ಮಂಗಳೂರು,ಡಿ.15 : ಜಗತ್ತಿನ ಹಲವು ಮಂದಿಯ ಪ್ರಾರ್ಥನೆಯ ಫಲವಾಗಿ ನಮ್ಮೆಲ್ಲರ ರಕ್ಷಣೆಗಾಗಿ ಏಸು ಕ್ರಿಸ್ತ ಜನ್ಮವೆತ್ತಿ ಬಂದಿದ್ದಾರೆ. ಅವರು ಇಡೀ ಲೋಕಕ್ಕೆ ಪವಿತ್ರ ಶಕ್ತಿ ನೀಡಿ ಹೊಸ ಬೆಳಕನ್ನು ನೀಡಿದ್ದಾರೆ ಎಂದು ಬೆಳ್ತಂಗಡಿಯ ಸೈರೋ ಮಲಬಾರ್ ಕೆಥೋಲಿಕ್ ಡಯೋಸಿಸ್‌ನ ಬಿಷಪ್ ರೆ. ಲಾರೆನ್ಸ್ ಮುಕ್ಕುಯಿ ಹೇಳಿದರು.
ಕರ್ನಾಟಕ ಕ್ರಿಸ್ತನ್ಸ್ ಎಜುಕೇಶನ್ ಸೊಸೈಟಿ , ಕ್ರೈಸ್ತ ಪೀಠ ವತಿಯಿಂದ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಆಯೋಜಿಸಿದ ಸೌಹಾರ್ದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಅವರು ಕ್ರಿಸ್ ಮಸ್ ಸಂದೇಶ ನೀಡಿದರು. ಏಸು ಕ್ರಿಸ್ತ ಹುಟ್ಟುವ ಮೊದಲೇ ಅವರ ಜೀವನ ಚರಿತ್ರೆಯನ್ನು ಬರೆಯಲಾಗಿತ್ತು. ಅವರು ಹುಟ್ಟುವ ಬಗ್ಗೆ ಮೊದಲೇ ಜ್ಞಾನಿಗಳಿಗೆ ತಿಳಿದಿತ್ತು ಎಂದು ಅವರು ಹೇಳಿದರು.
ಮಂಗಳೂರು ಬಿಷಪ್ ರೆ. ಡಾ. ಅಲೋಶಿಯಸ್ ಪೌಲ್ ಡಿಸೋಜ , ಸಿಎಸ್‌ಐ ಕರ್ನಾಟಕ ಸದರ್ನ್ ಡಯೋಸಿಸ್ ಬಿಷಪ್ ರೆ. ಡಾ. ಜಾನ್ ಎಸ್. ಸದಾನಂದ, ರೆ. ಪುತ್ತೂರಿನ ಸೈರೋ ಮಲಂಕರ ಕೆಥೋಲಿಕ್ ಡಯೋಸಿಸ್‌ನ ಡಾ. ಜೀವರ್ಗೀಸ್ ಆಶೀರ್ವಚನ ನೀಡಿದರು.
ಕೆಟಿಸಿ ಪ್ರಿನ್ಸಿಪಾಲ್ ರೆ. ಡಾ. ಹನಿ ಕಬ್ರಾಲ್, ಕ್ರೈಸ್ತ ಪೀಠದ ರೆ. ಡಾ. ಜೆ. ಬಿ. ಸಲ್ದಾನ, ಮುಖಂಡರಾದ ಅಲ್ಫ್ರೆಡ್ ಎಂ. ಅಮನ್ , ರೆ. ಫಾ. ಕ್ಲಿಫರ್ಡ್ ಫರ್ನಾಂಡಿಸ್, ರೆ. ಸಂದೀಪ್ ಉಪಸ್ಥಿತರಿದ್ದರು.
ನಾನಾ ಸಂಘನೆಗಳಸದಸ್ಯರಿಂದ ಹಾಗೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು