ಕರಾವಳಿ

ಪ್ಯಾನ್ಸಿ ಅಂಗಡಿ ಮುಂದೆ ನಿಂಬೆ ಹಣ್ಣು ಕುಂಕುಮ; ಮಾಟ ಮಂತ್ರದ ನೆಪದಲ್ಲಿ ಕಿಡಿಗೇಡಿಗಳ ಕೃತ್ಯ

Pinterest LinkedIn Tumblr

Yogish-Apr 30_2015-005

ಕುಂದಾಪುರ: ಜೀವ ಭಯ ಯಾರಪ್ಪಂದು? ಅಲ್ಲಿ ಯಾವುದೇ ಜಾತಿ ಧರ್ಮ ಅಡ್ಡ ಬರುವುದಿಲ್ಲ. ಇಂತಹುದೇ ಒಂದು ದೃಷ್ಟಾಂತಕ್ಕೆ ಕುಂದಾಪುರ ಪೇಟೆಯ ಪ್ಯಾನ್ಸಿ ಅಂಗಡಿಯ ಮುಂಭಾಗದಲ್ಲಿ ಮಂಗಳವಾರ ತಡ ರಾತ್ರಿ ಕಿಡಿಗೇಡಿಗಳು ನಡೆಸಿದ ಕೃತ್ರಿಮ ಪ್ರಹಸನ ಸಾಕ್ಷಿಯಾಗಿದೆ.

ಕುಂದಾಪುರದ ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ, ಸಮಾಜ ಸೇವಕ, ಬ್ಯೂಟಿ ಕ್ವೀನ್ ಅಂಗಡಿ ಮಾಲಕ ಹುಸೇನ್ ಹೈಕಾಡಿ ಎಂಬುವರ ಅಂಗಡಿಯ ಮುಂದೆಯೇ ಈ ಪ್ರಹಸನ ನಡೆದಿದೆ. ಅಂಗಡಿಯ ಶೆಟರ್ ರಾತ್ರಿ ಹಾಕಲಾಗಿತ್ತು. ಅದರ ಬಲಭಾಗದಲ್ಲಿ ಬೀಗ ಹಾಕಲಾಗಿತ್ತು. ಎಡಭಾಗದಲ್ಲಿ (ಹೊರಗಿನಿಂದ)ಒಂದು ಬೊಂಡವನ್ನಿಟ್ಟು, ಅದರ ಮೇಲೊಂದು ನಿಂಬೆ ಹಣ್ಣು ಇಡಲಾಗಿತ್ತು. ಮೂರೂ ಬದಿಗೆ ಬೊಂಡದ ಸುತ್ತ ಮೂರು ನಿಂಬೆ ಹಣ್ಣು ಇಡಲಾಗಿತ್ತು. ಸುತ್ತ ಕುಂಕುಮ ಮತ್ತು ಅರಶಿನಪುಡಿ ಚೆಲ್ಲಲಾಗಿತ್ತು. ಉರಿಸದ ಊದುಬತ್ತಿಯ ಕಟ್ಟನ್ನು ಶೆಟರ್‌ಗೆ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಸ್ಥಳೀಯ ಉಪನ್ಯಾಸಕರೊಬ್ಬರು ನಡೆದು ಬರುತ್ತಿದ್ದಾಗ ಗಮನಿಸಿ ಅಂಗಡಿ ಮಾಲೀಕರಿಗೆ ಸುದ್ಧಿ ಮುಟ್ಟಿಸಿದ್ದಾರೆ.

Yogish-Apr 30_2015-001

Yogish-Apr 30_2015-002

Yogish-Apr 30_2015-004

Yogish-Apr 30_2015-006

Yogish-Apr 30_2015-007

Yogish-Apr 30_2015-008

Yogish-Apr 30_2015-009

Yogish-Apr 30_2015-011

Yogish-Apr 30_2015-012

ತಕ್ಷಣ ಅಂಗಡಿಗೆ ಬಂದ ಹುಸೇನ್ ಹೈಕಾಡಿಗೆ ಜೀವಭಯ ಕಾಡಿದೆ. ಗಲಿಬಿಲಿಗೊಂಡ ಅಂಗಡಿ ಮಾಲೀಕ ವಿಜಯವಾಣಿ ವರದಿಗಾರ ಜಯಶೇಖರ್ ಮಡಪ್ಪಾಡಿಗೆ ಸುದ್ಧಿ ಮುಟ್ಟಿಸಿದ್ದು, ತಕ್ಷಣ ಪವಾಡ ರಹಸ್ಯ ಬಯಲು ತಜ್ಞ, ಸಂಶೋಧಕ ಉದಯ ಗಾಂವ್‌ಕರ್ ಅವರ ಜೊತೆಗೆ ವಿಜಯವಾಣಿ ವರದಿಗಾರ ಸ್ಥಳಕ್ಕೆ ಆಗಮಿಸಿ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದ್ದಾರೆ, ನಂತರ ಸ್ವತಃ ನಿಂತು ಸ್ಥಳವನ್ನು ಸ್ವಚ್ಛಗೊಳಿಸಿ ನಿಂಬೆಹಣ್ಣನ್ನು ಕುಯ್ದು ಜ್ಯೂಸ್ ಮಾಡಿದ ಉದಯ ಗಾಂವ್‌ಕರ್ ಸ್ಥಳದಲ್ಲಿ ಸಿದ್ಧಪಡಿಸಿ ಜ್ಯೂಸನ್ನು ಕುಡಿದು ಬೇರೆಯವರಿಗೂ ನೀಡುವ ಮೂಲಕ ಮೂಡನಂಬಿಕೆಯನ್ನು ಹಬ್ಬುವ ಕಿಡಿಗೇಡಿಗಳು ನಡೆಸಿದ್ದು ಪ್ರಹಸನ ಎಂದು ಪ್ರತಿಪಾದಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಸ್ಥಳೀಯ ಅಂಗಡಿ ಮಾಲೀಕರು ಹಾಜರಿದ್ದರು.

Write A Comment