ಹೊಸದಿಲ್ಲಿ : ವಾಯವ್ಯ ದಿಲ್ಲಿಯಲ್ಲಿ ಅಕ್ರಮವಾಗಿ ಢಾಬಾ ನಡೆಸುವುದಕ್ಕೆ ದೂರುದಾರ ವ್ಯಕ್ತಿಯಿಂದ ಪ್ರತೀ ತಿಂಗಳೂ 6,000 ರೂ. ಲಂಚ ಕೇಳಿದ ಪ್ರಕರಣದಲ್ಲಿ ಅಪರಾಧಿಗಳೆಂದು ಕಂಡು ಬಂದ ದಿಲ್ಲಿ ಅಭಿವೃದ್ದಿ ಪ್ರಾಧಿಕಾರದ ಇಬ್ಬರು ಅಧಿಕಾರಿಗಳಿಗೆ ನಗರ ನ್ಯಾಯಾಲಯ ನಾಲ್ಕು ವರ್ಷಗಳ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ.
ವಿಶೇಷ ನ್ಯಾಯಾಧೀಶ ಆಶುತೋಷ್ ಕುಮಾರ್ ಅವರು ಡಿಡಿಎ ಅಧಿಕಾರಿಗಳಾದ ಮುಕೇಶ್ ಚಂದರ್ ಮತ್ತು ಸತ್ಯಬೀರ್ ಸಿಂಗ್ ಅವರಿಗೆ ನಾಲ್ಕು ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಢಾಬಾವನ್ನು ಅಕ್ರಮವಾಗಿ ನಡೆಸುತ್ತಿರುವ ಕಾರಣಕ್ಕೆ ಅದನ್ನು ಮುಚ್ಚಬೇಕೆಂಬ ನೊಟೀಸ್ ಜಾರಿಯಾದಾಗ, ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ತಮಗೆ ಪ್ರತೀ ತಿಂಗಳೂ 6,000 ರೂ. ಲಂಚ ನೀಡಬೇಕೆಂದು ಆರೋಪಿ ಅಧಿಕಾರಿಗಳು ತಾಕೀತು ಮಾಡಿದ್ದರು.
ದೂರುದಾರ ವ್ಯಕ್ತಿ ಮತ್ತು ಆತನ ತಂದೆ ಜತೆಗೂಡಿ ತಮ್ಮ ಮನೆ ಆವರಣದ ಹೊರಗೆ ಢಾಬಾ ನಡೆಸುತ್ತಿದ್ದರು.
Comments are closed.