ಕರ್ನಾಟಕ

ಬೆದರಿಕೆ ಹಾಕಿದ್ದ ಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನ ಪತಿಯದ್ದಲ್ಲ: ಪತ್ನಿ ವಿಜಯಲಕ್ಷ್ಮಿ

Pinterest LinkedIn Tumblr

darshannnn

ಬೆಂಗಳೂರು: ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಕೌಟುಂಬಿಕ ಕಲಹಕ್ಕೆ ಹೊಸ ತಿರುವು ದೊರೆತಿದ್ದು, ಪತ್ನಿಯನ್ನು ದರ್ಶನ್ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದ್ದ ಆಡಿಯೋ ತುಣುಕಿನಲ್ಲಿರುವ ಧ್ವನಿ ದರ್ಶನ್ ದಲ್ಲ ಎಂದು ಹೇಳುವ ಮೂಲಕ ಪತ್ನಿ ವಿಜಯಲಕ್ಷ್ಮಿ ಅವರ ಬೆನ್ನಿಗೆ ನಿಂತಿದ್ದಾರೆ.

ನಟ ದರ್ಶನ್‌ ಅವರ ಧ್ವನಿಯನ್ನೇ ಹೋಲುವ ಆಡಿಯೊ ತುಣುಕು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಆಡಿಯೊದಲ್ಲಿ ಅವಾಚ್ಯ ಶಬ್ದಗಳಿಂದ ವಿಜಯಲಕ್ಷ್ಮೀ ಅವರನ್ನು ನಿಂದಿಸಲಾಗಿದೆ. 50 ಸೆಕೆಂಡಿನ ಈ ಆಡಿಯೊ ತುಣುಕಿನಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ತಮ್ಮ ಪತ್ನಿ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಇದೀಗ ಈ ಆಡಿಯೋ ತುಣುಕು ವೈರಲ್ ಆಗಿದ್ದು, ಭಾರಿ ವಿವಾದವನ್ನು ಹುಟ್ಟುಹಾಕಿದೆ.

ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮೀ ಅವರು, “ಆಡಿಯೊ ತುಣುಕು ನಕಲಿಯಾಗಿದ್ದು, ಆಡಿಯೊ ತುಣುಕಿನಲ್ಲಿರುವ ಧ್ವನಿ ತಮ್ಮ ಪತಿಯದಲ್ಲ. ನಮ್ಮ ಕೌಟುಂಬಿಕ ಕಲಹವನ್ನು ಮೂರನೇ ವ್ಯಕ್ತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವರಿಂದಲೇ ಈ ನಕಲಿ ಆಡಿಯೋ ತುಣುಕು ಸೃಷ್ಟಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಕೌಟುಂಬಿಕ ಸಮಸ್ಯೆ ಬಗ್ಗೆ ಮಾಧ್ಯಮಗಳಲ್ಲಿ ಮೇಲಿಂದ ಮೇಲೆ ನಾನಾ ವಿಷಯಗಳು ಪ್ರಸಾರವಾಗುತ್ತಿವೆ. ಈಗ ಆಡಿಯೊ ಬಿಡುಗಡೆಯಾಗಿದೆ. ಈ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ಕಿರಿಕಿರಿಯಾಗುತ್ತಿದೆ ಎಂದೂ ವಿಜಯಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದಾರೆ.

ಅಂತೆಯೇ ತಮ್ಮ ಪತಿ ಎಂದಿಗೂ ಇಂತಹ ಅಶ್ಲೀಲ ಪದಗಳನ್ನು ಬಳಕೆ ಮಾಡುವುದಿಲ್ಲಯ ಇದು ಯಾರೋ ಬೇಕೆಂದೇ ಹರಿಬಿಟ್ಟಿರುವ ಆಡಿಯೋ ಎಂದು ಅವರು ಕಿಡಿಕಾರಿದ್ದಾರೆ.

Write A Comment