ರಾಷ್ಟ್ರೀಯ

ತ್ರಾಲ್‌ನಲ್ಲಿ ಗುಂಡಿನ ಕಾಳಗದಲ್ಲಿ ಮೂರು ಜೆಇಎಂ ಉಗ್ರರ ಹತ್ಯೆ

Pinterest LinkedIn Tumblr


ಶ್ರೀನಗರ : ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಮೂವರು ಉಗ್ರರು ಹತರಾದರು; ಐವರು ಭದ್ರತಾ ಸಿಬಂದಿಗಳು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಆರಂಭಗೊಂಡಿದ್ದ ಈ ಗುಂಡಿನ ಕಾಳಗ ಸಂಜೆಯ ವರೆಗೂ ಮುಂದುವರಿದಿತ್ತು.

ತ್ರಾಲ್‌ ಪ್ರದೇಶದ ನಜನೀನ್‌ಪೋರ ಗ್ರಾಮದಲ್ಲಿ ಅಡಗಿಕೊಂಡಿದ್ದ ಎಲ್ಲ ಮೂವರು ಜೆಇಎಂ ಉಗ್ರರು ಗುಂಡಿನ ಕಾಳಗದಲ್ಲಿ ಭಾರತೀಯ ಪಡೆಗೆ ಬಲಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತರಾದ ಮೂವರಲ್ಲಿ ಇಬ್ಬರು ಸ್ಥಳೀಯರಾಗಿದ್ದು ಒಬ್ಬ ಪಾಕ್‌ ಪ್ರಜೆಯಾಗಿದ್ದಾನೆ ಎಂದು ಗೊತ್ತಾಗಿದೆ.

Comments are closed.