ಕಲಬುರ್ಗಿ: ಉಗ್ರರ ದಾಳಿಯ ನಂತರ ಭಾರತ ಪಾಕ್ ಮೇಲೆ ಏರ್ ಸ್ಟ್ರೈಕ್ ಮಾಡಿದೆ. ರಜೆಗೆ ತೆರಳಿದ್ದ ಸೈನಿಕರಿಗೆ ಸೇವೆಗೆ ವಾಪಸ್ಸಾಗುವಂತೆ ಬುಲಾವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ, ರಜೆ ಮೇಲೆ ಬಂದಿದ್ದ ಕಲಬುರ್ಗಿಯ ಮಹಾದೇವ್ ಕುಂಬಾರ್ ಭಾರತದ ಗಡಿಯತ್ತ ಪ್ರಯಾಣ ಬೆಳಸಿದ್ದಾರೆ.
17 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ
ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹಾದೇವ, 25 ದಿನಗಳ ಮಟ್ಟಿಗೆ ರಜೆ ಹಾಕಿ ಬಂದಿದ್ದರು. ಆದರೆ ಇದೀಗ ಕಾಶ್ಮೀರ ಗಡಿಯಲ್ಲಿ ಉದ್ವಿಗ್ನ ವಾತಾವರಣ ಆವರಿಸಿರುವುದರಿಂದ ತಕ್ಷಣವೆ ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೇನಾಧಿಕಾರಿಗಳು ತುರ್ತು ಕರೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಯೋಧ ಮಹಾದೇವ ಕುಂಬಾರ್ ಅವರು ನಾಗರಕೋಯ್ಲ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದಾರೆ.
ಶತ್ರುಗಳನ್ನು ಸದೆಬಡಿಯುವ ಹುಮ್ಮಸ್ಸಿನೊಂದಿಗೆ ಭಾರತದ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕೆಂಬ ಛಲದೊಂದಿಗೆ ಗಡಿಯತ್ತ ಹೊರಟಿದ್ದೇನೆ ಎಂದು ಯೋಧ ಮಹಾದೇವ್ ಉತ್ಸಾಹದಿಂದ ಹೇಳಿದ್ದಾರೆ.
ತಂದೆಯೂ ಸಹ ಸೇನೆಯಲ್ಲಿದ್ದರು
ಹಲವು ವರ್ಷಗಳಿಂದ ಸೇನೆಯಲ್ಲಿರುವ ಮಹಾದೇವ್ ಅವರ ತಂದೆ ವಿಠೋಬ ಅವರೂ ಸೇವೆಯಲ್ಲಿದ್ದರು. ಪಂಜಾಬ್ ನ ಗೋಲ್ಡನ್ ಟೆಂಪಲ್ ಕಾರ್ಯಾಚರಣೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಸೇನೆಯಿಂದ ನಿವೃತ್ತಿ ಹೊಂದಿದ ನಂತರ 2012 ರಲ್ಲಿ ವಿಠೋಬ ಅವರು ನಿಧನರಾಗಿದ್ದರು. ತಂದೆಯ ಆದರ್ಶವನ್ನೇ ಮುಂದಿಟ್ಟುಕೊಂಡು ಮಹಾದೇವ್ ಸಹ ಸೇನೆಗೆ ಸೇರಿದ್ದಾರೆ.
ತಮ್ಮ ಜೀವವನ್ನು ದೇಶಕ್ಕಾಗಿ ಮುಡಿಪಿಟ್ಟು ಸೇನೆಗೆ ಸೇರಿದ ಮಹಾದೇವ್ ಅವರು ಸೇನಾ ಮುಖ್ಯಸ್ಥರ ಬುಲಾವ್ ಬರುತ್ತಿದ್ದಂತೆಯೇ ಗಡಿಯತ್ತ ಮುಖ ಮಾಡಿದ್ದಾರೆ. ಮಹಾದೇವ್ ಅವರಿಗೆ ತಾಯಿ, ಹೆಂಡತಿ, ಮುದ್ದಾದ ಮಗುವನ್ನು ಹೊಂದಿದ್ದು, ಕುಟುಂಬದ ಸದಸ್ಯರನ್ನು ಬಿಟ್ಟು ಗಡಿ ರಕ್ಷಣೆಗೆ ಹೋಗುತ್ತಿದ್ದಾರೆ. ಶಾಂತಯ್ಯಗೆ ಭಾರದ ಹೃದಯದಿಂದಲೇ ಬೀಳ್ಕೊಟ್ಟಿರುವ ಕುಟುಂಬದ ಸದಸ್ಯರು, ಯಶಸ್ವಿಯಾಗಿ ಬರಲಿ ಎಂದು ಹಾರೈಸಿದ್ದಾರೆ.
ಸೇನೆಯ ತುರ್ತು ಬುಲಾವ್ ಬರುತ್ತಿದ್ದಂತೆಯೇ ನಾಗರಕೋಯ್ಲ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದಾರೆ. ಒಂದು ವೇಳೆ ಯುದ್ಧವೇನಾದರೂ ಆರಂಭಗೊಂಡಲ್ಲಿ ಶತ್ರುಗಳ ಸದ್ದಡಗಿಸುವ ಹುಮ್ಮಸ್ಸಿನಲ್ಲಿ ಮಹಾದೇವಯ್ಯ ಗಡಿಯತ್ತ ಪ್ರಯಾಣ ಆರಂಭಿಸಿದ್ದಾರೆ.
Comments are closed.