ಗುಜರಾತ್,ಮಾರ್ಚ್.02: ಬಾಲಿವುಡ್ ನಟಿ ಸೋನಂ ಕಪೂರ್ ಗೆ ಹೆಚ್1 ಎನ್1 ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಂತಿ, ಕೆಮ್ಮಿನಿಂದ ಬಳಲುತ್ತಿದ್ದ ಸೋನಂ ಕಪೂರ್ ಅವರು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆ ವರದಿ ಪ್ರಕಾರ ಕಪೂರ್ ಅವರಲ್ಲಿ ಹೆಚ್1 ಎನ್1 ಸೋಂಕು ಪತ್ತೆಯಾಗಿದೆ. ಗುಜರಾತ್ ನ ರಾಜ್ ಕೋಟ್ ನಲ್ಲಿರುವ ಸ್ಟೆರ್ಲಿಂಗ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋನಂ ಕಪೂರ್ ಅವರು ಸಲ್ಮಾನ್ ಖಾನ್ ಜೊತೆ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಚಿತ್ರೀಕರಣದಲ್ಲಿದ್ದರು.