ಮನೋರಂಜನೆ

ಬಾಲಿವುಡ್ ನಟ, ಪುತ್ರ ಸುಶಾಂತ್ ಸಿಂಗ್ ನ ಆತ್ಮಹತ್ಯೆಯ ಸುದ್ದಿ ಕೇಳಿ ತಂದೆಯ ಸ್ಥಿತಿ ಗಂಭೀರ

Pinterest LinkedIn Tumblr


‘ಪವಿತ್ರ ರಿಶ್ತಾ’ ಎಂಬ ಧಾರಾವಾಹಿಯಿಂದ ನಟನಾರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಇಂದು ಮುಂಬೈನ ಬಾಂದ್ರಾದಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. 34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಅವರ ಮನೆಯ ಕೆಲಸದಾಕೆ ಬಂದಾಗ ಈ ವಿಷಯ ಗೊತ್ತಾಗಿದೆ. ಬೆಡ್​ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ಕಳೆದ 6 ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.

ಕಿರುತೆರೆ ಮೂಲಕ ನಟನಾ ರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಇದುವರೆಗೂ 11 ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಾಟ್ನಾದಲ್ಲಿರುವ ಮನೆಯಲ್ಲಿದ್ದ ಸುಶಾಂತ್ ಸಿಂಗ್ ತಂದೆ ಕೃಷ್ಣ ಕುಮಾರ್ ಸಿಂಗ್ ಮಗನ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಆಘಾತದಿಂದ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಸಂಬಂಧಿಕರು ಫೋನ್ ಮಾಡಿ ಸುಶಾಂತ್ ಸಿಂಗ್ ಆತ್ಮಹತ್ಯೆಯ ಸುದ್ದಿ ಹೇಳಿದಾಗ ಕೃಷ್ಣ ಕುಮಾರ್ ಸಿಂಗ್ ಕುಸಿದುಬಿದ್ದರು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ವಿಷಯ ತಿಳಿದ ಕೂಡಲೆ ಚಂಢೀಗಢದಲ್ಲಿರುವ ಸುಶಾಂತ್ ಸಿಂಗ್ ಅಕ್ಕ ಮುಂಬೈಗೆ ಬರುತ್ತಿದ್ದಾರೆ ಎಂದು ಸುಶಾಂತ್ ತಂದೆಯ ಕೇರ್ ಟೇಕರ್ ಆಗಿರುವ ಲಕ್ಷ್ಮೀ ದೇವಿ ಮಾಹಿತಿ ನೀಡಿದ್ದಾರೆ.

Comments are closed.