ಉಡುಪಿ: ಮಲ್ಪೆಯಿಂದ ಎಂಟು ಜನರ ತಂಡ ಮಲ್ಪೆಯಿಂದ ಮೀನುಗಾರಿಕೆ ನಡೆಸಲು ಮಲ್ಪೆಯಿಂದ ಒಂದು ಕಿಲೊಮೀಟರ್ ಪ್ರಯಾಣಿಸಿದಾಗ ಬಾರಿ ಸಮುದ್ರದ ಅಲೆಗಳಿಂದ ಬೋಟ್ ಮುಳುಗಡೆ ಯಾಗಿದೆ ಬೋಟಿನಲ್ಲಿ ಇದ್ದ ಎಂಟು ಜನರನ್ನು ಇನ್ನೊಂದು ಬೋಟಿನವರು ಕಾಪಾಡಿದ್ದಾರೆ. ಬೋಟ್ ಚಾಲಕ ಭಟ್ಕಳದ ಅಳ್ವೇಕೊಡಿ ನಿವಾಸಿ ಗಣಪತಿ ಮಂಜುನಾಥ್ ಮೋಗೆರ ತುಳಸಿ ಮನೆ ಸಣ್ಣಬಾವಿ ಎಂದು ತಿಳಿದುಬಂದಿದೆ.
ಭಾರೀ ಮಳೆಯಿಂದಾಗಿ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಭಟ್ಕಳ- ಗಂಗೊಳ್ಳಿ ನಡುವೆ ಎರಡು ಮೀನುಗಾರಿಕಾ ಬೋಟುಗಳು ಮುಳುಗಡೆಯಾಗಿವೆ. ನಿನ್ನೆ ಬೆಳಗ್ಗೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಶಿವ ಗಣೇಶ ಹೆಸರಿನ ಬೋಟು ಮುಳುಗಡೆಯಾಗಿದೆ. ಮಲ್ಪೆ ನಿವಾಸಿ ನಾರಾಯಣ ಅಮಿನ್ ಎಂಬವರಿಗೆ ಸೇರಿದ ಬೋಟು ಇದಾಗಿದೆ. ಬೋಟುನಲ್ಲಿದ್ದ ಭಟ್ಕಳ ಮೂಲದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಇನ್ನು ಬೋಟಿನಲ್ಲಿ ರಂಧ್ರವಿದ್ದುದರಿಂದ ಇಂದು ಬೆಳಗ್ಗೆ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಹೆಸರಿನ ಬೋಟ್ ಕೂಡಾ ಮುಳುಗಡೆಯಾಗಿದೆ. ಈ ವೇಳೆ ಬೋಟುನಲ್ಲಿದ್ದ 8 ಮಂದಿ ಮೀನುಗಾರರನ್ನು, ಭಜರಂಗಿ ಹೆಸರಿನ ಬೋಟಿನ ಮೀನುಗಾರರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
Comments are closed.