ಬೆಂಗಳೂರು: ದೇಶದಲ್ಲಿ ಮುಂಚೂಣಿಯಲ್ಲಿರುವ ವಿಡಿಯೋ-ಆನ್-ಡಿಮ್ಯಾಂಡ್ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್ ಆಗಿರುವ ವಯೋಕಾಂ18 ರ ವೂಟ್‍ನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಬಿಗ್‍ಬಾಸ್ ಆಗಸ್ಟ್ 6 ರಿಂದ ಪ್ರಸಾರವಾಗಲಿದೆ. ಒಟಿಟಿ ಪ್ಲಾಟ್‍ಫಾರ್ಮ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಗ್‍ಬಾಸ್ ಕನ್ನಡದ ಡಿಜಿಟಲ್ ಎಕ್ಸ್‍ಕ್ಲೂಸಿವ್ ಆವೃತ್ತಿ ಇದಾಗಿದ್ದು, ಕಳೆದ ವರ್ಷ ಒಟಿಟಿ ಹಿಂದಿಯಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋ ಯಶಸ್ವಿಯಾದದ್ದು ಮತ್ತು ಡಿಜಿಟಲ್ ಎಂಟರ್‍ಟೇನ್ಮೆಂಟ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ವೂಟ್ ಮತ್ತೊಮ್ಮೆ ತನ್ನ ಎಲ್ಲಾ ಕನ್ನಡ ವೀಕ್ಷಕರಿಗೆ 6 ಆಗಸ್ಟ್ 2022 ರಿಂದ ಅತಿ ಹೆಚ್ಚು ಮನರಂಜನೆ ಮತ್ತು ಡ್ರಾಮದ ಬಿಗ್‍ಬಾಸ್ ರಸದೌತಣವನ್ನು ನೀಡುತ್ತಿದೆ. ಈ ಕಾರ್ಯಕ್ರಮವನ್ನು ವಿಮಲ್ ಇಲೈಚಿ ಮತ್ತು ಪೇಟಿಎಂ ಸಹ ಪ್ರಾಯೋಜಕ ಸಂಸ್ಥೆಯಾಗಿ ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿವೆ. ಬಿಗ್‍ಬಾಸ್ ಒಟಿಟಿ ಕನ್ನಡವು 6 ವಾರಗಳ ಅಭೂತಪೂರ್ವವಾದ ಕಾರ್ಯಕ್ರಮವಾಗಿದೆ. ವೀಕ್ಷಕರು ವಿಶೇಷ ಕಟ್‍ಗಳು, ರೌಂಡ್-ದಿ-ಕ್ಲಾಕ್ ಕಂಟೆಂಟ್ ಡ್ರಾಪ್‍ಗಳು ಮತ್ತು ಸಂಪೂರ್ಣ ಸಂವಾದಾತ್ಮಕ 24*7 ಲೈವ್‍ಫೀಡ್ ಅನ್ನು ಮನೆಯಿಂದ ವೀಕ್ಷಿಸುವ ಅನುಭವವನ್ನು ನೀಡುತ್ತದೆ.
ಮೊಟ್ಟಮೊದಲ ಒಟಿಟಿ ಆವೃತ್ತಿಯನ್ನು ಇಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಘೋಷಣೆ ಮಾಡಲಾಯಿತು. ಪವರ್ ಪ್ಯಾಕ್ಡ್ ಈವೆಂಟ್ ಇದಾಗಿದ್ದು, ಇದನ್ನು ಕನ್ನಡ ಚಿತ್ರರಂಗದ ಬಾದ್‍ಷಾ ಕಿಚ್ಚ ಸುದೀಪ್ ಅವರು ಈ ಮಾಧ್ಯಮಗೋಷ್ಠಿಯ ಕೇಂದ್ರಬಿಂದುವಾಗಿದ್ದರು.
ಕ್ರೇಜಿ ಅಭಿಮಾನಿಗಳ ನಡುವೆ ಅವರು ಕಾರ್ಯಕ್ರಮವನ್ನು ಘೋಷಣೆ ಮಾಡಿದರು. ಈ ಕಾರ್ಯಕ್ರಮವನ್ನು ವಯಾಕಾಂ 18 ರ ಕನ್ನಡ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಪರಮ್, ಎಸ್‍ವಿಒಡಿ ಮತ್ತು ವಯಾಕಾಂ18 ರ ಇಂಟರ್‍ನ್ಯಾಷನಲ್ ಬ್ಯುಸಿನೆಸ್ ಮುಖ್ಯಸ್ಥರಾದ ಫರ್ಸದ್ ಪಾಲಿಯಾ ಮತ್ತು ಎಂಡಮೊಲ್ ಶೈನ್ ಇಂಡಿಯಾದ ಸಿಇಒ ರಿಶಿ ನೇಗಿ ಅವರು ಈ ಸಂದರ್ಭದಲ್ಲಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ವಿಒಡಿ ಮತ್ತು ವಯಾಕಾಂ18 ರ ಇಂಟರ್‍ನ್ಯಾಷನಲ್ ಬ್ಯುಸಿನೆಸ್ ಮುಖ್ಯಸ್ಥರಾದ ಫರ್ಸದ್ ಪಾಲಿಯಾ ಅವರು, ‘ದೈನಂದಿನ ಬಳಕೆಯ ಪ್ರತಿಪಾದನೆಯನ್ನು ರಚನೆ ಮಾಡುವ ತಂತ್ರದೊಂದಿಗೆ ನಾವು ವೂಟ್ ನಲ್ಲಿ ಬಹುಮುಖ ಮತ್ತು ತಲ್ಲೀನಗೊಳಿಸುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದ್ದೇವೆ. ಈ ವಿಭಾಗದಲ್ಲಿ ಪ್ರಾದೇಶಿಕ ಬೆಳವಣಿಗೆಯ ಅವಕಾಶಗಳನ್ನು ಅನುಸರಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳ ಪ್ರಕಾರಗಳು ಮತ್ತು ಸ್ವರೂಪಗಳಲ್ಲಿನ ಕೊಡುಗೆಗಳನ್ನು ಯಶಸ್ವಿಯಾಗಿ ಹೆಚ್ಚಿಸಲು ನಮಗೆ ಸಹಾಯ ಮಾಡಿದೆ’ ಎಂದರು.
“ಡಿಜಿಟಲ್ ಎಂಟರ್‍ಟೇನ್ಮೆಂಟ್ ಕ್ಷೇತ್ರದಲ್ಲಿ ಬಿಗ್‍ಬಾಸ್ ಒಟಿಟಿ ಹಿಂದಿ ಒಂದು ಗೇಮ್ ಚೇಂಜರ್ ಎಂಬುದನ್ನು ಸಾಬೀತು ಮಾಡಿದೆ. ಇದೀಗ ಕನ್ನಡದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿ ನೀಡುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಇದರೊಂದಿಗೆ ಕನ್ನಡದ ವೀಕ್ಷಕರಿಗೆ ಅವರ ಆಯ್ಕೆಯ ಭಾಷೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಂವಾದಾತ್ಮಕ ಅನುಭವವನ್ನು ನೀಡುವ ಹೊಸ ಹೊಸ ಮಾರ್ಗಗಳನ್ನು ಅನ್ವೇಷಣೆ ಮಾಡಲು ನಾವು ಉತ್ಸುಕರಾಗಿದ್ದೇವೆ. ವೂಟ್‍ನಲ್ಲಿನ ಕನ್ನಡ ಆವೃತ್ತಿಯಲ್ಲಿ ಈ ಐಕಾನಿಕ್ ಸ್ವರೂಪದ ಬಿಡುಗಡೆಯು ಡಿಜಿಟಲ್ ಮೊದಲ ಕಾರ್ಯತಂತ್ರವನ್ನು ಬಲಪಡಿಸುವಲ್ಲಿ ನಾವು ಹೆಚ್ಚು ಗಮನಹರಿಸಿದ್ದೇವೆ. ಅಲ್ಲದೇ, ಮಾರುಕಟ್ಟೆಗಾಗಿ ನಮ್ಮ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಮತ್ತಷ್ಟು ಉತ್ತಮಗೊಳಿಸುವುದು ಹಾಗೂ ನಮ್ಮ ಅನನ್ಯವಾದ ಸ್ವರೂಪಗಳು, ಕಥೆಗಳ ನಾವೀನ್ಯತೆಯನ್ನು ಮುಂದುವರಿಸುತ್ತೇವೆ’ಎಂದು ತಿಳಿಸಿದರು.
ಕಿಚ್ಚ ಸುದೀಪ್ ಮಾತನಾಡಿ, “ಈ ಬಿಗ್ ಬಾಸ್ ಒಟಿಟಿ ಸೀಸನ್‍ನಲ್ಲಿ ಬಿಗ್‍ಬಾಸ್ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದರ ಕುರಿತು ವೀಕ್ಷಕರು ಅಂತಿಮ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅವರು, 24/7 ಸ್ಪರ್ಧಿಗಳನ್ನು ನೋಡುತ್ತಾರೆ ಮತ್ತು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತಾರೆ. ಇದು ಸ್ಪರ್ಧಿಗಳು ಆಟವನ್ನು ಆಡುವ ವಿಧಾನವನ್ನು ಬದಲಾಯಿಸುತ್ತದೆ. ಇದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ’’ ಎಂದು ಹೇಳಿದರು.
ವಯಾಕಾಂ18 ರ ಕನ್ನಡ ಕ್ಲಸ್ಟರ್‍ನ ಬ್ಯುಸಿನೆಸ್ ಹೆಡ್ ಪರಮ್ ಅವರು ಮಾತನಾಡಿ, “ಈ ಸ್ಪರ್ಧೆಯಲ್ಲಿ ನಮಗೆ ಉತ್ತಮ ಸ್ಪರ್ಧಿಗಳ ಮಿಶ್ರಣ ದೊರೆತಿದೆ. ಈ ಮನೆಯೊಳಗಿರುವವರು ಯುವ ಮತ್ತು ಡಿಜಿಟಲ್ ಸ್ನೇಹಿಯಾಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ. 24/7 ಲೈವ್ ಸ್ಟ್ರೀಮಿಂಗ್ ಇರುವುದರಿಂದ ಹೆಚ್ಚು ಸಂವಾದಾತ್ಕತೆಯಿಂದ ಕೂಡಿರುತ್ತದೆ. ಈ ಮೂಲಕ ಆಗಸ್ಟ್ 6 ರಿಂದ ರೋಮಾಂಚಕಾರಿ ಪ್ರಯಾಣ ಆರಂಭವಾಗಲಿದೆ ಎಂಬ ಖಾತರಿ ನನಗಿದೆ’’ ಎಂದರು.
ಎಂಡಮೋಲ್ ಶೈನ್ ಇಂಡಿಯಾದ ಸಿಇಒ ರಿಶಿ ನೇಗಿ ಅವರು ಮಾತನಾಡಿ, “ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಅತ್ಯಂತ ಪ್ರೀತಿಪಾತ್ರವಾಗುತ್ತರುವ ಶೋ ಎಂದರೆ ಬಿಗ್ ಬಾಸ್ ಆಗಿದೆ. ಇದಕ್ಕೆ ಯಾವುದೇ ಪ್ರಾದೇಶಿಕತೆ ಅಥವಾ ಸೀಸನ್‍ನ ಗಡಿಯಿಲ್ಲ! ಬಿಗ್‍ಬಾಸ್ ವಯಾಕಾಮ್18 ನೊಂದಿಗೆ ಕಳೆದ ಒಂದು ದಶಕದಲ್ಲಿ ಎಂಡಮೋಲ್ ಶೈನ್ ಇಂಡಿಯಾದ ಜೊತೆಗೆ ಯಶಸ್ವಿ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಇದು ವಿವಿಧ ಸ್ವರೂಪಗಳು, ಸ್ಕ್ರೀನ್‍ಗಳು ಮತ್ತು ಭಾಷೆಗಳಲ್ಲಿ ಶೋ ಏರ್ಪಡಿಸುವ ಮೂಲಕ ನಿರಂತರವಾಗಿ ವಿಕಸನಗೊಳ್ಳುತ್ತಲೇ ಬರುತ್ತಿದೆ. ಇದೀಗ ಈ ಪ್ರೇಕ್ಷಕರ ಮೆಚ್ಚಿನ ಬಿಗ್‍ಬಾಸ್ ಒಟಿಟಿ ಕನ್ನಡದ ಮೊದಲ ಡಿಜಿಟಲ್ ವಿಶೇಷ ಆವೃತ್ತಿಯೊಂದಿಗೆ ಹೊಸ ಸಂವಾದಾತ್ಮಕ ಆವೃತ್ತಿಯಲ್ಲಿ ಹೊಸ ಅವತಾರದಲ್ಲಿ ಬರುತ್ತಿದೆ. ಈ ಮೂಲಕ ಬಿಗ್ ಬಾಸ್ ಒಂದು ಬ್ಲಾಕ್‍ಬಸ್ಟರ್ ಎಂಟರ್‍ಟೇನರ್ ಆಗಿ ಹೊರಹೊಮ್ಮುತ್ತದೆ ಎಂದು ನಾವು ಭಾವಿಸುತ್ತೇವೆ. ಇದರೊಂದಿಗೆ ಕನ್ನಡ ಮಾರುಕಟ್ಟೆಯಲ್ಲಿ ನಮ್ಮ ಸಾಮೂಹಿಕ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಭಾವಿಸಿದ್ದೇವೆ’’ ಎಂದು ಹೇಳಿದರು.
ಬಿಗ್ ಬಾಸ್ ಕನ್ನಡ ಈ ಹಿಂದಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಆಸಕ್ತಿದಾಯಕವಾದ ಸ್ಪರ್ಧಿಗಳ ಲೈನ್-ಅಪ್ ಮತ್ತು ಅದರ ಏರಿಳಿತಗಳ ನ್ಯಾಯೋಚಿತ ಪಾಲನ್ನು ಹೊಂದಿರುವ ಇದು ರಿಯಾಲಿಟಿ ಟಿವಿ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅನಿಯಮಿತ ಪ್ರಮಾಣದ ನಾಟಕ ಮತ್ತು ಮನರಂಜನೆಯಿಂದ ತುಂಬಿರುವ ಭರವಸೆಯೊಂದಿಗೆ ಶೀಘ್ರದಲ್ಲೇ ಪ್ರೀಮಿಯರ್ ಆಗಲಿರುವ ಈ ಬಿಗ್ ಬಾಸ್ ಒಟಿಟಿ ಕನ್ನಡ ಆವೃತ್ತಿಯು ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋನ ಮೂಲ ಸಾರವನ್ನು ಉಳಿಸಿಕೊಂಡು ಸಕ್ರಿಯ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಕಾರ್ಯಕ್ರಮದ ಅಭಿಮಾನಿಗಳನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಲಿದೆ.
Comments are closed.