ರಾಷ್ಟ್ರೀಯ

ಸುಳ್ಳು ಆರೋಪ, ಪಿತೂರಿ ಸಂಜೀವ್ ಭಟ್ ಪ್ರತಿಕ್ರಿಯೆ

Pinterest LinkedIn Tumblr

SANJIV_BHATT

ನವದೆಹಲಿ, ಆ.20: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಡಿಯೋ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪಿತೂರಿ ನಡೆಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನನಗೆ ವಜಾ ಆದೇಶ ಸಿಕ್ಕಿದೆ ಎಂದು ಸ್ವತಃ ಸಂಜೀವ್ ಭಟ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ 27 ವರ್ಷಗಳ ಸೇವೆಯನ್ನು ನಾನು ಸಂತೋಷದಿಂದ ನಡೆಸಿದ್ದೇನೆ. ಹಾಲಿ ಸರ್ಕಾರ ಕಪೋಲಕಲ್ಪಿತ ಆರೋಪಗಳ ಬಗ್ಗೆ ನೆಪ ಮಾತ್ರದ ತನಿಖೆ ನಡೆಸಿ, ಅನಧಿಕೃತ ಗೈರು ಹಾಜರಾದ ಆರೋಪ ಹೊರಿಸಿ ಕರ್ತವ್ಯದಿಂದ ಬಿಡುಗಡೆ ಮಾಡಿದೆ ಎಂದು ಸಂಜೀವ್ ಭಟ್ ಬರೆದುಕೊಂಡಿದ್ದಾರೆ.

ಜುನಾಗಢದಲ್ಲಿ ಕಾಱ್ಯ ನಿರ್ವಹಿಸುತ್ತಿದ್ದಾಗ ಸೂಚನೆಯಿಲ್ಲದೆ ಸೇವೆಗೆ ಗೈರು ಹಾಜರಾಗಿದ್ದಕ್ಕಾಗಿ ಹಾಗೂ ಕಚೇರಿ ವಾಹನಗಳ ದುರ್ಬಳಕೆ ಆರೋಪದ ಮೇಲೆ ಅವರನ್ನು 2011ರಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ತಾಯಿಯ ಅನಾರೋಗ್ಯ ಕಾರಣ ಒಡ್ಡಿ ತಾವು ಗೈರು ಹಾಜರಿಯಾದುದಾಗಿ ಭಟ್ ಹೇಳಿಕೊಂಡಿದ್ದರು.

2002ರ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾವತಿ ಆಯೋಗದೆದುರು ಹಾಜರಾಗಲು ತಾವು ಅಹ್ಮದಾಬಾದ್‌ನಲ್ಲಿರುವುದು ಅವಶ್ಯವೆಂದೂ ಹೇಳಿಕೊಂಡಿದ್ದರು. ಆದರೆ ಇದೀಗ ಅವರನ್ನು ಕಳೆದ ವರ್ಷದ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ವಜಾ ಮಾ‌ಡಲಾಗಿದೆ.

Write A Comment