ಕುಂದಾಪುರ: ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮ ಕೆಂಪಣತೊಪ್ಲು ನಿವಾಸಿಗಳಿಗೆ ಜಲಕಂಠಕ! ವಾರಾಹಿ ನದಿ ಜೀವಜಲವೂ ಹೌದು. ಕೃಷಿ ಭಾಗ ಒಡಲೊಳಗೆ ಸೇರಿಸಿಕೊಳ್ಳುತ್ತಾ ಕಂಟವಾಗಿದೆ.
ನದಿ ಪಾತ್ರದಲ್ಲಿ ನಿರ್ಮಾಣವಾದ ನಡುಗಡ್ಡೆ, ನಿರಂತರ ಮರಳುಗಾರಿಕೆಗೆ ಹೊಳೆ ಆಳಹೆಚ್ಚಿ ಭೂಭಾಗ ಒಡಲೊಳಗೆ ಸೇರಿಸಿಕೊಳ್ಳುತ್ತಿದೆ.ದಿನೇ ದಿನೇ ಭೂಭಾಗ ಒತ್ತುವರಿ ಮಾಡಿಕೊಳ್ಳುತ್ತಿರುವುದರಿಂದ ನದಿ ಪಾತ್ರದಲ್ಲಿ ವಾಸಮಾಡುತ್ತಿರುವ 160ಕ್ಕೂ ಮಿಕ್ಕಿದ ಕುಟುಂಬ, ಎರಡೂವರೆ ಸಾವಿರಕ್ಕೂ ಮಿಕ್ಕ ಜನ ಪ್ರತೀದಿನ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಆನಗಳ್ಳಿ ಬ್ರಿಜ್‌ನಿಂದ ರೈಲ್ವೆ ಬ್ರಿಜ್ ತನಕ 2.5 ಕಿಮೀ ಹೊಳೆ ಬದಿಕಟ್ಟಿ ಸಿಮೆಂಟ್ ರಸ್ತೆ ಮಾಡುವ ಮೂಲಕ ಸುಲಭ ಸಂಚಾರದ ಜೊತೆ ಹೊಳೆ ಆಕ್ರಮಣ ತಪ್ಪಿಸಬಹುದು ಎನ್ನೋದು ಸ್ಥಳೀಯರ ವಾದ.
ಮಳೆಗಾಲದಲ್ಲಿ ಚಿಕ್ಕ ಮಳೆಗೂ ಆನಗಳ್ಳಿ ಮುಳುಗಡೆಯಾಗುತ್ತದೆ. ಇನ್ನು ವಿಪರೀತ ಮಳೆಗೆ ವಾರಾಹಿ ಹೆಚ್ಚುವರಿ ನೀರು ಬಿಟ್ಟರೆ ಮತ್ತೆ ಆನಗಳ್ಳಿಗೆ ಜಲ ಸಂಕಷ್ಟ ಸಿಗುತ್ತದೆ. ಮಳೆಗಾಲವಿಡೀ ನೀರಿನೊಟ್ಟಿಗೆ ಹೋರಾಡುವ ಜೊತೆ ವಾರಾಹಿ ನದಿ ತಮ್ಮ ಭೂಮಿ ನುಂಗುವುದ ನೋಡಿ ಅಸಹಾಯಕರಾಗಿ ಕೂರುವ ಸ್ಥಿತಿ ನದಿಯಿಂದ ಆಗಿದೆ. ಇಷ್ಟೆಲ್ಲಾ ಸಂಕಷ್ಟಕ್ಕೆ ಕಾರಣವಾದ ವಾರಾಹಿ ನದಿ ಜನರ ಬಾಯಾರಿಕೆ ತಣಿಸುತ್ತದೆ! ಹೊಳೆ ಬದಿ ಇದ್ದ ಕುಟುಂಬಗಳಿಗೆ ಬೇರೆ ಜಾಗವಿಲ್ಲ.ಹೊಳೆ ಹೀಗೆ ಮುಂದುವರಿದರೆ ಜಾಗ ಖಾಲಿ ಮಾಡಬೇಕಾಗುತ್ತದೆ. ಬೇರೆ ಕಡೆ ಹೋಗುವುದಕ್ಕೂ ವ್ಯವಸ್ಥೆ ಇಲ್ಲ. ಹಾಗಾಗಿ ನದಿಗೆ ರಿವಿಟ್ಮೆಂಟ್ ಕಟ್ಟಿ ರಸ್ತೆ ಮಾಡಿಕೊಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು ಎನ್ನೋದು ಸ್ಥಳೀಯರ ಒತ್ತಾಯ.
ಆನಗಳ್ಳಿ ಗ್ರಾಮಸ್ಥರು ನದಿ ಬದಿಕಟ್ಟಿ ಸರ್ವಋತು ರಸ್ತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಲೇ ಬಂದಿದ್ದರೂ ಪ್ರತಿಫಲ ಸೊನ್ನೆ..! ಶಾಸಕರಿಗೆ, ಅಧಿಕಾರಿಗಳಿಗೆ ಹೊಳೆ ಬದಿ ಕಟ್ಟಿ ರಸ್ತೆ ಮಾಡುವ ಮೂಲಕ ನಮ್ಮ ಮನೆ ಜಾಗ ಉಳಿಸಿಕೊಡಿ ಎಂದು ದಂಬಾಲು ಬಿದ್ದಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸ್ಥಳೀಯ ಆಡಳಿತ, ಅಧಿಕಾರಿಗಳು ಆನಗಳ್ಳಿ ಸಿಆರ್‌ಝಡ್ ವಲಯಕ್ಕೆ ಸೇರುವುದರಿಂದ ಜನರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದೆ. ಆದರೆ ಕುಂದಾಪುರ ಖಾರ್ವಿಕೇರಿ ರಿಂಗ್ ರಸ್ತೆ, ಹೇರಿಕುದ್ರು ರಿಂಗ್ ರಸ್ತೆ ಸಿಆರ್‌ಝಡ್ ವಲಯ ಒಂದರಲ್ಲಿದ್ದರೂ ನಡೆಯುತ್ತದೆ. ಆದರೆ ಆನಗಳ್ಳಿ ಹೊಳೆ ಬದಿಕಟ್ಟಿ ರಸ್ತೆ ಮಾಡುವುದಕ್ಕೆ ಸಿಆರ್‌ಝಡ್ ರೂಲ್ಸ್ ಅಡ್ಡಿ ಮಾಡುತ್ತಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನದಿ ಒತ್ತುವರಿಗೆ ಶಾಶ್ವತ ಪರಿಹಾರ ಸಿಗದಿದ್ದರೆ ಜನ ಎಲ್ಲಿ ಹೋಗಿ ವಾಸಮಾಡಬೇಕು ಎನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.
ಆನಗಳ್ಳಿ ವಾರಾಹಿ ನದಿ ಪಾತ್ರದಲ್ಲಿ ಬದಿ ಕಟ್ಟಿ ಸರ್ವಋತು ರಸ್ತೆ ಮಾಡುವುದರಿಂದ ಭೂ ಕೊರೆತೆ ಹಾಗೂ ಆನಗಳ್ಳಿ ಸಲಭ ಸಂಚಾರಕ್ಕೆ ಸಹಕಾರಿ ಆಗಲಿದೆ ಎಂಬ ಮನವಿ ಗ್ರಾಪಂ, ಹಾಗೂ ಶಾಸಕರಿಗೆ ನೀಡಿದ್ದು, ನಮ್ಮ ಮನವಿಗೆ ಕಿಲುಬುಕಾಸಿನ ಬೆಲೆ ಕೊಟ್ಟಿಲ್ಲ. ಆನಗಳ್ಳಿ ಸೇತುವೆಯಿಂದ ರೈಲ್ವೆ ಸೇತುವೆ ತನಕ ಹೊಳೆ ಬದಿಕಟ್ಟಿ ರಸ್ತೆ ಮಾಡಿಕೊಡುವ ಮೂಲಕ ಸಂಭವನೀಯ ಅಪಾಯ ತಪ್ಪಿಸಬೇಕು. ಇಲ್ಲದಿದ್ದರೆ ಊರವರು ಸೇರಿ ಆನಗಳ್ಳಿ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ.
-ಕೆವಿನ್ ಡಿಸೋಜಾ, ಸ್ಥಳೀಯ ನಿವಾಸಿ
ಕಳೆದ ಐವತ್ತು ವರ್ಷದ ಹಿಂದೆ ನಾನು ನೆಲೆಸಿದ್ದು, ಹಿಂದೆ ಹೊಳೆ ಬಹಳ ಹಿಂದಕ್ಕಿದ್ದು, ಬರುಬರುತ್ತಾ ನದಿ ನಮ್ಮ ಭೂಭಾಗ ನುಂಗುತ್ತಾ ಬಂದಿದೆ. ನಮ್ಮ ಹಕ್ಕಿನ ಜಾಗ ಈಗ ಹೊಳೆಯೊಳಗೆ ಸೇರಿದೆ. ನೀರು ನುಗ್ಗುವುದರಿಂದ ತೆಂಗಿನ ಮರಗಳು ನದಿಗೆ ಜಾರುತ್ತಿದ್ದು, ೩೦ ಮೀಟರ್‌ನಷ್ಟು ಭೂಮಿ ಹೊಳೆ ನುಂಗಿದೆ. ಬದಿಕಟ್ಟಿ ಸರ್ವರುತು ರಸ್ತೆ ಮಾಡಿದರೆ, ಸಂಚಾರದ ಜೊತೆ ಭೂ ಭಾಗ ರಕ್ಷಣೆ ಮಾಡಿದಂತೆ ಆಗುತ್ತದೆ.
– ಜೂಲಿಯಾನಾ ಡಿಸೋಜಾ, ಸ್ಥಳೀಯ ಹಿರಿಯ ಮಹಿಳೆ
ಕುಂದಾಪುರ ಎನ್‌ಹೆಚ್‌ನಿಂದ ಆನಗಳ್ಳಿ ರಸ್ತೆ ವಿಸ್ತರಣಗೆ 1.5 ಕೋಟಿ ಮಂಜೂರಾಗಿದ್ದು, ರಸ್ತೆ ವಿಸ್ತರಣೆಗೆ ಜಾಗದಕ್ಕೆ ಪರಿಹಾರ ನೀಡಿ ಬಿಡಿಸಿಕೊಳ್ಳಲಾಗುತ್ತದೆ. ಹಾಗೆ ಆನಗಳ್ಳಿ ಕೆಂಪಣತೊಪ್ಲು ಜನರ ಬೇಡಿಕಯಾದ ನದಿ ರಿವಿಟ್ಮೆಂಟ್ ಕಟ್ಟಿ ಸರ್ವಋತು ರಸ್ತೆ ನಿರ್ಮಾಣ ಆಧ್ಯತೆ ಮೇಲೆ ಮಾಡುವ ಪಯತ್ನ ಮಾಡಲಾಗುತ್ತದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ, ಕುಂದಾಪುರ
Comments are closed.