ರಾಷ್ಟ್ರೀಯ

ಪ್ಯೂನ್ ಹುದ್ದೆ ಬಯಸಿದ ರಾಜಸ್ಥಾನದ ಬಿಜೆಪಿ ಶಾಸಕರ ಪುತ್ರ!

Pinterest LinkedIn Tumblr

6577rajastan mla

ಜೈಪುರ್: ರಾಜಕಾರಣಿಗಳು ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರುವುದು ಸಾಮಾನ್ಯ. ಮಕ್ಕಳಿಗೆ ರಾಜಕಾರಣಕ್ಕೆ ಬರಲು ಇಷ್ಟವಿಲ್ಲದಿದ್ದರೆ ತಾವು ಗಳಿಸಿದ ಹಣದಿಂದ ಉದ್ಯಮವನ್ನಾದರೂ ಸ್ಥಾಪಿಸಿಕೊಡುತ್ತಾರೆ. ಆದರೆ ಇಲ್ಲೊಬ್ಬ ಶಾಸಕರು ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ.

ರಾಜಸ್ಥಾನದ ಬಿಜೆಪಿ ಶಾಸಕ ಹೀರಾಲಾಲ್ ವರ್ಮಾ, ಕೇವಲ 8 ನೇ ತರಗತಿವರೆಗೆ ಓದಿರುವ ತಮ್ಮ ಪುತ್ರ ಪ್ಯೂನ್ ಹುದ್ದೆಗೆ ಮಾತ್ರ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರಲ್ಲದೇ ಇತ್ತೀಚೆಗೆ ಪ್ಯೂನ್ ಹುದ್ದೆಗಳಿಗೆ ಕರೆಯಲಾಗಿದ್ದ ಸಂದರ್ಶನಕ್ಕೆ ಮಗನನ್ನು ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ತಾವು ಯಾವುದೇ ಶಿಫಾರಸ್ಸು ಮಾಡುವುದಿಲ್ಲ. ಅರ್ಹತೆಯಿದ್ದರೆ ಆತ ಆಯ್ಕೆಯಾಗುತ್ತೇನೆ ಎಂದಿದ್ದಾರೆ ಹೀರಾಲಾಲ್ ವರ್ಮಾ.

ರಾಜಕಾರಣಕ್ಕೆ ಬರುವ ಮುನ್ನ ಸರ್ಕಾರಿ ಅಧಿಕಾರಿಯಾಗಿದ್ದ ಹೀರಾಲಾಲ್ ವರ್ಮಾ, ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಒಬ್ಬ ಪುತ್ರ ಪದವಿ ಮುಗಿಸಿ ವ್ಯವಹಾರ ಸಂಸ್ಥೆ ನಡೆಸುತ್ತಿದ್ದರೆ, ಮತ್ತೊಬ್ಬ ಪುತ್ರ ಇತ್ತೀಚೆಗಷ್ಟೇ ಪದವಿ ಪಡೆದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದಾನೆ. ಮಗಳು ಬಿಎಡ್ ಮಾಡಿದ್ದಾರೆ. ಈ ಮಗ ಮಾತ್ರ 8 ನೇ ತರಗತಿಗೇ ವಿದ್ಯಾಭ್ಯಾಸಕ್ಕೆ ಶರಣು ಹೊಡೆದಿದ್ದು, ಆತ ಪ್ಯೂನ್ ಹುದ್ದೆ ಮಾಡಲು ಅರ್ಹ ಎಂಬ ತೀರ್ಮಾನಕ್ಕೆ ಶಾಸಕ ಹೀರಾಲಾಲ್ ಬಂದಿದ್ದಾರೆ.

Write A Comment