ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವರ ನೂತನ ದೇವಾಲಯ ಲೋಕಾರ್ಪಣೆ ಬ್ರಹ್ಮಕಲಶೋತ್ಸವ, ಲಕ್ಷಮೋದಕ ಹೋಮ, ಶತ ಚಂಡಿಯಾಗ ಹಾಗೂ 2016 ಕಾಯಿ ಗಣಹೋಮ ಕಾರ್ಯಕ್ರಮವು ಮಾರ್ಚ್ 13ರಿಂದ 17ರವರೆಗೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸುವಂತೆ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ರಮಾದೇವಿ ರಾಮಚಂದ್ರ ಭಟ್ಟ, ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ಕೋರಿದ್ದಾರೆ.
ಶನಿವಾರದಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಬಾಲಚಂದ್ರ ಭಟ್ಟ ಅವರು ಮಾ.13ರಿಂದ ಕಾರ್ಯಕ್ರಮಗಳು ಆರಂಭವಾಗಿ ಮಾ.17ರ ತನಕ ನಡೆಯಲಿದೆ. ಪ್ರತಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು, ಸ್ವಾಮೀಜಿಯವರಿಂದ ಆಶೀರ್ವಚನ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಪ್ರತಿ ನಿತ್ಯ ಮಹಾ ಅನ್ನಸಂತರ್ಪಣೆಯಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಟ್ಟಿಅಂಗಡಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣಕುಮಾರ್, ಬಗ್ವಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಪತ್ರಕರ್ತ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ:
ಮಾ.13ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪ್ರಾರಂಭ, ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ದೇವಾಲಯ ಲೋಕಾರ್ಪಣೆ, ಶಿಖರ ಕಲಶ ಸ್ಥಾಪನೆ, ಅಭಿಷೇಕ, ಭಕ್ತರಿಗೆ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶುಭಾಸಂಸನೆಗಯ್ಯುವರು. ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕ ಜಿ. ಶಂಕರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಧಾರ್ಮಿಕ ಮಾರ್ಗದರ್ಶಕ ಧ್ವಾರಕಾನಾಥ್, ಮಾನವ ಹಕ್ಕು ಆಯೋಗದ ಸದಸ್ಯ ಟಿ. ಶ್ಯಾಮ್ ಭಟ್ಟ, ಉಧ್ಯಮಿ ಆನಂದ ಕುಂದರ್, ಉದ್ಯಮಿ ಜಗದೀಶ ಎಂ., ಬೆಂಗಳೂರು, ಶ್ರೀ ಮಹಿಷಾಸುರ ಮರ್ಧಿನಿ ದೇವಾಲಯ ಬಗ್ವಾಡಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಟ್ಟಿಯಂಗಡಿ, ಗ್ರಾ.ಪಂ.ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ ಉಪಸ್ಥಿತರಿರುವರು.
ಮಾ.14ರಂದು ಬೆಳಿಗ್ಗೆ ಲಕ್ಷ ಮೋದಕ ಹವನ, 10 ಗಂಟೆಗೆ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವಾರ್ಣಲ್ಲಿ ಮಹಾಸಂಸ್ಥಾನಮ್ ಇವರ ಆಗಮನ, ದೇವರಿಗೆ ಪೂಜೆ, ಶ್ರೀಗಳಿಂದ ಆಶೀರ್ವಚನ ಹಾಗೂ ಮಂತ್ರಾಕ್ಷತೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣಮಠ ಅವರಿಂದ ಆಶೀರ್ವಚನ. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಪಂಚಾಂಗಕರ್ತ ತಟ್ಟುವಟ್ಟು ವಾಸುದೇವ ಜೋಯಿಸರು ಹಲಾಡಿ ಶುಭಾಸಂಸನೆಗೈಯುವರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಗೋಪಾಲ ಪೂಜಾರಿ, ಆನೆಗುಡ್ಡೆ ವಿನಾಯಕ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮದ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಉದ್ಯಮಿ ಗಳಾದ ಶಿವರಾಮ ಹೆಗ್ಡೆ ಬೆಂಗಳೂರು, ಜಿ.ಕೆ.ಶೆಣೈ ಬೆಂಗಳೂರು, ಹೆಚ್.ಬಿ.ಶಿವಕುಮಾರ್ ಬೆಂಗಳೂರು, ಗುರುಪ್ರಸಾದ್ ಬೆಂಗಳೂರು, ಕರುಣಾಕರ ಶೆಟ್ಟಿ ಅರಸೀಕೆರೆ, ಅತಿಶಯ ಜೈನ ಕ್ಷೇತ್ರದ ಮೊಕ್ತೇಸರ ಸುರೇಂದ್ರ ಜೈನ್, ಶ್ರೀ ಲೋಕನಾಥೇಶ್ವರ ದೇವಸ್ಥಾನದ ಮೊಕ್ತೇಸರ ಸನತ್ ಕುಮಾರ್ ರೈ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಬೈಂದೂರು, ಉದ್ಯಮಿ ಸುಧೀಂದ್ರ ಕಟ್ಟೆ ಗಂಗೊಳ್ಳಿ, ಉಪಸ್ಥಿತರಿರುವರು.
ಮಾ.15ರಂದು ಬೆಳಿಗ್ಗೆ ಲಕ್ಷ ಮೋದಕ ಹವನ ಪೂರ್ಣಾಹುತಿ, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ನಂಜುಂಡ ದೀಕ್ಷಿತ್, ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಗುರುರಾಜ ಶರ್ಮ ಉಪಸ್ಥಿತರಿರುವರು. ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು, ಶ್ರೀ ಗೋಕರ್ಣ ಪರ್ತಗಾಳಿ ಮಠ ಇವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಿವ್ಯ ಉಪಸ್ಥಿತಿ ಇರಲಿದೆ ಎಂದೂ ತಿಳಿಸಲಾಗಿದೆ. ಸಂಜೆ 6 ಗಂಟೆಗೆ ಶ್ರೀಚಕ್ರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ. ಧಾರ್ಮಿಕ ಸಭೆಯಲ್ಲಿ ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಕಟೀಲು ದೇವಸ್ಥಾನದ ಅನುವಂಶೀಯ ಅರ್ಚಕ ಹರಿನಾರಾಯಣ ಅಸ್ರಣ್ಣ ಶುಭಾಸಂಸನೆಗೈಯುವರು. ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ರಾವ್, ಶಾಸಕ ಯಶ್‌ಪಾಲ್ ಸುವರ್ಣ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕ ಸುಕುಮಾರ ಶೆಟ್ಟಿ, ಶ್ರೀ ಕ್ಷೇತ್ರ ಕಮಲಶಿಲೆಯ ಅನುವಂಶೀಯ ಅರ್ಚಕ ಸಚ್ಚಿದಾನಂದ ಚಾತ್ರ, ಹರಿಕೃಷ್ಣ ಪುನರೂರು ಮೂಲ್ಕಿ, ಯೋಗೀಶ ಕಾಮತ್ ಚಾಟರ‍್ಡ್ ಅಕೌಂಟೆಂಟ್ ಕುಮಟಾ, ಉದ್ಯಮಿಗಳಾದ ದಿನೇಶಕುಮಾರ್ ಹೆಗ್ಡೆ, ಕೆ.ಎಂ.ಶೆಟ್ಟಿ ಉಪಸ್ಥಿರಿರುವರು.
ಮಾ.16ರಂದು ಬೆಳಿಗ್ಗೆ ಶತಚಂಡಿಕಾಯಾಗ ಪೂರ್ಣಾಹುತಿ, ಶ್ರೀ ಬಾಳೇಕುದುರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಹೊರನಾಡು ಧರ್ಮಕರ್ತರು ಭೀಮೇಶ್ವರ ಜೋಷಿ ಉಪಸ್ಥಿತರಿರುವರು. ಸಂಜೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ವಹಿಸುವರು. ಧರ್ಮಕರ್ತರು ಹೊರನಾಡು ಭೀಮೇಶ್ವರ ಜೋಷಿ ಶುಭಾಸಂಸನೆಗೈಯುವರು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಶಾಸಕ ಸುನಿಲ್ ಕುಮಾರ್, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಕರ್ನಾಟಕ ಬ್ಯಾಂಕ್ ನಿವೃತ್ತ ಎಂ.ಡಿ. ಎಂ.ಎಸ್.ಮಹಾಬಲೇಶ್ವರ ಭಟ್ಟ, ಉದ್ಯಮಿಗಳಾದ ಆರೂರು ಪ್ರಭಾಕರ ರಾವ್, ಶರತ್ ಸಾಲಿಯಾನ್, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಉಧ್ಯಮಿ ಚಂದ್ರಶೇಖರ ಶೆಟ್ಟಿ ಬೆಂಗಳೂರು, ಉಪಸ್ಥಿತರಿರುವರು.
ಮಾ.17ರಂದು ಬೆಳಿಗ್ಗೆ 2016 ಕಾಯಿ ಗಣಹವನ ಪ್ರಾರಂಭ, ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಇವರ ಆಗಮನ ಪೂರ್ಣ ಕುಂಭ ಸ್ವಾಗತ, ಶ್ರೀ ದೇವರ ಕಲಾ ಚೈತನ್ಯ ಪರಿಪೂರ್ಣತೆಗೋಸ್ಕರ ಪೂಜೆ, ರಜತ ಕಲಶಾಭಿಷೇಕ, ಪ್ರಧಾನ ಬ್ರಹ್ಮಕಲಶಾಭಿಷೇಕ ಮತ್ತು ಕನಕಾಭಿಷೇಕ ಗಣಹವನದ ಪೂರ್ಣಾಹುತಿಯಲ್ಲಿ ದಿವ್ಯ ಉಪಸ್ಥಿತಿ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ
ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಗಳು, ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಗಾಣಗಾಪುರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿ ಪ್ರತಿಷ್ಟಾನದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ, ಪಾಂಡೇಶ್ವರದ ತೀರ್ಥಬೈಲಿನ ವಿಜಯ ಮಂಜ ಶುಭಾಸಂಸನೆಗೈಯುವರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಲಕ್ಷ್ಮೀ ಹೆಬ್ಬಾಳ್ಳರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಉಧ್ಯಮಿ ಸದಾನಂದ ಮಯ್ಯ ಬೆಂಗಳೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ರಾಜೇಂದ್ರ ಕಟ್ಟೆ, ಉಧ್ಯಮಿ ದಿವಾಕರ ಶೆಟ್ಟಿ ಉಡುಪಿ, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ, ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಹೆಗ್ಡೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪಾರ್ವತಿ ಉಪಸ್ಥಿತರಿರುವರು.
Comments are closed.