ಕನ್ನಡ ವಾರ್ತೆಗಳು

ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆ ಉದ್ಘಾಟನೆ.

Pinterest LinkedIn Tumblr

aloysius_kannada_wikipidiya_1

ಮಂಗಳೂರು,ಫೆ.14 : ನಗರದ ಸಂತ ಅಲೋಶಿಯಸ್ ಕಾಲೇಜ್‌ನ ಸೆಂಟರ್ ಪಾರ್ ಇಂಟರ್ ನೆಟ್ ಆಂಡ್ ಸೊಸೈಟಿ, ಕನ್ನಡ ವಿಕಿಪೀಡಿಯ ಸಮುದಾಯ ಹಾಗೂ ಕನ್ನಡ ವಿಭಾಗ ಇದರ ಸಹಭಾಗಿತ್ವದಲ್ಲಿ ಕನ್ನಡ ವಿಕಿಪೀಡಿಯ 13ನೇ ವರ್ಷಾಚರಣೆ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ನಡೆಯಿತು.

ನಾಡೋಜ ಕೆ.ಪಿ.ರಾವ್ ರವಾರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತು ಇಂಗೀಷ್ ತಿಳಿಯದ ಜನತೆಗೆ ಇಂಗ್ಲೀಷ್ ವಿಕಿಪೀಡಿಯಾದ ಮಾಹಿತಿಗಳು ಅರ್ಥವಾಗುವುದಿಲ್ಲ. ಅದಕ್ಕಾಗಿ ಈ ಕನ್ನಡದಲ್ಲಿ ವಿಕಿಪೀಡಿಯ ಆರಂಭವಾಯ್ತು. ಇದರ ಉಪಯೋಗದಿಂದ ಪ್ರತಿಯೊಬ್ಬರು ಕಷ್ಟಕರವಾದ ಅಥವಾ ಅರ್ಥವಾಗದ ಶಬ್ದಗಳನ್ನು ಕನ್ನಡದಲ್ಲಿ ಅರ್ಥಪೂರ್ಣವಾಗಿ ತಿಳಿಯಲು ಈ ಕನ್ನಡ ವಿಕಿಪೀಡಿಯಾ ಸಹಕಾರಿಯಾಗಿದೆ ಎಂದು ಹೇಳಿದರು.

aloysius_kannada_wikipidiya_2 aloysius_kannada_wikipidiya_3 aloysius_kannada_wikipidiya_4 aloysius_kannada_wikipidiya_5 aloysius_kannada_wikipidiya_7 aloysius_kannada_wikipidiya_8 aloysius_kannada_wikipidiya_9 aloysius_kannada_wikipidiye_6

ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಸಿಲ್ವಾ, ಪ್ರಭಾಕರ್ ಎನ್. ಶರ್ಮಾ, ಡಾ.ವಿಶ್ವನಾಥ ಬದಿಖಾನ, ಯು.ಪಿ.ಪವನಜ, ಸರಸ್ವತಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment