ಕರ್ನಾಟಕ

ಮೈಸೂರು: ಮೋಡಿ ಮಾಡಿದ ಸ್ವೀಡನ್ ಬ್ಯಾಂಡ್

Pinterest LinkedIn Tumblr

pvec30dec14mys109

ಮೈಸೂರು: ಸ್ವೀಡನ್‌ನ ‘ಕಿರಿಯಾಕ್‌’ ತಂಡದ ರಾಕ್‌ಬ್ಯಾಂಡ್‌ ಸೋಮವಾರ ಪ್ರವಾಸಿಗರನ್ನು ಮೋಡಿ ಮಾಡಿತು. ‘ಡ್ರಮ್ಸ್‌’ಗಳಿಂದ ನಿಯಮಿತ­ವಾಗಿ ಹೊರ­ಹೊಮ್ಮುತ್ತಿದ್ದ ನಿನಾದಕ್ಕೆ ಇಲ್ಲಿಯ ಅಂಬಾವಿಲಾಸ ಅರಮನೆ ಅಂಗಳದಲ್ಲಿ ನೆರೆದವರು ಪುಳಕಿತರಾದರು.

‘ಮರೆಯಲಾಗದ ಡಿಸೆಂಬರ್‌’ ಪ್ರವಾಸಿ ಉತ್ಸವದಲ್ಲಿ ಜಿಲ್ಲಾಡಳಿತ ಸೋಮವಾರ ಸಂಜೆ ಹಮ್ಮಿ­ಕೊಂಡಿದ್ದ ಮೆರವಣಿಗೆಯಲ್ಲಿ ವಿದೇಶಿ ಬ್ಯಾಂಡ್‌ ಪ್ರಮುಖ ಆಕರ್ಷಣೆಯಾಯಿತು.

30 ಮಂದಿ ಯುವಕ–ಯುವತಿ­ಯರ ತಂಡ ಸಂಗೀತದ ರಸಧಾರೆ ಹರಿಸಿತು. ಬ್ರಜಿಲ್‌ನ ಈಶಾನ್ಯ ಭಾಗದ ಜಾನಪದ ಹಾಗೂ ಸ್ವೀಡನ್‌ನ ಸಂಗೀತ ಬ್ಯಾಂಡ್‌­ನಲ್ಲಿ ಮೇಳೈಸಿದ್ದವು. 13 ವರ್ಷದ ಹಿಂದೆ ಆರಂಭಗೊಂಡ ಈ ಬ್ಯಾಂಡ್‌ ವಿಶ್ವದ ವಿವಿಧ ದೇಶಗಳಲ್ಲಿ ಈಗಾಗಲೇ ಪ್ರದ­ರ್ಶನ ನೀಡಿದೆ. ಉತ್ಸವಗಳಿಗೆ ಜೀವ ತುಂಬುವ ಈ ಬ್ಯಾಂಡ್‌ನಲ್ಲಿ 17ರಿಂದ 45ರೊಳಗಿನ ಹರೆಯದ ಕಲಾವಿದರು ಪಾಲ್ಗೊಂಡಿದ್ದರು.

ಭಿನ್ನವಾಗಿ ಗೋಚರಿಸಿದ ಈ ಬ್ಯಾಂಡ್‌ ಅನೇಕರನ್ನು ಸೆಳೆಯಿತು. ಸೊಂಟಕ್ಕೆ ನೇತು ಹಾಕಿಕೊಂಡಿದ್ದ ವಾದ್ಯಕ್ಕೆ ಎರಡೂ ಕೈಯಲ್ಲಿದ್ದ ದಂಡದಿಂದ ಬಾರಿಸುತ್ತಿದ್ದ ರೀತಿ ಹೃನ್ಮನ ಸೆಳೆಯಿತು.

Write A Comment