ಬಲರಾಮ್‌ಪುರ (ಉತ್ತರ ಪ್ರದೇಶ), ಏ.30: ಇದೊಂದು ಅಮಾನುಷ ಕ್ರೌರ್ಯದ ಪರಾಕಾಷ್ಠೆಯ ಸುದ್ದಿ. ಇದನ್ನು ಓದಿದರೆ ಇಂಥ ಮನುಷ್ಯರಿದ್ದಾರಾ ಮತ್ತು ಇವರು ಮನುಷ್ಯರೇ ಎಂಬ ಪ್ರಶ್ನೆ ನಿಮ್ಮೆದುರು ನಿಲ್ಲುತ್ತದೆ. ಉತ್ತರ ಪ್ರದೇಶದ ಬಲರಾಮ್‌ಪುರ ಎಂಬ ಗ್ರಾಮದಲ್ಲಿ ನಡೆದ ಘಟನೆ ಇದು. ಮಹಿಳೆಯೊಬ್ಬಳ ಹೆಸರಿನಲ್ಲಿ ಸ್ವಲ್ಪ ಜಮೀನಿತ್ತು. ಕೆಲ ಸಂಬಂಧಿಕರು ಆ ಜಮೀನನ್ನು ತಮ್ಮ ಹೆಸರಿಗೆ ಮಾಡುವಂತೆ ಒತ್ತಾಯಿಸಿದರು. ಮಹಿಳೆ ಅದನ್ನು ನಿರಾಕರಿಸಿದಳು. ಅದಕ್ಕೆ ಅವರು ಮಾಡಿದ್ದೇನು ಗೊತ್ತೆ..? ಆ ಬಡ ಮಹಿಳೆಯನ್ನು ಹಿಗ್ತಾಮುಗ್ಗ ಥಳಿಸಿ ಅರೆಜೀವ ಮಾಡಿದರು.
ಬಳಿಕ ಅವಳ ಮೈ ಮೇಲಿನ ಬಟ್ಟೆಗಳನ್ನೆಲ್ಲ ಕಳಚಿ ವಿವಸ್ತ್ರಗೊಳಿಸಿದರು. ಅಲ್ಲಿಗೂ ಕೋಪ ತಣಿಯದ ಆ ನರರೂಪದ ರಾಕ್ಷಸರು ಮಹಿಳೆಯನ್ನು ತಲೆಕೆಳಕಾಗಿ (ಕಾಲು ಮೇಲಾಗಿ) ಊರ ಮುಂದಿನ ಮರಕ್ಕೆ ನೇತು ಹಾಕಿದರು. ನಂತರ ಅಲ್ಲಿಂದ ಮರೆಯಾದರು.
ಇದನ್ನು ಕಂಡವರು ಮಹಿಳೆಯನ್ನು ಮೆಲ್ಲಗೆ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರು. ಆಕೆ ಈಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ದೂರನ್ನೇ ಸ್ವೀಕರಿಸುತ್ತಿಲ್ಲ. ಏಕೆಂದರೆ, ಆ ದುಷ್ಟರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆಯಂತೆ. ಈ ಘಟನೆ ನಡೆದಿರುವುದು ಅಖಿಲೇಶ್ ಯಾದವ್ ಮ್ಯುಮಂತ್ರಿಯಾಗಿರುವ ಉತ್ತರ ಪ್ರದೇಶ ಸರ್ಕಾರದ ಆಡಳಿತದಲ್ಲಿ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಒಂದೆರಡಲ್ಲ. ಅಲ್ಲಿ ಇದು ಸಾಮಾನ್ಯ ಸಂಗತಿ.
1 Comment
I like this kanna world