ಕರಾವಳಿ

ಈ ಬಾರಿ ಉಡುಪಿ ಕೃಷ್ಣನ ಅಷ್ಟಮಿ ಪ್ರಸಾದ ಭಕ್ತರಿಗೆ ತಲುಪೋದು ಹೇಗೆ ಗೊತ್ತಾ..?

Pinterest LinkedIn Tumblr

ಉಡುಪಿ: ಕಳೆದ ಐದಾರು ತಿಂಗಳಿನಿಂದ ಕೊರೋನಾ ಮಹಾಮಾರಿ ಪ್ರಪಂಚವನ್ನೇ ಬೆಚ್ಚಿಬೇಳಿಸಿದೆ. ಕರ್ನಾಟಕದಲ್ಲಿಯೂ ಕೊರೋನಾ ಪ್ರಕರಣಗಳು ಜಾಸ್ಥಿಯಿರುವ ಕಾರಣ ಲಾಕ್ಡೌನ್ ತೆರವಾಗಿದ್ದರೂ ಕೂಡ ಹಬ್ಬಹರಿದಿನಗಳ ಆಚರಣೆಗೆ ಸರಕಾರ ನಿಯಮಾವಳಿ ರೂಪಿಸಿದೆ. ಅಂತೆಯೇ ಈ ಬಾರಿ ಶ್ರೀಕೃಷ್ಣ ಅಷ್ಟಮಿ ಸರಳವಾಗಿ ನಡೆದಿದೆ. ಆದರೆ ಭಕ್ತರಿಗೆ ಪ್ರಸಾದ ತಲುಪಿಸಲು ಮಠ ಉತ್ತಮ ಕ್ರಮ ಕೈಗೊಂಡಿದೆ.

ಪೊಡವಿಗೊಡೆಯ ಮುರಳೀಧರನ ಕ್ಷೇತ್ರವಾದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಸರಕಾರದ ಆದೇಶ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಆಚರಣೆ ಮಾಡುವುದರಿಂದ ಭಕ್ತಾದಿಗಳಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಸಾಧ್ಯವಾದಷ್ಟು ಭಕ್ತಾದಿಗಳಿಗೆ ಕೃಷ್ಣ ಪ್ರಸಾದ ವಿತರಣೆ ಮಾಡಬೇಕೆಂಬ ಉದ್ದೇಶದಿಂದ ಶ್ರೀ ಮಠದಲ್ಲಿ ತಯಾರಿಸಿದ ಪ್ರಸಾದವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ವಿತರಿಸಲು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಂಸ್ಥೆಯ ಕಾರ್ಯಕರ್ತರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎನ್.ಎಂ.ಪಿ.ಟಿ ಅಧ್ಯಕ್ಷರಾದ ವೆಂಕಟರಾಮನ್,ಮಠದ ವ್ಯವಸ್ಥಾಪಕರಾದ ಗೋವಿಂದ್ರಾಜ್ ಮೊದಲಾದವರು ಉಪಸ್ಥಿತರಿದ್ದರು.

Comments are closed.