ಮುಂಬಯಿ: ಶತಮಾನದ ಹಿಂದೆಯೇ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಕರಾವಳಿ ಕನ್ನಡಿಗರು ಮುಂಬಯಿಗಾಗಮಿಸಿ ಮುಂಬಯಿಯ ಕೋಟೆ ಬಾಗದಲ್ಲಿ ನೆಲೆಸುತ್ತಿದ್ದರು. ಇದೀಗ 86 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಕರಾವಳಿಯ ಬೋವಿ (ಮೋಯಾ) ಸಮುದಾಯದ ಹಿರಿಯರು ಮೀನುಗಾರಿಕೆಯೊಂದಿಗೆ ತಮ್ಮ ಮುಂದಿನ ಪೀಳಿಗೆಯವರನ್ನು ಶೈಕ್ಷಣಿಕವಾಗಿ ಶ್ರೀಮಂತ ಗೊಳಿಸಿದ್ದು ಅಭಿನಂದನೀಯ ಎಂದು ಮಹಾರಾಷ್ಟ್ರ ಹೋಟೇಲ್ಸ್ ಅಸೋಷಿಯೇಶನ್ ನ ಅಧ್ಯಕ್ಷ, ಖ್ಯಾತ ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಯವರು ನುಡಿದರು.
ಡಿ.11ರಂದು ಸಂತಾಕ್ರೂಸ್ ಪೂರ್ವ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ವೈಯಂಬಿಎ ಅಧ್ಯಕ್ಷರಾದ ಯಶವಂತ ಎ. ಕೆ. ಇವರ ಅಧ್ಯಕ್ಷತೆಯಲ್ಲಿ ದಿನಪೂರ್ತಿ ಜರಗಿದ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ೮೬ ರ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿದ ವಿರಾರ್ ಶಂಕರ್ ಶೆಟ್ಟಿ ಯವರು ಮಾತನಾಡುತ್ತಾ ಈ ಸಮಾಜವು ತವರೂರಲ್ಲಿ ಕೆಲವು ಶಾಲೆಗಳನ್ನು ಹೊಂದಿದ್ದು ಸಮಾಜದಲ್ಲಿ ಅನೇಕರು ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದು ಶೈಕ್ಷಣಿಕವಾಗಿಯೂ ಶ್ರೀಮಂತವಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಮೊಯಾ ಸಮುದಾಯದವರು ಪ್ರತಿಭಾವಂತರು ಮಾತ್ರವಲ್ಲ ಸಮುದ್ರದ ಅಲೆಗೆ ಎದೆಯೊಡ್ಡುವ ದೈರ್ಯಶಾಲಿಗಳು ಎಂದು ನುಡಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಷಿಯೇಶನಿನ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರು ಮಾತನಾಡುತ್ತಾ ಈ ಸಂಘಟನೆಯು ಸ್ವತಂತ್ರಕ್ಕೆ ಮೊದಲೇ ಸ್ಥಾಪನೆಗೊಂಡು 86 ವರ್ಷಗಳನ್ನು ಪೂರೈಸಿದ್ದು ಅಭಿನಂದನೀಯ. ಸಮಾಜದಲ್ಲಿನ ವಿವಿಧ ಸಾಧಕರಿಗೆ ಇಂದು ಸನ್ಮಾನಿಸಲಾಗಿದ್ದು ಊರಲ್ಲಿ ಶಾಲೆಗಳನ್ನು ಈ ಸಮಾಜ ಹೊಂದಿದೆ. ಕರಾವಳಿಯ ಬೋವಿ (ಮೋಯಾ) ಸಮಾಜದ ಸಮುದಾಯ ಭವನದ ಕನಸು ಆದಷ್ಟು ಬೇಗನೇ ನೆರವೇರಲಿ ಎಂದು ಶುಭ ಹಾರೈಸಿದರು.
ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್ ನ ಉಪಾಧ್ಯಕ್ಷ ತಾರನಾಥ ಉಚ್ಚಿಲ್ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಕೃಪಾಕರ್ ಕುಂಬ್ಲೆ ಮತ್ತು ಸೂರಜ್ ಉಚ್ಚಿಲ್ ಇವರು ಅತಿಥಿಗಳನ್ನು ಪರಿಚಯಿಸಿದರು. ಪಧಾನ ಕಾರ್ಯದರ್ಶಿ ಕಿಶೋರ್ ಉದ್ಯಾವರ್ ವೈಯಂಬಿಎ ಯ ಚಟುವಟೆಕೆಗಳ ಬಗ್ಗೆ ಮಾಹಿತಿಯಿತ್ತರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯಶವಂತ ಎ.ಕೆ. ಯವರು ಸಮಾಜದ ಯುವ ಪೀಳಿಗೆಯು ಅಸೋಷಿಯೇಶನ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಕ್ರೀಯಾಶೀಲರಾಗಿ ಸಂಘಟನೆಯನ್ನು ಬಲ ಪಡಿಸುದರೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಸಮಾಜದಲ್ಲಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರಾದ ಡಾ. ಧನ್ ರಾಜ್ ಎನ್ ಉಚ್ಚಿಲ್, ವಿಶ್ವರಾಜ್ ಎನ್ ಮುಟ್ಟ, ಅನಿಲ್ ಕುಮಾರ್ (ಮಾಷ್ಟರ್), ಶ್ರೀಮತಿ ನೀತಾ ಪಾರ್ಕರ್, ಮನೋಜ್ ಎಸ್. ಐಲ್, ಮತ್ತು ಧೀರಜ್ ಬಿ. ಉದ್ಯಾವರ್ ಇವರನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸಿಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಮಿತಾ ಉಚ್ಚಿಲ್ಕರ್, ಜಯಲಕ್ಷ್ಮಿ ಶಿರಿಯ, ಅಭಿಶಿತಾ ಕಾಸರಗೋಡು, ಕುಮಾರ್ ಕೆ ಉದ್ಯಾವರ್, ಮೀನಾಕ್ಷಿ ಉಚ್ಚಿಲ್ಕರ್ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಸನ್ಮಾನಿತರ ಪರವಾಗಿ ಅನಿಲ್ ಕುಮಾರ್ (ಮಾಷ್ಟರ್), ಶ್ರೀಮತಿ ನೀತಾ ಪಾರ್ಕರ್ ಮತ್ತು ಧೀರಜ್ ಬಿ. ಉದ್ಯಾವರ್ ಮಾತನಾಡಿ ಅಸೋಷಿಯೇಶನ್ ಗೆ ಕೃತಜ್ನತೆ ಸಲ್ಲಿಸಿದರು.
ಸಮಾರಂಭವನ್ನು ಬೆಳಿಗ್ಗೆ ಮೀರಾ ರೋಡ್ ನ ಉದ್ಯಮಿಗಳಾದ ರವೀಂದ್ರ ಎನ್ ವಿಠಲ್ ಮತ್ತು ವಿದ್ಯಾ ಆರ್ ವಿಠಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್ ಮತ್ತು ನಗರದ ಖ್ಯಾತ ಉದ್ಯಮಿ ಕೆ. ಡಿ. ಶೆಟ್ಟಿಯವರು ಆಗಮಿಸಿ ಶುಭ ಹಾರೈಸಿದರು.
ಸಮಾಜದ ಹಿರಿಕಿರಿಯರಿಂದ ಹಾಗೂ ಊರಿನಿಂದ ಆಗಮಿಸಿದ ಸಮಾಜದ ಕಲಾವಿಧರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೋಶಾಧಿಕಾರಿ ಸುಭಾಷ್ ಚಂದ್ರ ಉಚ್ಚಿಲ್, ಜೊತೆ ಕಾರ್ಯದರ್ಶಿ ಕೃಪಾಕರ ಕೆ. ಕುಂಬ್ಳೆ, ಜೊತೆ ಕೋಶಾಧಿಕಾರಿ ನಮಿತಾ ಎಸ್ ಉಚ್ಚಿಲ್ಕರ್, ಸಾಂಸ್ಕೃತಿಕ ಸಮಿತಿಯ ಚಂದ್ರ ವಾಮಂಜೂರು ಸಮಿತಿಯ ಸದಸ್ಯರುಗಳಾದ ಹರೀಶ್ ಉದ್ಯಾವರ್, ಶೈಲೇಶ್ ಉದ್ಯಾವರ್, ಜಯಪ್ರಕಾಶ್ ಉದ್ಯಾವರ್, ಸುಭಾಷ್ ಶಿರಿಯಾ, ಯಶೋದಾ ಭಟ್ಟಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುದೇಶ್ ಉದ್ಯಾವರ್, ದಿವ್ಯ ಉದ್ಯಾವರ್, ವೀಕ್ಷಿತ್ ಉದ್ಯಾವರ್, ಖುಷಿ ಶಿರಿಯ, ಸೂರಜ್ ಉಚ್ಚಿಲ್ ನಿರೂಪಿಸಿದರು. ಅಸೋಷಿಯೇಶನ್
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
Comments are closed.