ಕನ್ನಡ ವಾರ್ತೆಗಳು

ಸೋಲಾರ್ ಸಾಲ ಮೇಳಕ್ಕೆ ಚಾಲನೆ.

Pinterest LinkedIn Tumblr

Solar_light_photo_1

ಮ೦ಗಳೂರು ಫೆ.17: ಸೋಲಾರ್ ವಿದ್ಯುತ್‌ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಮಂಗಳೂರು ನಗರಾದ್ಯಂತದ ಮನೆಗಳ ಮೇಲ್ಛಾವಣೆಗೆ ಸೋಲಾರ್ ಆಳವಡಿಸಲು ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇತರ ತಾಲೂಕ್ ಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಬುಧವಾರ  ನಗರದ ಪುರಭವನದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಸೋಲಾರ್ ಸಾಲ ಮೇಳ ಶಿಬಿರವನ್ನು ಉದ್ಘಾಟಸಿದರು.

Solar_light_photo_2 Solar_light_photo_3  Solar_light_photo_5 Solar_light_photo_6 Solar_light_photo_7 Solar_light_photo_8

ಲೀಡ್ ಬ್ಯಾಂಕ್, ನಾಬಾರ್ಡ್, ಮೆಸ್ಕಾಂ ಸಹಭಾಗಿತ್ವದಲ್ಲಿ ಹಾಗೂ ಜಿಲ್ಲಾಡಳಿತದ ಈ ಪ್ರಕ್ರಿಗೆ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಈ ಸೋಲಾರ್ ಸಾಲ ಮೇಳದಲ್ಲಿ ವಿವಿಧ ಸೋಲಾರ್ ಘಟಕಗಳು, ಮಾರಾಟ ಸಂಸ್ಥೆಗಳು, ಬ್ಯಾಂಕುಗಳು ಭಾಗವಹಿಸಿತು.. ಸೋಲಾರ್ ವಿದ್ಯುತ್ ಘಟಕಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಕೂಡ ಈ ಸಂಧರ್ಭದಲ್ಲಿ ನಡೆಸಲಾಯಿತು.

ನರ್ಬಾಡ್ ಎಜಿಎಂ ಪ್ರಸಾದ್ ಹಾಗೂ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment