ರಾಷ್ಟ್ರೀಯ

ಕಂಠಪೂರ್ತಿ ಕುಡಿದು ತೂರಾಡುತ್ತ ಮಂಟಪಕ್ಕೆ ಬಂದ ವರ: ಕುಡುಕನನ್ನು ಒಲ್ಲೆ ಎಂದ ವಧು!

Pinterest LinkedIn Tumblr


ಹರ್ದೋಯಿ: ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ವರನನ್ನು ಮದುವೆಯಾಗಲು ನಿರಾಕರಿಸುವ ಮೂಲಕ ಯುವತಿಯೋರ್ವಳು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದಾಳೆ. ಉತ್ತರ ಪ್ರದೇಶದ ಹರ್ದೋಯಿಯ ಬದೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಸಂಗ ನಡೆದಿದೆ.

ಮಂಟಪದಲ್ಲಿ ವರನೊಡನೆ ಕುಳಿತಿದ್ದ ವಧುವಿಗೆ, ಮದುಮಗ ಮತ್ತು ಆತನ ತಂದೆ ಕುಡಿದ ಮತ್ತಿನಲ್ಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಎದ್ದು ನಿಂತ ಆಕೆ ಇಂಥ ದುರಭ್ಯಾಸಕ್ಕೆ ಅಂಟಿಕೊಂಡಿರುವನನ್ನು ನಾನು ಕಟ್ಟಿಕೊಳ್ಳಲಾರೆ ಎಂದಿದ್ದಾಳೆ. ಆಗ ಎರಡು ಕಡೆಯವರ ನಡುವೆ ಗಲಾಟೆಯಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯಾರೇನೇ ಹೇಳಿದರೂ ಯುವತಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಎರಡು ಕಡೆಯವರನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಧು ಮತ್ತು ವರನ ಕಡೆಯವರು ತಮ್ಮ ತಮ್ಮ ಮನೆಗೆ ಮರಳಿದ್ದಾರೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದು, ಯುವತಿಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಹರಿದು ಬರುತ್ತಿದೆ.

Comments are closed.