ಕನ್ನಡ ವಾರ್ತೆಗಳು

ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಸಂಪೂರ್ಣ ಸಹಕಾರ : ಆನಂದ್ ಶೆಟ್ಟಿ ಅಡ್ಯಾರ್

Pinterest LinkedIn Tumblr

rama_sene_pm

ಮಂಗಳೂರು,ಫೆ.26  : ವಿಶ್ವ ಹಿಂದೂ ಪರಿಷತ್ ನ ಸುವರ್ಣ ಮಹೋತ್ಸವದ ಅಂಗವಾಗಿ ಮಾ.1ರಂದು ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಈಗಾಗಲೇ ಶ್ರೀರಾಮ ಸೇನೆ ಸಾಥ್ ನೀಡಿದ್ದು, ಇದರ ಕಾರ್ಯಕರ್ತರು ಹಲವು ಕಡೆ ಮನೆ ಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಮಾಜೋತ್ಸವಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ ಎಂದು ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜೀವನ್ ನೀರ್ ಮಾರ್ಗ, ಕಾರ್ಯದರ್ಶಿ ಪ್ರದೀಪ್ ಮೂಡುಶೆಡ್ಡೆ, ಉಪಾಧ್ಯಕ್ಷ ಗಣೇಶ್ ಅತ್ತಾವರ , ನಗರಾಧ್ಯಕ್ಷ ಗುರು ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.

Write A Comment