ಅಂತರಾಷ್ಟ್ರೀಯ

ವೈಜ್ಞಾನಿಕ ಲೋಕದ ರತ್ನ ಮಾಜಿ ರಾಷ್ಟ್ರಪತಿ ಯವರ ಅಕಾಲಿಕ ಮರಣಕ್ಕೆ ಕೆ ಐ ಸಿ ಕೇಂದ್ರ ಸಮಿತಿ ಸಂತಾಪ

Pinterest LinkedIn Tumblr

kalam1

ಮಿಸೈಲ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಜನಸಾಮಾನ್ಯರ ಜೊತೆ ಬೆರೆತು, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಓರ್ವ ಸರಳ ಬದುಕಿನ ಅಸಾಮಾನ್ಯ ವ್ಯಕ್ತಿತ್ವ ಭಾರತ ದೇಶ ವಿಶಿಷ್ಠ ವ್ಯಕ್ತಿ ಅಬ್ದುಲ್ ಕಲಾಂ ರವರು ಜುಲೈ 21 ರಂದು ಸಂಜೆ ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ನೀಡುತ್ತಿದ್ದ ಸಂಧರ್ಭದಲ್ಲಿ ಏಕಾಏಕಿ ಕುಸಿದು ಬಿದ್ದು ಅವರ ಆರೋಗ್ಯದಲ್ಲಿ ಕಂಡು ಬಂದು ತೀವ್ರ ವ್ಯತ್ಯಾಸ ದಿಂದಾಗಿ ಶಿಲ್ಲಾಂಗ್ ನ ಬೆಥೇನಿ ಆಸ್ಪತ್ರೆಯಲ್ಲಿ ನಮ್ಮೆಲ್ಲರನ್ನೂ ಅಗಲಿದ್ದು ಅವರ ಅಗಳುವಿಕೆಯು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಈ ಮೂಲಕ ಸಂತಾಪ ವ್ಯಕ್ತ ಪಡಿಸಿದೆ . ಶಿಕ್ಷಣಕ್ಕೆ ಅತೀ ಹೆಚ್ಚ್ಹಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಅವರು ವಿಧ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸುತ್ತಾ ವಿಧ್ಯಾರ್ಥಿಜೀವನದಲ್ಲಿ ಆತ್ಮ ಸ್ಥೈರ್ಯವನ್ನು ತುಂಬುತ್ತಿದ್ದರು.

1931ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿದ ಇವರು ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳನ್ನೂ ನಿಭಾಯಿಸಿ ಯುವ ಜನಾಂಗದಲ್ಲಿ ಸ್ಪೂರ್ತಿಯನ್ನು ಬೆಳೆಸಿದ ಓರ್ವ ವಿಶಿಷ್ಟ ವ್ಯಕ್ತಿತ್ವದವರಾಗಿದ್ದರು. ಜುಲೈ 22, 2002ರಂದು ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಇವರು ಲೇಖಕರಾಗಿದ್ದು ಹಲವಾರು ಕೃತಿಗಳನ್ನು ರಚಿಸಿರುತ್ತಾರೆ. 2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿರ ರಾಷ್ಟ್ರವಾಗಿ ಮಾಡಬೇಕು ಎಂಬ ಕನಸನ್ನು ಹೊಂದಿದ್ದ ಅವರು ಯುವ ಜನಾಂಗವನ್ನು ಆ ನಿಟ್ಟಿನಲ್ಲಿ ಪ್ರೇರೇಪಿಸುತ್ತಾ ಬಂದಿದ್ದರು. ಇಂತಹ ವಿಶಿಷ್ಠ ವ್ಯಕ್ತಿತ್ವವು ಇಂದು ನಮ್ಮನ್ನು ಅಗಲಿದ್ದು ಅವರ ಮರಣಕ್ಕೆ ಕೆ ಐ ಸಿ ಕೇಂದ್ರ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸಿದೆ. ಅವರ ಸೇವೆ , ಜ್ಞಾಣ ಭಂಡಾರ , ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವಕ್ಕೆ ಸಮಿತಿ ಪಧಾಧಿಕಾರಿಗಳು ಗೌರವವನ್ನು ಸೂಚಿಸಿದ್ದು ಯುವ ಜನಾಂಗವು ಕಲಾಂ ರವರ ಆಶಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗಾಗಿ ಪ್ರಯತ್ನಿಸುವಂತೆ ಕರೆ ನೀಡಿದೆ.

Write A Comment