ಕಳೆದ ವರ್ಷದ ಕಡತ ಚಿತ್ರ
ಮಂಗಳೂರು, ಎಪ್ರಿಲ್.03: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಹತ್ತು ಸಮಸ್ತರು, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಪ್ರಿಲ್ 5, ಸೋಮವಾರದಂದು ಬೆಳಿಗ್ಗೆ 9.30 ಗಂಟೆಗೆ ಲೋಕಕಲ್ಯಾಣಾರ್ಥ, ಸಾಮೂಹಿಕ ಪ್ರಾರ್ಥನೆ, ಸೀಯಾಳಾಭಿಷೇಕ ಆಯೋಜಿಸಲಾಗಿದೆ.
ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಎ.ಜೆ. ಶೆಟ್ಟಿ ಮತ್ತು ಸದಸ್ಯರು, ಆಡಳಿತಾಧಿಕಾರಿಗಳು, ಹತ್ತು ಸಮಸ್ತರು ಮತ್ತು ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ಮುಂಚಿತವಾಗಿ ದೇವಳದ ಕಛೇರಿಗೆ ತಂದೊಪ್ಪಿಸಬಹುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಈ ಮೊಬೈಲ್ ನಂಬ್ರವನ್ನು ಸಂಪರ್ಕಿಸಿ: ಮೊ : 9845083736
Comments are closed.