ಮಂಗಳೂರು, ಮಾ.12: ಶಿರಾಡಿ ಸಮೀಪದ ಅಡ್ಡಹೊಳೆ ತಿರುವಿನಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ಸಂಭವಿಸಿದ ಘಟನೆ ಶುಕ್ರವಾರ ಸಂಭವಿಸಿದೆ. ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಮಂಗಳೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ.
ಎಂಆರ್‌ಪಿಎಲ್‌ನಿಂದ ಹೊರಟಿದ್ದ ಟ್ಯಾಂಕರ್ ನಸುಕಿನ 5.30 ರ ಸುಮಾರಿಗೆ ಅಡ್ಡಹೊಳೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಮರಿಗೆ ಮಗುಚಿಬಿದ್ದಿದೆ. ಇದರಿಂದ ಗ್ಯಾಸ್ ಸೋರಿಕೆಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕದಳ ತಲುಪಿದ್ದು ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ತಡೆಯಲಾಗಿತ್ತು.