ಕನ್ನಡ ವಾರ್ತೆಗಳು

ಕುಂದಾಪುರ: ಬಿದಿರು ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಕೊಲೆ ಮಾಡಿ ಎಸೆದ ಶಂಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿ ಸೀತಾನದಿ ಸಮೀಪದ ಬಿದಿರು ಪೊದೆಯಲ್ಲಿ ಮಹಿಳೆಯೋರ್ವಳ ಕೊಳೆತ ಸ್ಥಿತಿಯಲ್ಲಿರುವ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೇಲ್ನೋಟಕ್ಕೆ ಯಾರೋ ಕೊಲೆ ಮಾಡಿ ಎಸೆದಿರಬಹುದೆಂದು ಅಂದಾಜಿಸಲಾಗಿದೆ.

ಅಂದಾಜು 28-30 ವರ್ಷ ಪ್ರಾಯದ ಹೆಂಗಸಿನ ಶವ ಇದಾಗಿದ್ದು ನೈಟಿ ಧರಿಸಿದ ಸ್ಥಿತಿಯಲ್ಲಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ನಾಲ್ಕೈದು ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ.

Kndpr_Belve_Lady Murder suspect (2) Kndpr_Belve_Lady Murder suspect (1) Kndpr_Belve_Lady Murder suspect (3) Kndpr_Belve_Lady Murder suspect (4) Kndpr_Belve_Lady Murder suspect (17) Kndpr_Belve_Lady Murder suspect (10) Kndpr_Belve_Lady Murder suspect (11) Kndpr_Belve_Lady Murder suspect (12) Kndpr_Belve_Lady Murder suspect (13) Kndpr_Belve_Lady Murder suspect (14) Kndpr_Belve_Lady Murder suspect (16) Kndpr_Belve_Lady Murder suspect (15) Kndpr_Belve_Lady Murder suspect (7) Kndpr_Belve_Lady Murder suspect (8) Kndpr_Belve_Lady Murder suspect (9) Kndpr_Belve_Lady Murder suspect (5) Kndpr_Belve_Lady Murder suspect (6)

ಬೆಳ್ವೆಯಿಂದ ಗುಮ್ಮೊಲ ರಸ್ತೆಯಲ್ಲಿ ಮೂರು ಕಿ.ಮೀ. ಸಾಗಿದಾಗ ಸೀತಾನದಿ ಸಿಗುತ್ತದೆ. ಸಮೀಪದಲ್ಲಿ ವಿಶ್ವನಾಥ ನಾಯ್ಕ್ ಎನ್ನುವವರ ತೋಟವಿದ್ದು ಅಲ್ಲಿ ಬಿದಿರು ಪೊದೆಗಳಿವೆ. ಸೋಮವಾರ ಮಧ್ಯಾಹ್ನದ ಸುಮಾರಿಗೆ ಸ್ಥಳೀಯ ಯುವಕನೋರ್ವ ಪಂಪು ಶೆಡ್ಡಿಗೆ ಬಂದ ಸಂದರ್ಭ ನಾಯಿಯೊಂದು ಕೂಗಾಡುತ್ತಾ ಏನನ್ನೋ ಎಳೆಯುತ್ತಿರುವುದನ್ನು ಗಮನಿಸಿದ್ದು ವಿಪರೀತ ವಾಸನೆಯಿತ್ತು ಎನ್ನಲಾಗಿದೆ, ಯುವಕ ಪರಿಕ್ಷಿಸಿದಾಗ ಇದೊಂದು ಶವವೆಂದು ಖಾತ್ರಿಯಾಗಿದ್ದು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಸಂದರ್ಭ ಮಹಿಳೆಯ ಶವವೆಂದು ತಿಳಿಯುತ್ತದೆ.

ಶವ ಸ್ಥಳದಲ್ಲಿ ನಾಲ್ಕೈದು ದಿನಗಳಿಂದಲೂ ಇದ್ದ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು ಒಂದು ಕಾಲನ್ನು ಪ್ರಾಣಿಗಳು ತಿಂದಿದೆ, ಮುಖದ ಭಾಗ ಸಂಪೂರ್ಣ ಕೊಳೆತಿದ್ದು ಗುರುತು ಹಿಡಿಯುವುದು ಅಸಾಧ್ಯವಾಗಿದೆ.

ಕೊಲೆಯಾಗಿತ್ತೇ?: ಯಾರೋ ಕೊಲೆ ಮಾಡಿ ಬಳಿಕ ಶವವನ್ನು ತಂದು ಪೊದೆಯಲ್ಲಿ ಎಸೆದಿರಬಹುದೆಂದು ಸ್ಥಳಿಯರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೇ ಗುಮ್ಮೊಲು ಪ್ರದೇಶದ ಈ ಶವ ದೊರೆತ ಸ್ಥಳದಿಂದ ಅರ್ಧ ಕಿ.ಮೀ. ದೂರದವೆಗೂ ಕಾಲು ಹಾದಿಯಿದ್ದು ಯಾವುದೇ ವಾಹನಗಳು ತೆರಳಲು ಅಸಾಧ್ಯವಿದ್ದು ಈ ಭಾಗದಿಂದ ಶವವನ್ನು ಕೊಂಡೊಯ್ಯುವ ಸಾಧ್ಯತೆಯೂ ಕಡಿಮೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಾರೆ, ಆದರೇ ಸೀತಾನದಿಯ ಇನ್ನೊಂದು ಭಾಗವಾದ ನೆಂಚಾರು ಕಡೆಯಿಂದ ಹೊಳೆ ಮಾರ್ಗವಾಗಿ ರಾತ್ರಿ ವೇಳೆ ಶವವನ್ನು ಯಾರೋ ತಂದು ಎಸೆದಿರಬಹುದೆಂಬ ದಟ್ಟ ಸಂಶಯವನ್ನು ಸ್ಥಳಿಯರು ಹೊರಹಾಕಿದ್ದಾರೆ. ಇದಕೆ ಊರಕವಾಗಿ ಹೊಳೆಯಲ್ಲಿ ಆ ದಡದಿಂದ ಈ ದಡಕೆ ಬರಲು ಸಾಧ್ಯವಿದೆ.

ಅಕ್ರಮ ಚಟುವಟಿಕೆ ತಾಣ?
ಕೊಲೆ ನಡೆದ ಪ್ರದೇಶದಲಿ ಸೀತಾನದಿ ಹರಿಯುತ್ತಿದ್ದು ಬಂಡೆಕಲ್ಲುಗಳು ಆವ್ರತಗೊಂಡು ಮನಮೋಹಕ ಪ್ರದೇಶವಾಗಿದೆ. ಕೆಲವರು ಇಲ್ಲಿಯೇ ಬಂದು ಅಡುಗೆ ತಯಾರಿಸಿ ಮದ್ಯ ಸೇವಿಸಿದ ಕುರುಹುಗಳು ಕಂಡುಬರುತ್ತಿದ್ದು ಇದೊಂದು ಅವ್ಯವಸ್ಥಿತ ಅಕ್ರಮಗಳ ಚಟುವಟಿಕೆಗಳ ಆಗರವೇ ಎಂಬ ಸಂಶಯ ದಟ್ಟವಾಗಿದೆ.

ಇನ್ನು ಸ್ಥಳೀಯ ಭಾಗದಲ್ಲಿ ಯಾವುದೇ ಮಹಿಳೆ ನಾಪತ್ತೆಯಾಗಿರುವ ಪ್ರಕರಣವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೇಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ.

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಗಿದೆ.

Write A Comment