ಕನ್ನಡ ವಾರ್ತೆಗಳು

ಕುಂದಾಪುರ: ಮೃತ್ಯುಕೂಪವಾದ ಮದಗ; ಕಾಲು ಜಾರಿ ಮದಗಕ್ಕೆ ಬಿದ್ದು ಪಿಯುಸಿ ವಿದ್ಯಾರ್ಥಿ ಸಾವು

Pinterest LinkedIn Tumblr

ಕುಂದಾಪುರ: ಅಪಾಯಕಾರಿ ಮದಗಕ್ಕೆ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ಸಮೀಪದ ಮಾವಿನಕೆರೆ ಎಂಬಲ್ಲಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.

ಮಾವಿನಕೆರೆ ನಿವಾಸಿ ಮುತ್ತಯ್ಯ ದೇವಾಡಿಗ ಹಾಗೂ ಲಲಿತಾ ದಂಪತಿಗಳ ಪುತ್ರ ರಜಿತ್ ದೇವಾಡಿಗ (17) ಮದಗಕ್ಕೆ ಬಿದ್ದು ಮೃತಪಟ್ಟವನು. ಈತ ಕುಂದಾಪುರ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ.

Kenchanooru_Rajith Devadiga_Death (20) Kenchanooru_Rajith Devadiga_Death (21) Kenchanooru_Rajith Devadiga_Death (24) Kenchanooru_Rajith Devadiga_Death (23) Kenchanooru_Rajith Devadiga_Death (22) Kenchanooru_Rajith Devadiga_Death (17) Kenchanooru_Rajith Devadiga_Death (18) Kenchanooru_Rajith Devadiga_Death (16) Kenchanooru_Rajith Devadiga_Death (14) Kenchanooru_Rajith Devadiga_Death (15) Kenchanooru_Rajith Devadiga_Death (13) Kenchanooru_Rajith Devadiga_Death (8) Kenchanooru_Rajith Devadiga_Death (11) Kenchanooru_Rajith Devadiga_Death (12) Kenchanooru_Rajith Devadiga_Death (7) Kenchanooru_Rajith Devadiga_Death (9) Kenchanooru_Rajith Devadiga_Death (5) Kenchanooru_Rajith Devadiga_Death (6) Kenchanooru_Rajith Devadiga_Death (10) Kenchanooru_Rajith Devadiga_Death (4) Kenchanooru_Rajith Devadiga_Death Kenchanooru_Rajith Devadiga_Death (2) Kenchanooru_Rajith Devadiga_Death (3) Kenchanooru_Rajith Devadiga_Death (19)

ಘಟನೆ ವಿವರ: ತನ್ನ ತಂದೆಯ ಮನೆಯಾದ ಕೆಂಚನೂರು ಸಮೀಪದ ಮಾವಿನಕೆರೆಯಲ್ಲಿ ವಾಸವಿದ್ದ ರಜಿತ್ ಇಲ್ಲಿಂದಲೇ ಕುಂದಾಪುರದ ಜ್ಯೂನಿಯರ್ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಮನೆಯಲ್ಲಿಯೇ ಇದ ಈತ ಮಧ್ಯಾಹ್ನದ ಸುಮಾರಿಗೆ ಮನೆ ಸಮೀಪದಲ್ಲಿ ಬಂದ ದನಗಳನ್ನು ಓಡಿಸಲು ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಮದಗಕ್ಕೆ ಬಿದ್ದಿದ್ದು ಯಾವುದೇ ರಕ್ಷಣಾ ಬೇಲಿಗಳಿಲ್ಲದ ಈ ಮದಗವು ಆಳವಿದ್ದು ಈತನಿಗೆ ಈಜಲು ಬಾರದ ಕಾರಣ ಮದಗದ ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ರಜಿತ್ ತುಂಬಾ ಸಮಯದ ಬಳಿಕವಾದರೂ ಮನೆಗೆ ಬಾರದ ಕಾರಣ ಮನೆಯವರು ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ್ದು ಮದಗಕ್ಕೆ ಬಿದ್ದಿರಬಹುದಾದ ಶಂಕೆಯಲ್ಲಿ ಕುಂದಾಪುರ ಅಗ್ನಿಶಾಮಕ ದಳಕ್ಕೂ ಹಾಗೂ ಕುಂದಾಪುರ ಪೊಲೀಸರಿಗೂ ಮಾಹಿತಿ ನೀಡುತ್ತಾರೆ. ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಮದಗದಲ್ಲಿ ಸತತ ಹುಡುಕಾಟ ನಡೆಸಿದ್ದು ಸತತ ಶೋಧ ಕಾರ್ಯಾಚರಣೆ ಬಳಿಕ ಮದಗದಲ್ಲಿ ರಜಿತ್ ಶವ ಪತ್ತೆಯಾಗಿದೆ.

ಬಡತನದ ಕುಟುಂಬ: ಇವರದ್ದು ತೀರಾ ಬಡಕುಟುಂಬವಾಗಿದ್ದು ರಜಿತ್ ದೇವಾಡಿಗ ಅವರ ತಂದೆ ಮುತ್ತಯ್ಯ ದೇವಾಡಿಗ ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು ತಾಯಿ ಲಲಿತಾ ಹಾಗೂ ಸಹೋದರಿಯೋರ್ವಳು ಆಲೂರಿನ ಅಜ್ಜಿಮನೆಯಲ್ಲಿ ವಾಸವಿದ್ದರು. ಉನ್ನತ ವಿದ್ಯಾಭ್ಯಾಸದ ಆಸೆ ಹೊತ್ತಿದ್ದ ರಜಿತ್ ತನ್ನ ತಂದೆ ಮನೆ ಮಾವಿನಕೆರೆಯಲ್ಲಿಯೇ ಕೆಲವು ವರ್ಷಗಳಿಂದ ವಾಸವಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದ. ಅಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಯೂ ಆಗಿದ್ದ ಎಂದು ‘ಕನ್ನಡಿಗ ವರ್ಲ್ಡ್’ಗೆ ಕುಟುಂಬ ಮೂಲಗಳು ತಿಳಿಸಿದೆ.

ಮುಗಿಲು ಮುಟ್ಟಿದ ಆಕ್ರಂಧನ: ಮನೆಮಗನ ಅಗಲುವಿಕೆಯಿಂದ ಮನೆಯವರ ಆಕ್ರಂಧನ ಮುಗಿಲುಮುಟ್ಟಿದ್ದು, ತಾಯಿ, ಸಹೋದರಿ ಸೇರಿದಂತೆ ಕುಟುಂಬಿಕರು ಗೋಳಾಡುವ ಪರಿ ನೆರೆದವರ ಮನಕಲಕುವಂತಿತ್ತು.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

 

Write A Comment