ಅಂತರಾಷ್ಟ್ರೀಯ

ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ನಿರತರಾಗಿದ್ದ ನೂತನ ದಂಪತಿಗೆ ಕಾದಿತ್ತೊಂದು ಶಾಕ್ ! ಅಷ್ಟಕ್ಕೂ ಅಲ್ಲಿಗೆ ಬಂದಿದ್ದು ಯಾರು…?

Pinterest LinkedIn Tumblr

ನ್ಯೂಯಾರ್ಕ್​ನ ನೂತನ ವಧು ವರರಿಗೆ ಅಚ್ಚರಿಯೊಂದು ಕಾದಿತ್ತು. ಮದುವೆಯ ನಂತರ ಪಾರ್ಕ್​ನಲ್ಲಿ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಮೈ ಮರೆತಿದ್ದ ದಂಪತಿಗೆ ಆಶ್ಚರ್ಯವೊಂದು ಕಾದಿತ್ತು.

ಈ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ನಿರತರಾಗಿದ್ದ ದಂಪತಿಯಿದ್ದ ಪಾರ್ಕ್​ನಲ್ಲಿ ಹಾಲಿವುಡ್​ನ ಖ್ಯಾತ ನಟ , ನಿರ್ದೇಶಕ ಡೆಂಜಲ್ ವಾಷಿಂಗ್​ಟನ್​ ಅವರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ನೂತನ ದಂಪತಿಯ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಅನಿರೀಕ್ಷಿತವಾಗಿ ಮೆಚ್ಚಿನ ನಟ ಕಾಣಿಸಿಕೊಂಡಿದ್ದು ಅಲ್ಲದೇ ತಮ್ಮೊಂದಿಗೆ ಫೋಟೊವನ್ನು ಸಹ ತೆಗೆಸಿಕೊಂಡಿದ್ದು ದಂಪತಿಗೆ ಅಚ್ಚರಿ ಮತ್ತು ಖುಷಿಯನ್ನೂ ಸಹ ನೀಡಿದೆ. ಅಲ್ಲದೇ ಈ ಫೋಟೋಗಳು ಈಗ ವೈರಲ್​ ಆಗಿದೆ

ಇನ್ನೂ ಪೀಪಲ್ ನಲ್ಲಿ ಪ್ರಕಟವಾದ ವರದಿ ಪ್ರಕಾರ ಆಸ್ಕರ್ ವಿಜೇತ ನಟ, ನಿರ್ದೇಶಕ ಜೆಂಟೆಲ್​ ವಾಷಿಂಗ್​ಟನ್ ಅವರು ತಮ್ಮ ‘ಜರ್ನಲ್ ಫಾರ್ ಜೋರ್ಡಾನ್’​ ಸಿನಿಮಾದ ಚಿತ್ರೀಕರಣಕ್ಕೆಂದು ನ್ಯೂಯಾರ್ಕ್​ನ ಸೆಂಟ್ರಲ್ ಪಾರ್ಕ್​ನಲ್ಲಿದರು. ಇದೇ ಸಮಯದಲ್ಲಿ ನೂತನ ದಂಪತಿ ಸಹ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಬ್ಯುಸಿಯಾಗಿದ್ದರು. ಈ ದಂಪತಿಯ ಕಣ್ಣಿಗೆ ಬಿದ್ದ ಜೆಂಟಲ್ ಆ ನಂತರ ಅವರೊಟ್ಟಿಗೆ ಫೋಟೋಗೂ ಪೋಸ್​ ನೀಡಿದ್ದಾರೆ.

ಇನ್ನು 66 ವರ್ಷದ ಜೆಂಟಲ್ ಗ್ರೇ ಮತ್ತು ಬ್ಲಾಕ್ ಮಿಶ್ರಿತ ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್​ ಧರಿಸಿದ್ದರು. ಬ್ಲ್ಯಾಕ್ ಕ್ಯಾಪ್ ಮತ್ತು ಬ್ಲ್ಯಾಕ್ ಮಾಸ್ಕ್​ ಕೂಡ ಧರಿಸಿದ್ದಾರೆ. ಇಂತಹ ಅಪರೂಪದ ಮರೆಯಲಾರದ ಕ್ಷಣಗಳನ್ನು ತಮ್ಮದಾಗಿಸಿಕೊಂಡ ನೂತನ ದಂಪತಿಯ ಉಡುಗೆಯೂ ಸಹ ಎಲ್ಲರ ಮನ ಸೆಳೆದಿದೆ. ನೂತನ ವಧುವು ತನ್ನ ಥೈ ಸ್ಲಿಟ್ ವೈಟ್ ವೆಡ್ಡಿಂಗ್ ಉಡುಗೆಯಲ್ಲಿ ಕಂಗೊಳಿಸುತ್ತಿದ್ದು, ವರ ವೆಡ್ಡಿಂಗ್ ಸೂಟ್​ನಲ್ಲಿ ಗಮನ ಸೆಳೆದಿದ್ದಾನೆ.

ಇದರ ಮಧ್ಯೆ ವಾಷಿಂಗ್​ಟನ್​ ಅವರ ಅಭಿಮಾನಿಗಳು ಅವರ ನಿರ್ದೇಶನದ ‘ಜರ್ನಲ್ ಫಾರ್ ಜೋರ್ಡನ್’​ ಸಿನಿಮಾಗಾಗಿ ಕಾಯುತ್ತಿದ್ದಾರೆ. ‘ಜರ್ನಲ್ ಫಾರ್ ಜೋರ್ಡನ್’​ ಸಿನಿಮಾಗಾಗಿ , ​​ ಆಡಮ್ಸ್, ರಾಬರ್ಟ್ ವಿಸ್ಡಮ್, ಜಾನಿ ಎಂ. ವು, ಜಲೋನ್ ಕ್ರಿಶ್ಚಿಯನ್, ಮತ್ತು ತಮಾರಾ ಟ್ಯೂನಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ‘ಜರ್ನಲ್ ಫಾರ್ ಜೋರ್ಡಾನ್’ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಡಾನೆ ಕ್ಯಾನೆಡಿ ಅವರ ‘ಎ ಸ್ಟೋರಿ ಆಫ್ ಲವ್ ಮತ್ತು ಹಾನರ್’ ಕಾದಂಬರಿಯನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದ ಚಿತ್ರೀಕರಣ ಆರಂಭವಾದ ದಿನದಿಂದಲೂ ತೆರೆಯ ಹಿಂದಿನ ದೃಶ್ಯಗಳಿಂದಲೇ ಇಡೀ ಇಂಟರ್ನೆಟ್​ ತುಂಬಿ ತುಳುಕುತ್ತಿದೆ.

ಜೆಂಟಲ್ ವಾಟಿಂಗ್ಟನ್ ಅಮೆರಿಕದ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಕ್ಲಾಸಿಕ್​ ಸ್ಟ್ಯಾಂಡರ್ಡ್ ಸ್ಟಾರ್​ಡಮ್ ಪರಿಕಲ್ಪನೆಗೆ ಹೊಸ ಅರ್ಥವನ್ನು ಕೊಟ್ಟವರು. ನಾಟಕ ಕ್ಷೇತ್ರದಲ್ಲೂ ಸಹ ತಮ್ಮ ವಿಶಿಷ್ಟ್ಯತೆಯ ಗುರುತು ಮೂಡಿಸಿದವರು.

Comments are closed.