ಶಿವಮೊಗ್ಗ : ಸಂಸದೆ ಶೋಭಾ ಮನೆ ಮೇಲೆ ಐಟಿ ದಾಳಿ ನಡೆಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಕ್ರಮ ಸಂಪತ್ತು ಸಿಗುತ್ತದೆ ಎಂದು ಮಾಜಿ ಶಾಸಕ , ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಬಿಜೆಪಿಯ ನೀಚರು ಐಟಿ, ಇಡಿ ಬಳಸಿಕೊಂಡು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ನಾಯಕರ ಬದಲು ಶೋಭಾ ಮೇಡಂ ಮನೆ ಮೇಲೆ ದಾಳಿ ಮಾಡಲಿ ಆಗ ಖಜಾನೆ ಸಿಗುತ್ತದೆ. ಯಡಿಯೂರಪ್ಪ ಆಕ್ರಮ ಆಸ್ತಿ ಮತ್ತು ಸೀಚ್ ಹಂಚಿಕೆ ಹಗರಣದಲ್ಲಿ ಮಾಡಿದ ದುಡ್ಡು ಸಿಗುತ್ತದೆ ಎಂದರು.
ಇದೇ ವೇಳೆ ನಾನು ಬಿಜೆಪಿ ಅಧಿಕಾರಕ್ಕೆ ಬರಬಾರದು, ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂದು ಶಿಕಾರಿಪುರದ ದೇವರಿಗೆ ಹರಕೆ ಹೊತ್ತಿದ್ದೆ,ಅದನ್ನು ತೀರಿಸಿªದ್ದೇನೆ ಎಂದರು.
Comments are closed.