ರಾಷ್ಟ್ರೀಯ

ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸ್ತೀರಾ? ದೇವಬಂದ್

Pinterest LinkedIn Tumblr

-madrassasನವದೆಹಲಿ:ಗಣರಾಜ್ಯೋತ್ಸವದಂದು ಭಾರತದಲ್ಲಿರುವ ಮದರಸಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಆರ್ ಎಸ್ ಎಸ್ ನ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್ ಎಂ)ಮನವಿ ಮಾಡಿಕೊಂಡಿದೆ. ಅದಕ್ಕೆ ಪ್ರತಿಯಾಗಿ ದಾರೂಲ್ ಉಲೇಮಾ ದೇವಬಂದ್, ನಾಗಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಜನವರಿ 26ರಂದು ಮದರಸಾದ ಮೇಲೆ ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಕುರಿತಂತೆ ಮನವೊಲಿಸುವ ನಿಟ್ಟಿನಲ್ಲಿ ಆರ್ ಎಸ್ ಎಸ್ ನ ಮುಸ್ಲಿಮ್ ರಾಷ್ಟ್ರೀಯ ಮಂಚ್ ದೇಶಾದ್ಯಂತ ಪ್ರಚಾರಕಾರ್ಯ ಹಮ್ಮಿಕೊಂಡಿರುವುದಾಗಿ ತಿಳಿಸಿದೆ.

ಈ ಪ್ರಚಾರ ಕಾರ್ಯಕ್ಕೆ ಝಂಡಾ ಫಲಾನಿ ಎಂದು ಹೆಸರಿಡಲಾಗಿದೆ. ದೇಶಾದ್ಯಂತ ಈ ಬಗ್ಗೆ ಪ್ರಚಾರ ಕೈಗೊಳ್ಳಲಾಗುವುದು ಎಂದು ಎಂಆರ್ ಎಂನ ಉತ್ತರಪ್ರದೇಶದ ಸಹ ಸಂಚಾಲಕ ಮೆರಾಜಿಧ್ವಜ್ ಸಿಂಗ್ ಹೇಳಿರುವುದಾಗಿ ವರದಿ ವಿವರಿಸಿದೆ.

ಆರ್ ಎಸ್ ಎಸ್ ಕೇಂದ್ರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸ್ತೀರಾ?:ದಾರೂಲ್ ಪ್ರಶ್ನೆ
ನಾಗಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿ ಮೇಲೆ ಅಥವಾ ಆರ್ ಎಸ್ ಎಸ್ ಶಾಖೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೀರಾ ಎಂದು ದಾರೂಲ್ ಉಲೂಮ್ ದೇವಬಂದ್ ನ ಮಾಧ್ಯಮ ಕಾರ್ಯದರ್ಶಿ ಮೌಲಾನಾ ಅಶ್ರಫ್ ಉಸ್ಮಾನಿ ಪ್ರಶ್ನಿಸಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಸೈದ್ಧಾಂತಿಕವಾಗಿ ರಾಷ್ಟ್ರಗೀತೆಯನ್ನು ಒಪ್ಪುತ್ತದೆಯೇ ಎಂದು ತಿರುಗೇಟು ನೀಡಿದ್ದಾರೆ.
-ಉದಯವಾಣಿ

1 Comment

  1. Srihari srinivasacharya

    Sir..Very much you can see try colour flag honest on RSS karyalaya on Independence day & republic day.. Swayam sevaks are bound to integrity our nation…

Write A Comment