ರ ಸಾಲಿಯಾನ್ ಸ್ವಾಗತಿಸಿದರು. ಕೋಶಾಧಿಕಾರಿ ತುಳಸಿದಾಸ್ ಅಮೀನ್ ಧನ್ಯವಾದ ನೀಡಿದರು. ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಭೆಯಲ್ಲಿ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಸಮಿತಿಯ ಮಾಜಿ ಅಧ್ಯಕ್ಷರುಗಳಾದ , ಡಾ. ಪ್ರಾಂಕ್ ಫರ್ನಾಂಡಿಸ್ , ಧರ್ಮಪಾಲ್ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ಸಿಎ ಐ ಆರ್ ಶೆಟ್ಟಿ, , ಡಾ ಆರ್ ಕೆ ಶೆಟ್ಟಿ, , ಡಾ. ಪ್ರಭಾಕರ ಶೆಟ್ಟಿ ಬೋಳ, ಶ್ರೀನಿವಾಸ್ ಸಾಪಲ್ಯ , ಚಂದ್ರಶೇಖರ ಬೆಳ್ಚಡ, ಜಿಟಿ ಆಚಾರ್ಯ, ರವಿ ದೇವಾಡಿಗ, ಹಿರಿಯಡ್ಕ ಮೋಹನ್ ದಾಸ್, ವಿಶ್ವನಾಥ್ ದೇವಾಡಿಗ. ಗಿರೀಶ್ ಸಾಲ್ಯಾನ್, ಚಿತ್ರಪು ಕೆ ಎಂ ಕೋಟ್ಯಾನ್, ಶ್ಯಾಮ್ ಎನ್. ಶೆಟ್ಟಿ ದಯಾಸಾಗರ್ ಚೌಟ, , ಸಿ.ಎಸ್. ಗಣೇಶ್ ಶೆಟ್ಟಿ, ರವಿ ಮೆಂಡನ್, ಸುರೇಂದ್ರ ಮೆಂಡನ್‌, ದಿವಾಕರ್ ಶೆಟ್ಟಿ ಪೊಕ್ರಾಲ್, ಬಿ.ರಾಮಚಂದ್ರ ರಾವ್, ರಾಕೇಶ್ ಭಂಡಾರಿ, ಭಾಸ್ಕರ್ ಕಾಂಚನ್‌ ಮತ್ತು ಸಮಿತಿಯ ಮತ್ತು ಜಿಲ್ಲೆಯ ಸದಸ್ಯರು ಮತ್ತು ಹಿತೈಷಿಗಳು ಸುಮಾರು 70 ಜನರ ತಂಡ ಪಾಲ್ಗೊಂಡು ಸಭೆಯಲ್ಲಿ ಉಪಸ್ಥಿತರಿದ್ದರು.

ಮಾಧ್ಯಮ ಪ್ರತಿನಿಧಿಗಳಿಗೆ ಸಮಿತಿಯ ಈ ಕೆಳಗಿನ ಬೇಡಿಕೆಗಳನ್ನು ತಿಳಿಸಿದರು. ನಗರಪಾಲಿಕೆ ಪುರಸಭೆಯ ಮಿತಿಯೊಳಗೆ ದೇಶಾದ್ಯಂತ ವಿದ್ಯುತ್ ಅಥವಾ ಅನಿಲ ಆಧಾರಿತ ಸ್ಮಶಾನ, ಸಮಿತಿಯು ಈ ಪ್ರಾತಿನಿಧ್ಯವನ್ನು ನಮ್ಮ ಪ್ರಧಾನ ಮಂತ್ರಿ ನಾಮ ನಿರ್ದೇಶಿತ ಸಂಸತ್ ಸದಸ್ಯ (RS) ಡಾ. ಡಿ. ವೀರೇಂದ್ರ ಹೆಗ್ಡೆ ಅವರಿಗೆ ನೀಡುತ್ತದೆ. ಸರ್ಕಾರದಿಂದ ಕೈಗಾರಿಕೆಗಳಿಗೆ ಮೀಸಲಾದ 56 ಎಕ್ರೆ ಅರಣ್ಯ ಹಸಿರು ಭೂಮಿಯನ್ನು ಡಿನೋಟಿಫೈ ಮಾಡಿ ಬೈಂದೂರ್‌ನಲ್ಲಿ ಮೀನುಗಾರಿಕೆ ಪಾರ್ಕ್‌ಗಾಗಿ
ಇದರ ಬದಲಾಗಿ ಬೈಂದೂರ್‌ನಲ್ಲಿ ಲಭ್ಯವಿರುವ ಸಾವಿರಾರು ಎಕರ ಬಂಜರು ಭೂಮಿಯನ್ನು ಆರಿಸಿ ಮತ್ತು ಬೈಂದೂರ್‌ನಲ್ಲಿ ಮೀನುಗಾರಿಕೆ SEZ ಮತ್ತು ಇತರ ಕೈಗಾರಿಕೆಗಳನ್ನು ತಕ್ಷಣವ ಕಾರ್ಯಗತಗೊಳಿಸಬೇಕು. ಅವಿಭಜಿತ ದಕ್ಷಿಣ ಕನ್ನಡಕ್ಕೆ 24/7 ನಿರಂತರ ವಿದ್ಯುತ್ ಸರಬರಾಜು ಒದಗಿಸಲು, ನಮ್ಮ ಸಮಿತಿಯು ವಿದ್ಯುತ್‌ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ 2006 ರಲ್ಲಿ ಪಡುಬಿದ್ರಿ ಉಡುಪಿ ಜಿಲ್ಲೆಯಲ್ಲಿ ಮಗಾ ನಾಗಾರ್ಜುನ, ಪವರ್ ಪ್ಲಾಂಟ್, ಈಗ ಅದಾನಿ ಪವರ್, ನ ಅನುಷ್ಠಾನದಲ್ಲಿ ಸಂಪೂರ್ಣ ಕಷ್ಟದ ವರಿಸ್ಥಿತಿಯನ್ನು ಅನುಭವಿಸಿತ್ತು.
ಕರಾವಳಿ ಕರ್ನಾಟಕದಲ್ಲಿನ ಮುಂದಿನ ಕೈಗಾರಿಕೀಕರಣ ವನ್ನು ಕೆಳಗಿನ ಷರತ್ತುಗಳೊಂದಿಗೆ ಯೋಜನೆ ಮಾಡಲಾಗಿದೆ – ಮಾಲಿನ್ಯ ನಿಯಂತ್ರಣವು ಅಂತರರಾಷ್ಟ್ರೀಯ ಮಟ್ಟದ ಪ್ರಕಾರ ಇರಬೇಕು.
50% ಅವಿಭಜಿತ ದಕ್ಷಿಣ ಕನ್ನಡದ ಜನರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಕಾಯಂ ಉದ್ಯೋಗ 40% ನಮ್ಮ ದಕ್ಷಿಣ ಕನ್ನಡದ ಹೊರಗಿನ ಕರ್ನಾಟಕದ ಜನರಿಗೆ ಉದ್ಯೋಗ, 10% ಭಾರತದ ಇತರ ರಾಜ್ಯಗಳ ಜನರಿಗೆ ಉದ್ಯೋಗ ಭೂಮಿ ಮತ್ತು ಮನೆಯನ್ನು ಕಳೆದುಕೊಳ್ಳುವ ಒಂದು ಕುಟುಂಬ ಅಥವಾ ಒಂದು ಶಾಶ್ವತ ಉದ್ಯೋಗ ಸಿಗಬೇಕು. ಬಾಡಿಗೆದಾರರು ತಮ್ಮ ಮನೆ ಮತ್ತು ಮರಗಳಿಗೆ ಉದ್ಯೋಗ ಮತ್ತು ಪರಿಹಾರದ ಅದ ಸೌಲಭ್ಯಗಳನ್ನು ಪಡೆಯಲೇಬೇಕು.

ಮುಂಬರುವ ಎಲ್ಲಾ ಕೈಗಾರಿಕೆಗಳಲ್ಲಿ 30% ಭೂಮಿಯನ್ನು ಕೈಗಾರಿಕೆಗಳಿಂದ ಮಾಲಿನ ಹೀರಿಕೊಳ್ಳಲು ಹಸಿದು ಬೆಲೆಗೆ ಮೀಸಲಿಡಬೇಕು ಮತ್ತು ಸಾಗುವಣಿ ಮರಗಳು ಮತ್ತು ಇತರ ಮಾಲಿನ್ಯ ಹೀರಿಕೊಳ್ಳುವ ಮರಗಳಂತಹ ಮಾವು, ಹಲಸು, ಬೇವು, ಟೀಕ್ ಮರದ ಗಿಡಗಳನ್ನು ನಡಬೇಕು. ಭೂಮಿ ಕಳೆದುಕೊಂಡವರಿಗೆ ಉತ್ತಮ ಪರಿಹಾರ ನೀಡಿ.

ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ಹತ್ತಿರವಿರುವ ಭೂಮಿ/ಮನೆ ಕಳಕೊಂಡವರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ವಸತಿ ಸಂಕೀರ್ಣವನ್ನು ಮಾಡಿ.
ಭೂಮಿಯನ್ನು ಕಳೆದುಕೊಂಡ ಎಲ್ಲರಿಗೂ, ಒಂದು ಕುಟುಂಬಕ್ಕೆ ಒಂದು ಉದ್ಯೋಗವನ್ನು
ಕೊಡುವ ಬಗ್ಗೆ ಸರ್ಕಾರವು ಲಿಖಿತವಾಗಿ ತಿಳಿಸಬೇಕು. ಕೈಗಾರಿಕಾ ಸಚಿವರು ತಮ್ಮ ಪುದೇಶದಲ್ಲಿ ಯಾವ ಕೈಗಾರಿಕೆಗಳು ಬರಲಿವೆ ಎಂಬುದನ್ನು ಭೂಮಿ ಕಳೆದುಕೊಂಡ ಮುಂಚಿತವಾಗಿ ತಿಳಿಸಬೇಕು. ಜಿಲ್ಲೆಯ ಅಭಿವೃದ್ಧಿಯನ್ನು ಯೋಚಿಸಿ ಹೀಗೆ ಹಲವಾರು ಬೇಡಿಕೆಗಳನ್ನು ಮಾಧ್ಯಮದವರಿಗೆ ತಿಳಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ
ಆಗಸ್ಟ್ ಒಂದರಂದು ಬೆಳಿಗ್ಗೆ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿಯೋಗವು ಶ್ರೀ ಕ್ಷೇತ್ರ ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ನೂತನವಾಗಿ ನಾಮನಿರ್ದೇಶನಗೊಂಡಿರುವ ರಾಜ್ಯಸಭಾ ಸಂಸದ ಪೂಜ್ಯ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ಕರಾವಳಿ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ವಿಷಯ ತೆಗೆದುಕೊಳ್ಳಲು ಮನವಿಯೊಂದಿಗೆ ಸಮಿತಿಯ ಪ್ರಸ್ತಾವನೆಗಳನ್ನು ಡಾ. ಹೆಗಡೆ ಅವರಿಗೆ ಸಮಿತಿಯ ಸಂಸ್ಥಾಪಕ ತೋನ್ಸೆ ಜಯ ಕೃಷ್ಣ ಶೆಟ್ಟಿ, ಅಧ್ಯಕ್ಷರಾದ ಎಲ್ ವಿ ಅಮೀನ್ ಸಲ್ಲಿಸಿದರು. ಡಾ. ಹೆಗ್ಗಡೆಯವರು ಅಭಿಪ್ರಾಯಗಳನ್ನು ಮತ್ತು ತಂಡದ ಪ್ರಯತ್ನಗಳನ್ನು ಮೆಚ್ಚಿದರು ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ಧರ್ಮಸ್ಥಳಕ್ಕೆ ಭೇಟಿ ನೀಡುವ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಸಭೆಯನ್ನು ಸಂಯೋಜಿಸಿದರು. ಧರ್ಮಸ್ಥಳ ಭೇಟಿಯಲ್ಲಿ ಸಮಿತಿಯ ಈ ಮೇಲಿನ ಎಲ್ಲಾ ಗಣ್ಯರು ಉಪಸ್ಥಿತರಿದ್ದರು.

Comments are closed.